6:49 AM Sunday6 - October 2024
ಬ್ರೇಕಿಂಗ್ ನ್ಯೂಸ್
ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ

ಇತ್ತೀಚಿನ ಸುದ್ದಿ

ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ ಒಂದೇ ಕುಟುಂಬದ 4 ಮಂದಿ ದಾರುಣ ಸಾವು

30/09/2024, 21:55

ಕಾರ್ಕಳ(reporterkarnataka.com): ಕಾರ್ಕಳ- ಧರ್ಮಸ್ಳಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ  ಕೋಟಿಚೆನ್ನಯ್ಯರ ಬಾವಿಯ ಸಮೀಪ ಈಚರ್ ಲಾರಿ ಮತ್ತು ಬೈಕ್ ಮಧ್ಯೆ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸಹಿತ ಒಂದೇ ಕುಟುಂಬದ 4 ಮಂದಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸುರೇಶ್ ಅಚಾರ್ಯ  ಹಾಗೂ ಕುಟುಂಬ ಬೈಕಿನಲ್ಲಿ  ವೇಣೂರಿನಿಂದ ಕಾರ್ಕಳದತ್ತ ಪ್ರಯಾಣಿಸುತ್ತಿದ್ದ ವೇಳೆ    ಈಚರ್  ಕ್ಯಾಂಟರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಈಚರ್ ಕ್ಯಾಂಟರ್ ಲಾರಿ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಸಾಗುತಿತ್ತು. ಬೈಕಿನಲ್ಲಿದ್ದ  ಸುರೇಶ್ ಆಚಾರ್ಯ (36)ಸಮೀಕ್ಷಾ (7) ಸುಶ್ಮಿತಾ( ,5) ಸುಶಾಂತ್ (2)  ಮೃತಪಟ್ಟ ವರು. ಅಪಘಾತ ತೀವ್ರತೆಗೆ ಸ್ಥಳದಲ್ಲೇ  ಸುರೇಶ್ ಆಚಾರ್ಯ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಒಂದು ಮಗು ಆಸ್ಪತ್ರೆ ಸಾಗಿಸುವ ವೇಳೆ ಅಸು ನೀಗಿದೆ. ಕಾರನ್ನು ಓವರ್ ಟೇಕ್ ಮಾಡುವ ವೇಳೆ  ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಲಾರಿ ಹಿಂಬದಿಗೆ  ಬೈಕ್  ಡಿಕ್ಕಿ ಹೊಡೆದಿದೆ.  ಎಂದು ಸ್ಥಳೀಯರು ತಿಳಿಸಿದ್ದಾರೆ
ಸುರೇಶ್ ಅವರ ಪತ್ನಿ ಮೀನಾಕ್ಷಿ( 32) ಗಂಭೀರ
ಗಾಯಗೊಂಡಿದ್ದು,ಉಡುಪಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ‌
ಸುರೇಶ್ ಆಚಾರ್ಯ ನಲ್ಲೂರಿನ ನಿವಾಸಿಯಾಗಿದ್ದು   ಕಮ್ಮಾರಿಕೆ ವೃತ್ತಿ ಮಾಡುತ್ತಿದ್ದರು .ವೇಣೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನಲ್ಲೂರು ತನ್ನ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
*ಓವರ್ ಸ್ಪೀಡ್ ಅಪಘಾತ ಕ್ಕೆ ಕಾರಣವಾಯಿತೆ?:*
ವೇಣೂರಿನಿಂದ ಮಹಾಲಯ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ಹಿಂದುಗಡೆಯಿಂದ  ಸಮೀಕ್ಷಾ,  ಸುಶ್ಮಿತಾ ಸುಶಾಂತ್  ಹಾಗೂ ಪತ್ನಿ ಮೀನಾಕ್ಷಿ ಜೊತೆಗೆ ಬ್ಯಾಗ್ ಅನ್ನು ಹಿಡಿದು ಕೊಂಡು  ಒಂದು ಮಗುವನ್ನು ಬೈಕಿನ ಮುಂಭಾಗದಲ್ಲಿ ಕುಳ್ಳಿರಿಸಿ ಕೊಂಡು  ಓವರ್ಸ್ಪೀಡ್ನಲ್ಲಿ ಬರುತ್ತಿದ್ದರು. ಕಾರನ್ನು ಓವರ್ ಟೇಕ್  ಮಾಡುವ ಸಂದರ್ಭದಲ್ಲಿ  ವೇಗವು ಹೆಚ್ಚಿದ್ದು ಎದುರಿನಲ್ಲಿ ಬರುತ್ತಿದ್ದ ಕ್ಯಾಂಟರ್ ಲಾರಿಯ  ಹಿಂಬಾಗಕ್ಕೆ ಬೈಕ್ ಢಿಕ್ಕಿ ಹೊಡೆದಿದೆ.
*ಅಪಾಯಕಾರಿ ತಿರುವು:* ಪಾಜೆಗುಡ್ಡೆ ರಸ್ತೆ ಅಪಾಯಕಾರಿ ತಿರುವು ಹಾಗೂ ಇಳಿಜಾರು ಪ್ರದೇಶ ವಾಗಿದೆ.   ಕಳೆದ ಐದು ವರ್ಷಗಳಲ್ಲಿ ಹದಿನೈದಕ್ಕೂ ಹೆಚ್ಚು  ಅಪಘಾತಗಳು ಸಂಭವಿಸಿದ್ದು ಹತ್ತು  ಜನರು ಮೃತಪಟ್ಟಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ ಕಾರ್ಕಳ  ಧರ್ಮಸ್ಥಳ ದ ಸಾಗುವ ರಾಜ್ಯ ಹೆದ್ದಾರಿ ಯ ಪಾಜೆಗುಡ್ಡೆ ಅಪಾಯಕಾರಿ  ತಿರುವನ್ನು   20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಗಲೀಕರಣ ಗೊಳಿಸಲಾಗಿತ್ತು. ಈ ರಸ್ತೆ ಅರಣ್ಯ ಪ್ರದೇಶ ವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು