4:07 PM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಹೆಚ್ಚುತ್ತಿರುವ ಹೃದ್ರೋಗ: ಆತಂಕ ರಹಿತ ಸಹಜ ಜೀವನಕ್ಕೆ ಏನೆಲ್ಲ ಮಾಡಬೇಕು?; ಡಾ. ಭವ್ಯ ಶೆಟ್ಟಿ ಬರೆಯುತ್ತಾರೆ

12/02/2022, 11:39

ಹೃದ್ರೋಗ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಆಘಾತಕಾರಿ ಪ್ರಮಾಣದಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಯುವಕರು ಹಾಗೂ ಮದ್ಯವಯಸ್ಕರು ಬಲಿಯಾಗುತ್ತಿರುವುದನ್ನು ಗಮನಿಸಿರಬಹುದು. ಇನ್ನೂ ಹಲವರು ಕೊರೊನರಿ ಆಂಜಿಯೋಗ್ರಾಫಿ, ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಸರ್ಜರಿಗೆ ಒಳಗಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಾ ಇರುವವರನ್ನು ಕಾಣಬಹುದು. ಇಂತಹವರು ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯ. ತಮ್ಮ ಜೀವನ ಶೈಲಿ ಹಾಗೂ ಆಹಾರದಲ್ಲಿ ಈ  ಕೆಳಗೆ ತಿಳಿಸಿದ ನಾಲ್ಕು ಅಂಶಗಳನ್ನು ಪಾಲಿಸಿಕೊಂಡು ಬಂದಲ್ಲಿ ಎಲ್ಲರಂತೆ ಆತಂಕ ರಹಿತ  ಸಹಜ ಜೀವನ ನಡೆಸುವುದರಲ್ಲಿ ಸಂಶಯವಿಲ್ಲ.

1)ವ್ಯಾಯಾಮ

*ಪ್ರತೀದಿನ 30 ನಿಮಿಷ  ಸಮತಟ್ಟು ಜಾಗದಲ್ಲಿ  ಚುರುಕಾಗಿ ನಡೆಯುವುದು ಹೃದ್ರೋಗಕ್ಕೆ ಅತ್ಯುತ್ತಮ ವ್ಯಾಯಾಮವಾಗಿದೆ.

*ಮಾಂಸಖಂಡದ ಸ್ಟ್ರಚಿಂಗ್, ರಿಲಾಕ್ಸಿಂಗ್ ಮಾಡುವ ಕೆಲವೊಂದು  ಯೋಗಸನಗಳನ್ನು  ನುರಿತ ಯೋಗ ಶಿಕ್ಷಕರು ಹಾಗು ವೈದ್ಯರ ಸಲಹೆ ಪಡೆದು ಅಭ್ಯಾಸಿಸುವುದು.

*ಪ್ರಾಣಯಾಮ -5 ಸೆಕೆಂಡ್  ಉಶ್ವಾಸ  8 ಸೆಕೆಂಡ್ಗಳ ಕಾಲ ನಿಶ್ವಾಸ, ಪ್ರತೀದಿನ 10ನಿಮಿಷಗಳವರೆಗೆ ಮಾಡುವುದು.

2)ಒತ್ತಡ ನಿರ್ವಹಣೆ

* ಪ್ರತೀ ದಿನ 15 ನಿಮಿಷ ಧ್ಯಾನ ಮಾಡುವುದು ಒತ್ತಡ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಧನಾತ್ಮಕ ಚಿಂತನೆಯನ್ನು ವೃದ್ಧಿಸುತ್ತದೆ.

3)ಆಹಾರ

ಕೊಬ್ಬಿನಾಂಶವನ್ನು ನಿಯಂತ್ರಣದಲ್ಲಿ ಇಡುವುದು.

LDL 130mg% ಗಿಂತ ಕಡಿಮೆ ಹಾಗು HDL ನ ಪ್ರಮಾಣ ಶೇಕಡಾ 45 mg ಗಿಂತ ಜಾಸ್ತಿ ಇರುವಂತೆ ನೋಡಿಕೊಳ್ಳುವುದು ಉತ್ತಮ.

*ಡಾಲ್ದಾ, ವನಸ್ಪತಿ,ಎಣ್ಣೆಯಲ್ಲಿ ಕರಿದ ಆಹಾರ, ಚಿಪ್ಸ್, ಕೆಂಪು ಮಾಂಸಹಾರ ಸೇವನೆ ತ್ಯಜಿಸಬೇಕು.

 *ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಾರದು.

*ಅತಿಯಾದ ಟೀ – ಕಾಫಿ ಸೇವನೆ ಒಳ್ಳೆಯದಲ್ಲ.

*ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ ಹೊಂದಿರುವ ಆಹಾರ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿಸಬಹುದು.

*ಹಸಿರು ತರಕಾರಿ, ಹಣ್ಣು , ಸಲಾಡ್,  ಹಸಿಮೊಳಕೆ ಬರಿಸಿದ ಕಾಳು, ದ್ವಿದಳ ಧಾನ್ಯ, ಸಿಹಿಗುಂಬಳಕಾಯಿ, ಸ್ಪೀನಾಚ್, ಮೂಲಂಗಿ, ರೋಟಿ, ಕೆನೆ ತೆಗೆದ ಹಾಲು, ಮೊಟ್ಟೆಯ ಬಿಳಿಭಾಗ ಸೇವನೆ ಉತ್ತಮ.

*ಈರುಳ್ಳಿ, ಬೆಳ್ಳುಳ್ಳಿ, ಆಪಲ್ನ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟಿರೋಲ್ ಕಡಿಮೆಯಾಗುತ್ತದೆ.

4)ಕೆಟ್ಟ ಹವ್ಯಾಸಗಳಾದ ಮಧ್ಯಾಪಾನ, ಧೂಮಪಾನ ಹಾಗು ತಂಬಾಕು ಸೇವನೆ ತ್ಯಜಿಸುವುದು.

ಇದರೊಂದಿಗೆ ದೇಹದ ತೂಕವನ್ನು, ಮಧುಮೇಹ, ರಕ್ತದೋತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.

ಇಂತಹ  ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದಯದ ತೊಂದರೆಯಿಂದ ದೂರವಿರಿಸುವುದಲ್ಲದೆ, ಮಾನಸಿಕ ಹಾಗು ಶಾರೀರಿಕ ಆರೋಗ್ಯನ್ನು ಕಾಪಾಡಿ ನೆಮ್ಮದಿಯ ಜೀವನ ನಡೆಸಬಹುದು.

ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163

ಇತ್ತೀಚಿನ ಸುದ್ದಿ

ಜಾಹೀರಾತು