ಇತ್ತೀಚಿನ ಸುದ್ದಿ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಬಂಗ್ಲಗುಡ್ಡೆಯಲ್ಲಿ ಉತ್ಖನನ! ಮಾನವ ಮೂಳೆಗಳು ಪತ್ತೆ?
04/08/2025, 19:23

ಧರ್ಮಸ್ಥಳ (reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡದಿಂದ ನಡೆಯುತ್ತಿದ್ದ 11ನೇ ಸ್ಪಾಟ್ ಅಗೆತವನ್ನು ನಿಲ್ಲಿಸಿದ ಎಸ್ಐಟಿ ತಂಡ ಬಂಗ್ಲಗುಡ್ಡದಲ್ಲಿ ಉತ್ಖನನ ಆರಂಭಿಸಿದ್ದು, ಅಲ್ಲಿ ಮಾನವ ಮೂಳೆಗಳು ಲಭ್ಯವಾಗಿದೆ ಎಂಬ ಮಾಹಿತಿ ಹರಿದಾಡಲಾರಂಭಿಸಿದೆ.
ಎಸ್ಐಟಿ ನಡೆಸಿದ ಉತ್ಖನನ ಕಾರ್ಯದಲ್ಲಿ ಸ್ಪಾಟ್ ನಂಬರ್ 6 ಹೊರತುಪಡಿಸಿ ಉಳಿದ ಕಡೆಗಳಲ್ಲಿ ಎಲ್ಲೂ ಮಾನವ ಅಸ್ತಿಪಂಜರದ ಕುರುಹು ಕಂಡು ಬಂದಿಲ್ಲ. ಇಂದು ಆರಂಭದಲ್ಲಿ ಸ್ಪಾಟ್ ನಂಬರ್ 11ರ ಅಗೆತಕ್ಕೆ ಸಿದ್ಧತೆ ನಡೆಸಲಾಗಿದ್ದು, ಆದರೆ ಇದ್ದಕ್ಕಿದ್ದ ಹಾಗೆ ಎಸ್ ಐಟಿ ತಂಡ ದಟ್ಟ ಕಾಡಿನ ಎತ್ತರದ ಪ್ರದೇಶಕ್ಕೆ(ಬಂಗ್ಲಗುಡ್ಡ) ತೆರಳಿ ಉತ್ಖನನ ಕಾರ್ಯ ಆರಂಭಿಸಿದರು. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು. ಎಸ್ಐಟಿ ಟೀಮ್ ನಲ್ಲಿ ಒಂದು ರೀತಿ ಸಂಚಲನ ಮೂಡಿತ್ತು. ನಂತರ ಕಾಡಿನ ಆ ಎತ್ತರದ ಪ್ರದೇಶಕ್ಕೆ ಉಪ್ಪಿನ ಮೂಟೆಯನ್ನು ಒಯ್ಯಲಾಯಿತು. ಇಲ್ಲಿ ಮಾನವ ಅಸ್ತಿಪಂಜರದ ಅವಶೇಷಗಳು ದೊರೆತಿರುವುದು ಬಹುತೇಕ ಖಚಿತಗೊಂಡಿದೆ.