ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ: ಎಸ್ಐಟಿಗೆ ಇನ್ನಷ್ಟು ಅಧಿಕಾರ; ಪೊಲೀಸ್ ಠಾಣೆ ಮಾದರಿಯಲ್ಲಿ ಕಾರ್ಯನಿರ್ವಹಣೆ
08/08/2025, 18:42

ಬೆಂಗಳೂರು(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ರಾಜ್ಯ ಸರಕಾರ ಹೆಚ್ಚಿನ ಅಧಿಕಾರ ನೀಡುವ ಮೂಲಕ ಇನ್ನಷ್ಟು ಪವರ್ ಬಂದಿದೆ.
ಎಸ್ಐಟಿ ತಂಡ ಪೊಲೀಸ್ ಠಾಣೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಎಸ್ಐಟಿ ಸ್ವತಃ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಳ್ಳಬಹುದು. ಈ ಹಿಂದೆ ಜಯನ್ ಅವರು ದೂರು ನೀಡಲು ಬಂದಾಗ ಮೊದಲಿಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿ ಬರುವಂತೆ ಸೂಚಿಸಲಾಗಿತ್ತು. ಇನ್ನು ಮುಂದೆ ಎಸ್ಐಟಿಯೇ ಎಫ್ಐಆರ್ ದಾಖಲಿಸಿಕೊಳ್ಳಬಹುದು. ತನಿಖೆಗೆ ಅವಶ್ಯಕತೆ ಇದ್ದವರನ್ನು ವಶಕ್ಕೆ ಪಡೆಯುವುದು, ಬಂಧಿಸುವುದು, ಚಾರ್ಜ್ ಶೀಟ್ ಸಲ್ಲಿಸುವುದು, ಕೋರ್ಟ್ ಗೆ ಪ್ರಾಥಮಿಕ ವರದಿ ಸಲ್ಲಿಸುವುದು ಮುಂತಾದ ಅಧಿಕಾರ ಪ್ರಾಪ್ತಿಯಾಗಿದೆ. ಪೊಲೀಸ್ ಠಾಣೆ ರೀತಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ.