4:30 PM Saturday8 - November 2025
ಬ್ರೇಕಿಂಗ್ ನ್ಯೂಸ್
ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌…

ಇತ್ತೀಚಿನ ಸುದ್ದಿ

Chikkamagaluru | ಮೂಡಿಗೆರೆ: ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ಉತ್ಸವ, ಕೆಂಡ ಸೇವೆ

07/04/2025, 19:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ತಾಲೂಕಿನ ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ನಡೆಯಿತು.
ಅಜ್ಜಮ್ಮ ಹಾಗೂ ನಾಗಲಮ್ಮ ದೇವರುಗಳ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ.
ಭಾನುವಾರ ರಾತ್ರಿಯಿಂದ ಪ್ರಾರಂಭವಾದ ರಾತ್ರಿ ಸುಗ್ಗಿ ಹಾಗೂ ಸೋಮವಾರ ಹಗಲು ಸುಗ್ಗಿ ನಡೆಯಿತು.


ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು ಭಾನುವಾರ ರಾತ್ರಿ ನಿಸಾನಿ ಶಬ್ದಕ್ಕೆ ದೇವರ ಅಡ್ಡಿಯೊಂದಿಗೆ ಯುವಕರು ಹೆಜ್ಜೆ ಹಾಕುವುದು ಕಂಡುಬಂತು. ಸೋಮವಾರ ಬೆಳಗ್ಗೆ ಕೆಂಡೋತ್ಸವ ನಡೆಯಿತು.
ಈ ಜಾತ್ರಾ ಮಹೋತ್ಸವಕ್ಕೆ ಅರಮನೆ ತಲಗೂರು,ಮಾಳಿಂಗ ನಾಡು, ಹೆಮ್ಮಕ್ಕಿ, ಬಿಳಗಲಿ, ನೆರಂಕಿ. ಬಲಿಗೆ. ಸುಂಕ ಸಾಲೆ. ಕೆ‌ಳಗೂರು ಮೊದಲಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ. ಲೋಕಪ್ಪ ಗೌಡ. ಕೃಷ್ಣೇಗೌಡ. ಅಭಿಜಿತ್. ಮಂಜಪ್ಪ ಶೆಟ್ಟಿ. ಶಂಕರ್ ಶೆಟ್ಟಿ. ಲಕ್ಷ್ಮಣ್ ಗೌಡ್ರು. ಶಂಕರಗೌಡ. ರವಿಚಂದ್ರ. ಸುಧಾಕರ, ರಾಮಚಂದ್ರ, ರತ್ನಾಕರ್, ಅಶ್ವಥ್, ಸುದರ್ಶನ್ ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು