ಇತ್ತೀಚಿನ ಸುದ್ದಿ
ಭಾರತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ನಿಂದ ಹಣಕಾಸಿನ ಸೇವೆಗಳಿಗಾಗಿ ಅತಿದೊಡ್ಡ ಡಿಜಿಟಲ್ ವೇದಿಕೆ ಸಜ್ಜು
20/01/2025, 16:55
*ಏರ್‌ಟೆಲ್ ತನ್ನ ಎಲ್ಲಾ 370 ಮಿಲಿಯನ್ ಗ್ರಾಹಕರಿಗಾಗಿ ಹೆಚ್ಚಿನ ಬಜಾಜ್ ಫೈನಾನ್ಸ್ ನ ಚಿಲ್ಲರೆ ಹಣಕಾಸು ಸೇವೆಗಳನ್ನು ವಿಸ್ತರಿಸಲು ಸಜ್ಜು*
*ಪಾಲುದಾರಿಕೆಯು ಏರ್‌ಟೆಲ್ ನ ಶಕ್ತಿಯುತ ಡಿಜಿಟಲ್ ವೇದಿಕೆ ಮತ್ತು ಓಮ್ನಿ ಚಾನೆಲ್ ಸಾಮರ್ಥ್ಯಗಳನ್ನು ಬಜಾಜ್ ಫೈನಾನ್ಸ್ ನ ವೈವಿಧ್ಯ 27 ಉತ್ಪನ್ನಗಳು, ಎಐ ಚಾಲಿತ ಕಾರ್ಯತಂತ್ರ ಮತ್ತು ಬಲಿಷ್ಠ ಅಂಡರ್ ರೈಟಿಂಗ್ ಸಾಮರ್ಥ್ಯಗಳೊಂದಿಗೆ ಸಂಯೋಜಿಸುತ್ತದೆ*
ಬೆಂಗಳೂರು(reporterkarnataka.com): ಭಾರತದ ಅತಿದೊಡ್ಡ ದೂರವಾಣಿ ಸೇವೆಗಳಲ್ಲಿ ಒಂದಾದ, ಭಾರತಿ ಏರ್‌ಟೆಲ್ ಮತ್ತು ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕೇತರ ಹಣಕಾಸಿನ ಸಂಸ್ಥೆಯಾದ(NBFC) ಬಜಾಜ್ ಫೈನಾನ್ಸ್, ಇಂದು ಕೊನೆಯ ಹಂತದ ವಿತರಣೆಯನ್ನು ಮಾರ್ಪಡಿಸಲು ಮತ್ತು ಹಣಕಾಸಿನ ಸೇವೆಗಳಿಗಾಗಿ ಭಾರತದ ಅತಿದೊಡ್ಡ ಡಿಜಿಟಲ್ ವೇದಿಕೆಯೊಂದನ್ನು ರಚಿಸಲು ತನ್ನ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಪ್ರಕಟಿಸಿದೆ.
ಈ ವಿಶಿಷ್ಟ ಪಾಲುದಾರಿಕೆಯು 370 ಮಿಲಿಯನ್ ನ ಏರ್‌ಟೆಲ್ ನ ಅತ್ಯಧಿಕ ಕಾರ್ಯನಿರತ ಗ್ರಾಹಕರ ನೆಲೆ, 12 ಲಕ್ಷಕ್ಕಿಂತ ಹೆಚ್ಚಿನ ಬಲಿಷ್ಠ ವಿತರಣೆ ಜಾಲ, ಮತ್ತು 24 ಉತ್ಪನ್ನಗಳ ಬಜಾಜ್ ಫೈನಾನ್ಸ್ ನ ವೈವಿಧ್ಯಮಯ ಪ್ಯಾಕ್ ಹಾಗೂ 5000ಕ್ಕೂ ಹೆಚ್ಚಿನ ಶಾಖೆಗಳ ವಿತರಣಾ ಪಡೆ ಮತ್ತು 70, 000 ಫೀಲ್ಡ್ ಏಜೆಂಟುಗಳನ್ನು ಒಟ್ಟು ಜೋಡಿಸುತ್ತದೆ.
ಏರ್‌ಟೆಲ್ ಆರಂಭದಲ್ಲಿ ಗ್ರಾಹಕರಿಗಾಗಿ ಸಾಟಿರಹಿತ ಮತ್ತು ಸುರಕ್ಷಿತ ಅನುಭವ ನೀಡಲು ಬಜಾಜ್ ಫೈನಾನ್ಸ್ ನ ಚಿಲ್ಲರೆ ಹಣಕಾಸಿನ ಉತ್ಪನ್ನಗಳ ಸೇವೆಗಳನ್ನು ತನ್ನ ಏರ್‌ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಮತ್ತು ನಂತರ ತನ್ನ ರಾಷ್ಟ್ರವ್ಯಾಪಿ ಸ್ಟೋರ್ ಗಳ ಜಾಲದ ಮೂಲಕ ಒದಗಿಸುತ್ತದೆ. ಸಂಸ್ಥೆಗಳ ಡಿಜಿಟಲ್ ಸ್ವತ್ತುಗಳ ಸಂಯೋಜಿತ ಶಕ್ತಿಯು ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಆಳವಾಗಿ ಬೇರೂರಿಸಲು ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ಗೆ ಅನುವು ಮಾಡಿಕೊಡುತ್ತದೆ.
ಭಾರತಿ ಏರ್‌ಟೆಲ್ ನ ಉಪಾಧ್ಯಕ್ಷರು ಮತ್ತು ಎಂಡಿ ಆಗಿರುವ ಗೋಪಾಲ್ ವಿಠ್ಠಲ್ ಅವರು ಮಾತನಾಡಿ, “ದೇಶದ ಎರಡು ವಿಶ್ವಾಸನೀಯ ಹೆಸರುಗಳಾಗಿರುವ, ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್, ಹಣಕಾಸಿನ ಅಗತ್ಯತೆಗಳ ವೈವಿಧ್ಯಮಯ ಪೋರ್ಟ್ಫೋಲಿಯೋದೊಂದಿಗೆ ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸುವ ಕಲ್ಪನೆಯನ್ನು ಹಂಚಿಕೊಂಡಿದೆ. ಈ ಎರಡೂ ಸಂಸ್ಥೆಗಳ ಸಂಯೋಜಿತ ವ್ಯಾಪ್ತಿ, ಪ್ರಮಾಣ ಮತ್ತು ವಿತರಣೆಯು ಈ ಪಾಲುದಾರಿಕೆಯ ಮೈಲಿಗಲ್ಲಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮನ್ನು ಈ ಮಾರುಕಟ್ಟೆಯಲ್ಲಿ ಯಶಸ್ಸನ್ನು ತಂದುಕೊಡಲು ಸಹಾಯ ಮಾಡುತ್ತದೆ. ನಾವು ಜನರಿಗಾಗಿ ಏರ್‌ಟೆಲ್ ಫೈನಾನ್ಸ್ ಅನ್ನು ಕಾರ್ಯತಾಂತ್ರಿಕ ಸ್ವತ್ತಾಗಿ ರಚಿಸುತ್ತಿದ್ದೇವೆ ಮತ್ತು ಇದನ್ನು ಮುಂದುವರೆಸುತ್ತಾ, ವ್ಯವಹಾರವನ್ನು ಮತ್ತಷ್ಟು ಬೆಳೆಸಲು ಇಷ್ಟಪಡುತ್ತೇವೆ. ಇಂದು, ನಾವು 1 ಮಿಲಿಯನ್ ಗಿಂತ ಹೆಚ್ಚಿನ ಗ್ರಾಹಕರ ನಂಬಿಕೆಯನ್ನು ಗಳಿಸಿದ್ದೇವೆ ಮತ್ತು ನಮ್ಮ ಗ್ರಾಹಕರ ಎಲ್ಲಾ ಹಣಕಾಸಿನ ಅಗತ್ಯತೆಗಳಿಗಾಗಿ ಏರ್‌ಟೆಲ್ ಫೈನಾನ್ಸ್ ಅನ್ನು ಒಂದು ಏಕೈಕ ಸ್ಥಳವನ್ನಾಗಿಸುವ ಕನಸನ್ನು ಹೊಂದಿದ್ದೇವೆ.” ಎಂದರು.
ಬಜಾಜ್ ಫೈನಾನ್ ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಜೀವ್ ಜೈನ್, ಮಾತನಾಡಿ, “ಭಾರತದ ಡಿಜಿಟಲ್ ಪರಿಸರವ್ಯವಸ್ಥೆಯು ಡೇಟಾ ಚಾಲಿತ ಕ್ರೆಡಿಟ್ ಅಂಡರ್ ರೈಟಿಂಗ್ ಮತ್ತು ಹಣಕಾಸಿನ ಸೇರ್ಪಡೆಯ ಕೇಂದ್ರಬಿಂದುವಾಗಿದೆ. ಏರ್‌ಟೆಲ್ ನೊಂದಿಗಿನ ನಮ್ಮ ಪಾಲುದಾರಿಕೆಯು ಅಂತರ್ಗತ ಬೆಳವಣಿಗೆಗಾಗಿ ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಉತ್ತಮ ಮಾತ್ರಗೊಳಿಸುವುದಲ್ಲದೆ ಭಾರತದ ಎರಡು ಮಂಚೂಣಿ ಮತ್ತು ಅತ್ಯಂತ ವಿಶ್ವಸನೀಯ ಬ್ರ್ಯಾಂಡ್ ಗಳ ಸಂಪರ್ಕ ಮತ್ತು ಪರಿಣಿತಿಯನ್ನು ಒಟ್ಟುಗೂಡಿಸುತ್ತದೆ. ಏರ್‌ಟೆಲ್ ನೊಂದಿಗೆ, ನಾವು ಭಾರತದ ಐಚ್ಛಿಕ ಹಣಕಾಸು ವೇದಿಕೆಯಾಗಲು ಬಯಸುತ್ತೇವೆ. ಈ ಮೂಲಕ ನಾವು ದೇಶದ ಹಳ್ಳಿಹಳ್ಳಿಗಳಲ್ಲಿ, ಮೂಲೆಮೂಲೆಗಳಲ್ಲಿಯೂ ಸಹ ಹಣಕಾಸಿನ ಸೇವೆಗಳನ್ನು ಪಡೆಯಲು ಬಯಸುವ ಅನೇಕ ಜನರಿಗೆ ಸಹಾಯ ಮಾಡಬಹುದು. ಬಜಾಜ್ ಫಿನ್ಸರ್ವ್ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಗ್ರಾಹಕರ ಅನುಭವಗಳನ್ನು ಹೆಚ್ಚಿಸಲು ಎಐ ಶಕ್ತಿಯನ್ನು ಬಳಸುವ ಸಮಯದಲ್ಲಿ ಏರ್‌ಟೆಲ್ ಜೊತೆಗೆ ಕೈಜೋಡಿಸುತ್ತಿರುವುದಕ್ಕಾಗಿ ನಮಗೆ ಬಹಳ ಖುಷಿ ಇದೆ.” ಎಂದರು.
ಇದುವರೆಗೆ ಬಜಾಜ್ ಫೈನಾನ್ಸ್ ನ ಎರಡು ಉತ್ಪನ್ನಗಳನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಕಾರ್ಯಗತಗೊಳಿಸಲಾಗಿದೆ. ಮಾರ್ಚ್ ವೇಳೆಗೆ, ಬಜಾಜ್ ಫೈನಾನ್ಸ್ ನ ನಾಲ್ಕು ಉತ್ಪನ್ನಗಳು ಏರ್‌ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇವು ಚಿನ್ನದ ಸಾಲ, ವ್ಯವಹಾರ ಸಾಲ, ಸಹ-ಬ್ರ್ಯಾಂಡ್ ಇನಸ್ಟಾ ಕಾರ್ಡ್ ಮತ್ತು ವೈಯಕ್ತಿಕ ಸಾಲ. ಈ ಕ್ಯಾಲೆಂಡರ್ ವರ್ಷದಲ್ಲಿ ಏರ್‌ಟೆಲ್ ಬಜಾಜ್ ಫಿನ್ಸರ್ವ್ ನ ಸುಮಾರು 10 ಹಣಕಾಸಿನ ಉತ್ಪನ್ನಗಳನ್ನು ಏರ್‌ಟೆಲ್ ಪರಿಚಯಿಸಲು ಸಜ್ಜಾಗಿದೆ. ಏರ್‌ಟೆಲ್ ಗ್ರಾಹಕರು ಮೊದಲು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಮತ್ತು ನಂತರ ತನ್ನ ರಾಷ್ಟ್ರವ್ಯಾಪಿ ಸ್ಟೋರ್ ಗಳ ಮೂಲಕ ಏರ್‌ಟೆಲ್ ಬಜಾಜ್ ಫಿನ್ಸರ್ವ್ ಇನಸ್ಟಾ EMI ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸುವ ಅವಕಾಶ ಸಹ ಪಡೆಯಲಿದ್ದಾರೆ. ಏರ್‌ಟೆಲ್-ಬಜಾಜ್ ಫಿನ್ಸರ್ವ್ EMI ಕಾರ್ಡ್ ಮೂಲಕ ಬಜಾಜ್ ಫಿನ್ಸರ್ವ್ ಗ್ರಾಹಕರಿಗೆ ಲಭ್ಯವಿರುವ ಕೊಡುಗೆಗಳ ಶ್ರೇಣಿಯ ಪ್ರವೇಶಾವಕಾಶವನ್ನು ಪಡೆಯಬಹುದು. ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ದಿನಸಿಗಳನ್ನೂ ಒಳಗೊಂಡಂತೆ 1.5 ಲಕ್ಷಕ್ಕೂ ಹೆಚ್ಚಿನ ಪಾಲುದಾರ ಅಂಗಡಿಗಳಲ್ಲಿ 4000ಕ್ಕೂ ಅಧಿಕ ನಗರಗಳಾದ್ಯಂತ ಅನೇಕ ಸರಕುಗಳನ್ನು ಖರೀದಿಸಲು ಅನುಕೂಲಕರ EMI ಆಯ್ಕೆಗಳು ಮತ್ತು ಪಾವತಿ ಯೋಜನೆಗಳಿಂದ ಏರ್ಟೆಲ್ ಬಳಕೆದಾರರಿಗೆ ಸಹಾಯವಾಗಲಿದೆ. ಹೆಚ್ಚುವರಿಯಾಗಿ, ಈ ಸಹ-ಬ್ರ್ಯಾಂಡ್ ನ ಕಾರ್ಡ್ ಬಹು ವೇದಿಕೆಗಳ ಮೇಲೆ ಇ-ಕಾಮರ್ಸ್ ವಹಿವಾಟುಗಳಿಗಾಗಿ ಸಹ ಬಳಸಬಹುದಾಗಿದೆ.
ಏರ್‌ಟೆಲ್ ಥ್ಯಾಂಕ್ಸ್ ಆಪ್ ಈಗ ಹೊಸದಾಗಿ ಸಾಲವನ್ನು ಪಡೆಯುತ್ತಿರುವ ಗ್ರಾಹಕರಿಗೆ ಔಪಚಾರಿಕ ಹಣಕಾಸಿನ ವ್ಯವಸ್ಥೆಯೊಂದಿಗೆ ಅವರನ್ನು ಪರಿಚಯಿಸಲು ಮತ್ತು ಹಣಕಾಸು ಪಡೆಯುವುದು ಸುಲಭಗೊಳಿಸಲು ಚಿನ್ನದ ಮೇಲಿನ ಸಾಲಗಳನ್ನು ಒದಗಿಸುತ್ತದೆ.
ಪಾಲುದಾರಿಕೆಯ ಭಾಗವಾಗಿ, ಎರಡೂ ಸಂಸ್ಥೆಗಳು ಬಲಿಷ್ಠ ನಿಯಂತ್ರಕ ಅನುಸರಣೆಗೆ, ಡೇಟಾ ಗೌಪ್ಯತೆ ಮತ್ತು ಭದ್ರತೆ ಹಾಗೂ ಸಾಟಿರಹಿತ ಗ್ರಾಹಕ ಸೇವೆಗೆ ಬದ್ಧವಾಗಿದೆ.