10:01 PM Friday24 - January 2025
ಬ್ರೇಕಿಂಗ್ ನ್ಯೂಸ್
ಮನೆ ಸೀಝ್ ಮಾಡಿ ಬಾಣಂತಿ- ಮಗುವನ್ನು ಹೊರಹಾಕಿದ ಖಾಸಗಿ ಫೈನಾನ್ಸ್: ಬೀಗ ತೆರವುಗೊಳಿಸಿದ… ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ… 7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ…

ಇತ್ತೀಚಿನ ಸುದ್ದಿ

ಬಿಗ್ ಬಾಸ್ ಮನೆಯೊಳಗೆ ಕೋಸ್ಟಲ್ ವುಡ್ ನಟ ರೂಪೇಶ್ ಶೆಟ್ಟಿ ಎಂಟ್ರಿ!: ಕರಾವಳಿಯಲ್ಲಿ ಹೊಸ ಕಲರವ!

06/08/2022, 21:05

ಮಂಗಳೂರು(reporterkarnataka.com): ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಷೋ ಬಿಗ್‌ಬಾಸ್ ಓಟಿಟಿ ಸೀಸನ್-1 ಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದ್ದು, ಕೋಸ್ಟಲ್ ವುಡ್ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗೂರೂಜಿ, ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆ ಸೇರಿದ್ದಾರೆ. ಕರಾವಳಿಯಿಂದ ನಟ, ನಿರೂಪಕ ರೂಪೇಶ್ ಶೆಟ್ಟಿ ಕೂಡ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.

ತುಳು ನಿರೂಪಕನಾಗಿ ಕರಾವಳಿ ತುಂಬಾ ಜನಪ್ರಿಯತೆ ಪಡೆದಿದ್ದ ರೂಪೇಶ್ ಅವರು ನಂತರ ತುಳು ಚಿತ್ರರಂಗದ ಮೂಲಕ ಬೆಳ್ಳಿಪರದೆಗೆ ಪಾದರ್ಪಣೆ ಮಾಡಿದ್ದರು. ಇಂದು ರೂಪೇಶ್ ಶೆಟ್ಟಿ ಅವರು ಕರಾವಳಿ ಮಾತ್ರವಲ್ಲ ಕರ್ನಾಟಕದಾದ್ಯಂತ ಚಿರಪರಿಚಿತರು.ನಿಶ್ಯಬ್ದ-2, ಡೇಂಜರ್ ಝೇನ್, ಪಿಶಾಚಿ-2 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

2018ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ ‘ಅಮ್ಮರ್ ಪೊಲೀಸಾ’, ಇತ್ತೀಚೆಗೆ ಬಿಡುಗಡೆಯಾದ ಗಿರ್‌ಗಿಟ್ ಸಿನಿಮಾ ಹಿಟ್ ಆಗಿ ಹೆಸರು ತಂದಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು