ಇತ್ತೀಚಿನ ಸುದ್ದಿ
*ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ: ಎಲ್ಲೆಡೆ ಭಾರೀ ಡಿಮಾಂಡ್; ಖರೀದಿಗೆ ಮುಗಿಬಿದ್ದ ಜನ; ₹25 ಪ್ಯಾಕೆಟ್‌ಗೆ ₹100 ಬೆಲೆ.!*
14/08/2026, 21:54
ಬೆಂಗಳೂರು(reporterkarnataka.com): ರಾಜ್ಯದಲ್ಲಿ ಗುಟ್ಕಾ ಮಾರಾಟದ ಮೇಲೆ ನಿರ್ಬಂಧದ ಸುದ್ದಿ ಹರಡುತ್ತಿದ್ದಂತೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ್ಳಲ್ಲಿ ಗುಟ್ಕಾ ಖರೀದಿಸಲು ಜನರು ಮುಗಿಬಿದ್ದ ಘಟನೆ ವರದಿಯಾಗಿದೆ. ನಿಷೇಧ ಜಾರಿಗೆ ಬರಲಿದೆ ಎಂಬ ಆತಂಕದಿಂದ ಕೆಲವರು ಮುಂಚಿತವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಗುಟ್ಕಾ ಖರೀದಿಸಲು ಮುಂದಾಗಿದ್ದಾರೆ.ಕೊಪ್ಪಳ ಜಿಲ್ಲೆಯ ವಿವಿಧೆಡೆ ಅಂಗಡಿಗಳ ಬಳಿ ಗುಟ್ಕಾ ಖರೀದಿಗಾಗಿ ಜನರು ಸೇರಿದ್ದ ದೃಶ್ಯಗಳು ಕಂಡುಬಂದಿವೆ. ಸಾಮಾನ್ಯವಾಗಿ ₹25ಕ್ಕೆ ಮಾರಾಟವಾಗುತ್ತಿದ್ದ ಗುಟ್ಕಾ ಪ್ಯಾಕೆಟ್‌ಗಳಿಗೆ ಕೆಲವೆಡೆ ₹100ರವರೆಗೂ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ ಎಂದು ವ್ಯಾಪಾರ ವಲಯದಲ್ಲಿ ಹೇಳಲಾಗುತ್ತಿದೆ.












