ಇತ್ತೀಚಿನ ಸುದ್ದಿ
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಧಾರಣ ಭಕ್ತರ ದಂಡು: ಕದ್ರಿ, ಕುದ್ರೋಳಿಯಲ್ಲೂ ದೇವರ ದರ್ಶನ ಭಾಗ್ಯ
05/07/2021, 14:55
ಮಂಗಳೂರು(reporterkarnataka news):
ಸುಮಾರು ಎರಡು ತಿಂಗಳ ಲಾಕ್ ಡೌನ್ ಬಳಿಕ ಸೋಮವಾರ ಧಾರ್ಮಿಕ ಕೇಂದ್ರಗಳಾದ ದೇವಾಲಯ- ಮಂದಿರ, ಮಸೀದಿ ಮತ್ತು ಚರ್ಚ್ ತೆರೆದು ಪ್ರಾರ್ಥನೆಗೆ ಅವಕಾಶ ಮಾಡಿಕೊಲಾಯಿತು.
ನಗರದ ಕದ್ರಿ, ಮಂಗಳಾದೇವಿ, ಕುದ್ರೋಳಿ, ಶರವು ಸೇರಿದಂತೆ ಎಲ್ಲ ದೇಗುಲಗಳು ಸ್ಯಾನಿಟೈಸ್ ಮಾಡುವ ಮೂಲಕ ಭಕ್ತರ ಪಾಲಿಗೆ ತೆರೆದುಕೊಂಡವು.
ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಕೂಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾಧಾರಣ ಭಕ್ತಾದಿಗಳು ಆಗಮಿಸಿದ್ದರು.
ದೇವಸ್ಥಾನಗಳಲ್ಲಿ ಯಾವುದೇ ಸೇವೆ, ಅರ್ಚನೆ, ಪ್ರಸಾದಕ್ಕೆ ಅವಕಾಶ ಇರಲಿಲ್ಲ. ಭಕ್ತರು ಅತೀ ಶಿಸ್ತಿನಿಂದ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದು ಬಂದರು.
ಧರ್ಮಸ್ಥಳ, ಸುಬ್ರಹ್ಮಣ್ಯದ ಲಾಡ್ಜ್ ಗಳಲ್ಲಿ ಭಕ್ತಾಧಿಗಳು ಉಳಿದುಕೊಳ್ಳದಂತೆ ವಿನಂತಿಸಲಾಗಿದ್ದು, ದರ್ಶನ ಪಡೆದು ತೆರಳುವಂತೆ ಆಡಳಿತ ಮಂಡಳಿಗಳು ಸೂಚನೆ ನೀಡಿದೆ.