ಇತ್ತೀಚಿನ ಸುದ್ದಿ
ಭೀಕರ ಕಾರು ಅಪಘಾತ: ಆಸ್ಟ್ರೇಲಿಯಾದ ಕ್ರಿಕೆಟ್ ತಾರೆ ಆಂಡ್ರ್ಯೂ ಸೈಮಂಡ್ಸ್ ಸಾವು
15/05/2022, 10:54
ಮೆಲ್ಬೋರ್ನ್(reporterkarnataka.com): ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ತಾರೆ ಆಂಡ್ರ್ಯೂ ಸೈಮಂಡ್ಸ್ ಸಾವನ್ನಪ್ಪಿದ್ದಾರೆ.
26 ಟೆಸ್ಟ್‌ಗಳು ಮತ್ತು 198 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ 46 ವರ್ಷದ ಅವರು ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಟೌನ್ಸ್‌ವಿಲ್ಲೆ ಹೊರ ಭಾಗದಲ್ಲಿ ನಡೆದ
ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸ್ವಾಶ್‌ಬಕ್ಲಿಂಗ್ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಅಧಿಕೃತ ಮೂಲಗಳು ಭಾನುವಾರ ಹೇಳಿದೆ. ಇತ್ತೀಚಿನ ಸಹವರ್ತಿಗಳಾದ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ಸಾವಿನ ನಂತರ ಕ್ರೀಡೆಗೆ ಮತ್ತೊಂದು ದುರಂತ ಇದಾಗಿದೆ.
1998ರಿಂದ 2009 ರವರೆಗೆ ಆಸ್ಟ್ರೇಲಿಯಾ ಪರ 26 ಟೆಸ್ಟ್ ಮತ್ತು 198 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಆಟವಾಡಿದ್ದಾರೆ.