6:25 PM Friday30 - January 2026
ಬ್ರೇಕಿಂಗ್ ನ್ಯೂಸ್
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್

ಇತ್ತೀಚಿನ ಸುದ್ದಿ

ದುಬೈ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅಡ್ಡೂರಿನ ಮುಹಮ್ಮದ್ ಅಹ್ನಾಫ್ ಹುಸೈನ್ ರಚಿಸಿದ “ದಿ ಹೀರೋಯಿಕ್ ಟೇಲ್ಸ್ ಆಫ್ ಅನ್ನಾ ಎಂಡ್ ಸಾರ” ಬಿಡುಗಡೆ

15/11/2024, 12:21

ಶಾರ್ಜಾ(reporterkarnataka.com): ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ 43ನೆಯ ಆವೃತ್ತಿಯಲ್ಲಿ ದ.ಕ. ಜಿಲ್ಲೆಯ ಅಡ್ಡೂರಿನ ಪ್ರಸಕ್ತ ದುಬೈಯಲ್ಲಿ ಉದ್ಯಮಿಯಾಗಿರುವ ಅನ್ವರ್ ಹುಸೈನ್ ಮತ್ತು ಶಹನಾಝ್ ದಂಪತಿಯ ಪುತ್ರನಾದ ದುಬೈಯ ಜೆಮ್ಸ್ ಮಿಲೆನಿಯಮ್ ಶಾಲೆಯಲ್ಲಿ  ಐದನೆಯ ತರಗತಿಯಲ್ಲಿ ಕಲಿಯುತ್ತಿರುವ ಮುಹಮ್ಮದ್ ಅಹ್ನಾಫ್ ಹುಸೈನ್ ಆಂಗ್ಗ ಭಾಷೆಯಲ್ಲಿ ರಚಿಸಿದ ಕೃತಿ ಕಥಾ ಸಂಕಲನ “ದಿ ಹೀರೋಯಿಕ್ ಟೇಲ್ಸ್ ಆಫ್ ಅನ್ನಾ ಎಂಡ್ ಸಾರ” ಬಿಡುಗಡೆಗೊಂಡಿತು. ಶಾರ್ಜಾದ ಉದ್ಯಮಿ ಪ್ರಮೋದ್ ಅವರು ಕೃತಿಯನ್ನು ಬಿಡುಗಡೆಗೊಳಿಸಿ ನೂರ್ ಅಶ್ಫಕ್ ಕಾರ್ಕಳ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೃತಿಯನ್ನು ಸ್ವೀಕರಿಸಿದ ನೂರ್ ಅಶ್ಫಕ್ ರವರು ಮಾತನಾಡಿ, ಇಂದಿನ ಯುವ ಪೀಳಿಗೆ ಸೊಶಿಯಲ್ ಮೀಡಿಯಾದಲ್ಲಿ ಮುಳುಗಿರುವಾಗ ಸಣ್ಣ ಪ್ರಾಯದ ಅಹ್ನಾಫ್ ರವರ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಕೃತಿಯನ್ನು ಬರೆದ ಅಹ್ನಾಫ್ ಮಾತನಾಡುತ್ತಾ ಪುಸ್ತಕಗಳನ್ನು ಓದುವ ಹವ್ಯಾಸ ಇದ್ದುದರಿಂದ ಕೆಲವೊಂದು ಪುಸ್ತಕಗಳಿಂದ ಪ್ರೇರಣೆ ಪಡೆದು ಈ ಕೃತಿಯನ್ನು ರಚಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು