ಇತ್ತೀಚಿನ ಸುದ್ದಿ
ಹಲ್ಯಾಳ ಗ್ರಾಮದ ಯುವಕರಿಂದ ಕೃಷ್ಣಾ ನದಿ ಸ್ವಚ್ಛತೆ: ಸಾರ್ವಜನಿಕರಿಂದ ಶ್ಲಾಘನೆ
18/02/2022, 14:18
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಒಂದು ಕಡೆ ರಾಜ್ಯದಲ್ಲಿ ಹಿಜಾಬ್ /ಕೇಸರಿ ವಿವಾದ ತಲೆದೋರಿದರೆ, ಇನ್ನೊಂದು ಕಡೆ ಅಥಣಿ ತಾಲೂಕಿನ ಹಲ್ಯಾಳ ಯುವಕರು ಸ್ವಯಂ ಪ್ರೇರಣೆಯಿಂದ ಕೃಷ್ಣಾ ನದಿ ಸ್ವಚ್ಛತೆಗೆ ಮುಂದಾಗಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಹಲ್ಯಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರವ್ವ ಪರಸಪ್ಪ ಮಾದರ, ಅವರ ಮಗನಾದ ರಾಹುಲ್ ಪರಸಪ್ಪ, ಮಾದರ್ ಹಾಗೂ ವಿನೋದ್ ಅರ್ಜುನ್ ಕುರಣಿ, ಪುಂಡಲಿಕ್ ಚಂದ್ರಪ್ಪ ಮಾದರ ಅವರು ಸ್ವಯಂ ಪ್ರೇರಿತವಾಗಿ ನದಿ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಚಿಂಚಲಿ ಮಯಕ್ಕಾ ದೇವಿಯ ಜಾತ್ರೆ ನಿಮಿತ್ಯ ಸಾವಿರಾರು ಭಕ್ತಾದಿಗಳು ಮೊದಲು ಕೃಷ್ಣ ನದಿ ಪವಿತ್ರ ಸ್ನಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ತದನಂತರ ದೇವಿಯ ದರ್ಶನಕ್ಕೆ ಹೋಗುತ್ತಾರೆ. ಹೋದ ವರ್ಷ ಪ್ರವಾಹದಿಂದ ನದಿ ತೀರಕ್ಕೆ ಅಪಾರ ಪ್ರಮಾಣದಲ್ಲಿ ಮುಳ್ಳುಗಳು ತುಂಬಿ ಜನಗಳಿಗೆ ಸಮಸ್ಯೆ ಆಗುವುದನ್ನು ಅರಿತು ಖುದ್ದಾಗಿ ಗೆಳೆಯರೊಂದಿಗೆ ನದಿ ಸ್ವಚ್ಛತೆ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.