ಇತ್ತೀಚಿನ ಸುದ್ದಿ
ಸಾಲ ಬಾಧೆ: ಲಾರಿ ಮಾಲೀಕ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ
09/08/2025, 17:12

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಸಂಘ ಸಂಸ್ಥೆ ಹಾಗೂ ಖಾಸಗಿ ಫೈನಾನ್ಸ್ ನವರ ಕಿರುಕುಳದಿಂದ ಬೇಸತ್ತ ಲಾರಿ ಮಾಲೀಕರೊಬ್ಬರು ತೀರ್ಥಹಳ್ಳಿಯ
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೆ ಬೈಲು ಸಮೀಪ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮಂಜುನಾಥ್ ಎಚ್. (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪಟ್ಟಣದ ಕುರುವಳ್ಳಿ ವಾಸಿಯಾಗಿದ್ದ ಹಾಗೂ ಲಾರಿ ಮಾಲೀಕರಾಗಿದ್ದ ಮಂಜುನಾಥ್ ಹಲವು ಸಂಘ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ಕೊಟ್ಟವರ ಕಿರುಕುಳದಿಂದ ಬೇಸತ್ತು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.