ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಟ್ರಕ್ಕಿಂಗ್ ಹೋದ ಮೈಸೂರು ಯುವಕ ಹೃದಯಾಘಾತಕ್ಕೆ ಬಲಿ
30/06/2023, 22:47
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಟ್ರಕ್ಕಿಂಗ್ ಹೋಗಿದ್ದ ಪ್ರವಾಸಿಗ ಹೃದಯಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ರಕ್ಷಿತ್ (27) ಹೃದಯಘಾತದಿಂದ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಮೈಸೂರು ಮೂಲದ ಏಳು ಯುವಕರ ತಂಡ ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿತ್ತು. ಇದರಲ್ಲಿ ರಕ್ಷಿತ್ ಕೂಡ ಒಬ್ಬರಾಗಿದ್ದರು.
ಪೀಕ್ ಗೆ ಹೋಗುವ ಮಾರ್ಗದಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ರಕ್ಷಿತ್ ಕೊನೆಯುಸಿರೆಳೆದಿದ್ದಾರೆ. ಪೀಕ್ ನಿಂದ ಮೃತದೇಹವನ್ನ ಕಳಸಕ್ಕೆ ತರಲು ಕಳಸ ಪೊಲೀಸರು ಸಹಕರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಅರಣ್ಯ ಪ್ರದೇಶವಿದೆ. ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಯ ನಡುವೆ ನೇತ್ರಾವತಿ ಪೀಕ್ ಸ್ಪಾಟ್ ಇದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ರಕ್ಷಿತ್ ಗೆ ಹೃದಯಾಘಾತವಾಗಿದೆ.