ಇತ್ತೀಚಿನ ಸುದ್ದಿ
ಬೀದಿ ನಾಯಿಗಳ ದಾಳಿ: 5 ಮೇಕೆಗಳ ಸಾವು; ಶ್ವಾನಗಳ ನಿಯಂತ್ರಣಕ್ಕೆ ಗ್ರಾಮಸ್ಥರ ಮನವಿ
30/06/2023, 10:54
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.ಕಂ
ಬೀದಿ ನಾಯಿಗಳ ದಾಳಿಗೆ ಐದಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಅಪ್ಪಸಾಬ್ ಕೊಲೂರ ಎಂಬುವರಿಗೆ ಸೇರಿದ ಮೇಕೆಗಳು ನಾಯಿಗಳ ದಿಂಡು ಹಠಾತನೆ ದಾಳಿ ಮಾಡಿ ಕೊಂದು ಹಾಕಿವೆ. ಸುಮಾರು ಐದು ಮೇಕೆಗಳು ಸಾವನ್ನಪ್ಪಿವೆ. ರೈತನಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.