4:52 PM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಚಳ್ಳಕೆರೆ: ಅಕ್ರಮ ಮಣ್ಣು ಸಾಗಾಟ; ಗೋಪಾನಹಳ್ಳಿ ಹಳ್ಳಕ್ಕೆ ದಿಕ್ಕು ಬದಲಾಯಿಸುವ ಭೀತಿ 

13/02/2022, 09:43

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ಹಳ್ಳದ ತಟದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟದಿಂದ ಹಳ್ಳ ಹರಿಯುವ ದಿಕ್ಕು ಬದಲಾವಣೆಯಾಗುವ ಭೀತಿ ಎದುರಾಗಿದೆ.


ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಸಮೀಪದ ರಾಷ್ಟ್ರೀಹ ಹೆದ್ದಾರಿಗೆ ಹೊಂದಿಕೊಂಡ ಗರಣಿ(ಗೋಪನಹಳ್ಳಿ)  ಹಳ್ಳದಲ್ಲಿನ ದಡದ ಮಣ್ಣನ್ನು ಸಮೀಪದ ಜಮೀನಿಗೆ ಸಾಗಾಟ ಮಾಡಿದ್ದು ಮಳೆಗಾದಲ್ಲಿ ಹಳ್ಳದ ನೀರು ಪಕ್ಕದ ಜಮೀನುಗಳು ಜಲಾವೃತಗೊಳ್ಳುವ ಭೀತಿ ರೈತರಲ್ಲಿ ಆತಂಕ ಮಾಡಿದೆ.


ಹಳ್ಳದ ಎರಡು ಬದಿಯಲ್ಲಿ ಏರಿ ನಿರ್ಮಿಸಿದ್ದು ಎರಡು ಏರಿಯ ಮಣ್ಣು ಅಕ್ರಮವಾಗಿ ಪಕ್ಕದ ಜಮೀನಿಗೆ ಸಾಕಾಟ ಮಾಡಿದ್ದು ಹೆದ್ದಾರಿ ರಸ್ತೆಯ ಅಭಿವೃದ್ಧಿಗೂ ಸಹ ಹಳ್ಳದ ಏರಿಯ ದಡದ ಮಣ್ಣನ್ನು ಬಳಸಿಕೊಂಡು ಸುತ್ತಮುತ್ತಲಿನ ಫಲವತ್ತಾದ ಮಣ್ಣನ್ನು ಬಗೆದು ಟಿಪ್ಪರ್‍ಗಳ ಮೂಲಕ ಸಾಗಾಟ ಮಾಡಲಾಗಿದ್ದು ಹಳ್ಳದ ಚಿತ್ರಣವನ್ನೇ ಬದಲಾಯಿಸಿದ್ದಾರೆ.

by
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹಳ್ಳದಲ್ಲಿ ಅಕ್ರಮವಾಗಿ ಹಗಲು ರಾತ್ರಿ ಜೆಸಿಬಿ ಹಾಗೂ ಬೃಹತ್ ಟಿಪ್ಪರ್ ವಾಹನಗಳ ಮೂಲಕ  ಮಣ್ಣು ತೆಗೆದಿರುವ ಸ್ಥಳಗಳಲ್ಲಿ ಹತ್ತಾರು ಅಡಿಗಳಷ್ಟು ಆಳದ ಗುಂಡಿಗಳು ಸೃಷ್ಟಿಯಾಗಿದ್ದು,  ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಲು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಪಿಸಿದ್ದಾರೆ.ಎಲ್ಲಿಂದ ಎಲ್ಲಿಗೆ ಹರಿತ್ತದೆ.


ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ಕೋಡಿ ಬಿದ್ದು ದ್ಯಾಮವ್ವನಹಳ್ಳಿ ಕೆರೆಗೆ ಸೇರಿ ಕೋಡಿ ಬಿದ್ದ ನಂತರ ಬೊಮ್ಮೇನಹಳ್ಳಿ, ಹಂಪಯ್ಯನ ಮಾಳಿಗೆ ಗೊಲ್ಲರಹಟ್ಟಿ ಮೂಲಕ ದ್ಯಾಮವ್ವನಹಳ್ಳಿ ಕೆರೆ, ಕಲ್ಲಳ್ಳಿ, ಚಿಕ್ಕಮಧುರೆ ಕೆರೆಗಳು ತುಂಬಿ ಗಂಜಿಕುಂಟೆ, ಸಾಣೀಕೆರೆ, ಕೆರೆಗಳು ಕೋಡಿ ಬಿದ್ದ ನೀರು ಕಮ್ಮತ್ ಮರಿಕುಂಟೆ , ಗೋಪನಹಳ್ಳಿ ಮಾರ್ಗವಾಗಿ ಗರಣಿ ಸೇತುವೆ ಬಳಿಗೆ ದೊಡ್ಡೇರಿ ಕೆರೆ ಹಾಗೂ ರಾಣಿಕೆರೆಗೆ ಎರಡು ಕೆರೆಗಳಿಗೆ ನೀರು ಹರಿಯುವ ಬೃಹತ್ ಹಳ್ಳವಾಗಿದ್ದು ಹಳ್ಳದ ಎರಡು ದಡವನ್ನು ಅಕ್ರಮ ಮಣ್ಣು ದಂದೆಕೋರರಿಗೆ ಸಿಲುಕಿ ಹಳ್ಳ ನಲುಗಿ ಹೋಗಿದ್ದು ಮಳೆ ಬಂದಾಗ ಹಳ್ಳ ತುಂಬಿ ಹರಿದರೆ ಅಕ್ಕ ಪಕ್ಕದ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗುವ ಬೀತಿ ಎದುರಾಗಿದ್ದು  ಅಕ್ರಮ ಮಣ್ಣು ಸಾಗಾಟದ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆಯವರು ಕಂದಾಯ ಇಲಾಖೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ  ಆದರೆ ಅಪ್ಪ ಅಮ್ಮನ ಜಗಳದ ನಡುವೆ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷೆ ಸಿಲುಕಿ ಹಳ್ಳದ ಏರಿಗಳು ಮಾಯವಾಗುತ್ತಿರುವುದು ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು