6:32 PM Friday21 - March 2025
ಬ್ರೇಕಿಂಗ್ ನ್ಯೂಸ್
ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸ್ಪೀಕರ್ ಖಾದರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪ್ರತಿಪಕ್ಷದ… ಶಿವಮೊಗ್ಗ ಜನೌಷಧಿ ಕೇಂದ್ರದಲ್ಲಿ ಇತರ ಔಷಧಿ, ಮಾತ್ರೆಗಳ ಮಾರಾಟ: ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ… Minior Student Suicide | ಚಿಕ್ಕಮಗಳೂರು: ಫೇಲ್ ಆಗುವ ಭಯದಿಂದ 9ನೇ ತರಗತಿ… ಅಂಗನವಾಡಿ: 2011ರ ನಂತರ ನಿವೃತ್ತಿಯಾದವರಿಗೆ ಗ್ರ್ಯಾಚ್ಯುಟಿ; ಸಿಎಂ ಜೊತೆ ಚರ್ಚಿಸಿ ಕ್ರಮ: ಸಚಿವೆ… Legislative Council | ಜಲ‌ ಮತ್ತು ವಾಯು ಕಾಯ್ದೆ ಉಲ್ಲಂಘಿಸುವ ಕೈಗಾರಿಕೆಗಳ ವಿರುದ್ಧ… ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭ: ಮುಖ್ಯ ಕಾರ್ಯದರ್ಶಿ ಡಾ.… Primary Teachers | ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಪರಿಶೀಲನೆಗೆ ಅಧಿಕಾರಿಗಳ ಸಮಿತಿ… ಬೆಂಗಳೂರು: 20ರಿಂದ 4 ದಿನಗಳ ಕಾಲ ಲೇಸರ್ ಚಿಕಿತ್ಸೆ, ಸರ್ಜರಿ ಅಂತಾರಾಷ್ಟ್ರೀಯ ಸಮ್ಮೇಳನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ; ಬೇಡಿಕೆ… ರಾಜ್ಯದ ನೀರಾವರಿ ಯೋಜನೆಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ ಬೊಮ್ಮಾಯಿ: ಕೃಷ್ಣಾ ಮೇಲ್ದಂಡೆ, ಮಹಾದಾಯಿ…

ಇತ್ತೀಚಿನ ಸುದ್ದಿ

ಪುಣೆ: ಸ್ವಚ್ಛತಾ ಬಾಬಾ, ನಿವೃತ್ತ ಶಿಕ್ಷಕ ಚಂದ್ರಕಾಂತ ರಾಧಾಬಾಯಿ ದಾಮೋದರ್ ಕುಲಕರ್ಣಿಗೆ ಶಾಸಕ ಕಾಮತ್ ಸನ್ಮಾನ

13/11/2024, 18:05

ಪುಣೆ/ಮಂಗಳೂರು(reporterkarnataka.com): ಸ್ವಚ್ಛತೆಯ ವಿಷಯದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯ ಅವರನ್ನೇ ಪ್ರಭಾವಿಸಿದ್ದ ಹಿರಿಯರಾದ ನಿವೃತ್ತ ಸರ್ಕಾರಿ ಶಿಕ್ಷಕ ಚಂದ್ರಕಾಂತ ರಾಧಾಬಾಯಿ ದಾಮೋದರ್ ಕುಲಕರ್ಣಿ (ಸ್ವಚ್ಛತಾ ಬಾಬಾ) ಅವರನ್ನು ಶಾಸಕ ವೇದವ್ಯಾಸ ಕಾಮತ್ ಅವರು ಪುಣೆಯ ಚುನಾವಣಾ ಕಾರ್ಯಗಳ ನಡುವೆ ಭೇಟಿ ಮಾಡಿ ಸನ್ಮಾನಿಸಿದರು.


ನಂತರ ಮಾತನಾಡಿದ ಶಾಸಕರು, ಪ್ರಧಾನಿಗಳು ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದಾಗ ನಿವೃತ್ತಿ ಜೀವನ ನಡೆಸುತ್ತಿದ್ದ ಕುಲಕರ್ಣಿಯವರು ತಮಗೆ ಬರುತ್ತಿದ್ದ 15,000 ಪಿಂಚಣಿಯಲ್ಲಿ ತಿಂಗಳಿಗೆ 5 ಸಾವಿರದಂತೆ, ಒಟ್ಟು 2,60,000/- ಸ್ವಚ್ಛ ಭಾರತ್ ನಿಧಿಗೆ ನೀಡಿ ದೇಶಕ್ಕೆ ಮಾದರಿಯಾಗಿದ್ದರು. ಅನೇಕ ಬಾರಿ ಕಾಶಿ, ಅಯೋಧ್ಯೆಗೆ ತೆರಳಿ 5-10 ದಿವಸಗಳ ಕಾಲ ತಂಗಿ ಸ್ವಚ್ಛತಾ ಕಾರ್ಯ ಮಾಡುವುದರಲ್ಲೇ ಸಂತೃಪ್ತಿಯನ್ನು ಕಾಣುವ ವಿಶೇಷ ವ್ಯಕ್ತಿ ಇವರು. ಇವೆಲ್ಲವನ್ನು ಗಮನಿಸಿ ಪ್ರಧಾನಿ ತಮ್ಮ ಮನ್ ಕಿ ಬಾತ್ ನಲ್ಲಿ ಇವರ ಬಗ್ಗೆ ಉಲ್ಲೇಖಿಸಿದ್ದು ಮಾತ್ರವಲ್ಲದೇ, ಎರಡು ಬಾರಿ ಅತ್ಯಂತ ಗೌರವದಿಂದ ಕರೆಸಿಕೊಂಡು ಸನ್ಮಾನಿಸಿದ್ದರು ಎಂದು ಶಾಸಕರು ಹೇಳಿದರು.
ಸ್ವತಃ ಪ್ರಧಾನಿಗಳೇ ಕುಲಕರ್ಣಿಯವರ ಕಾರ್ಯದಿಂದ ನಾನು ತುಂಬಾ ಪ್ರಭಾವಿತನಾಗಿ ಪ್ರೇರಣೆ ಪಡೆದಿದ್ದೇನೆ ಎಂದಿರುವುದು ಇಲ್ಲಿ ಗಮನಾರ್ಹವಾಗಿದ್ದು, ಉತ್ತರ ಪ್ರದೇಶದ ಅಮೇಥಿಯಲ್ಲಿ ಜನಸಾಮಾನ್ಯರ ಉಪಯೋಗಕ್ಕಾಗಿ ಸುಮಾರು 450ಕ್ಕೂ ಹೆಚ್ಚು ಕುಡಿಯುವ ನೀರಿನ ಬೋರ್ವೆಲ್ ನಿರ್ಮಾಣಗೊಳಿಸಿರುವ ಇವರು ತ್ರಯಂಬಕೇಶ್ವರದ ಪ್ರಾಚೀನ ಕುಂಡ ಸಹಿತ ಅನೇಕ ಐತಿಹಾಸಿಕ ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಇಂತಹ ಸಮಾಜಮುಖಿ ವ್ಯಕ್ತಿ ನಮ್ಮ ಮಂಗಳೂರಿನ ಶ್ರೀ ರಾಮಕೃಷ್ಣ ಮಠಕ್ಕೂ ಮೂರು ಸಲ ಭೇಟಿ ನೀಡಿ ಸ್ವಚ್ಛತೆಯ ನಿಟ್ಟಿನಲ್ಲಿ ಮಠವು ವಹಿಸಿರುವ ಕಾಳಜಿ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಕುಲಕರ್ಣಿಯವರ ಕುಟುಂಬದವರ ಸಹಿತ ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು