1:55 PM Friday12 - December 2025
ಬ್ರೇಕಿಂಗ್ ನ್ಯೂಸ್
ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ ಆರೆಸ್ಸೆಸ್ ಅಂದ್ರೆ ಉರಿಯುವ ಕಾಂಗ್ರೆಸ್ ನಾಯಕರಿಗೆ ಅವರ ಸರ್ಕಾರದಿಂದಲೇ ಉತ್ತರ: ಕೇಂದ್ರ ಸಚಿವ… ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ 37,48,700 ವಸತಿ ರಹಿತರು: ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಖಾನ್ ಬೆಂಗಳೂರು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ ಉದ್ಘಾಟನೆ

ಇತ್ತೀಚಿನ ಸುದ್ದಿ

ಬಳ್ಳಾರಿ: ‘ಸ್ಟೀಲ್ ಸಿಟಿ ರನ್’ ನಲ್ಲಿ 4 ಸಾವಿರ ಜನರು ಭಾಗಿ; 10 ಕಿಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಪ್ರಥಮ

04/08/2024, 21:28

ಗಣೇಶ ಇನಾಂದಾರ ಬಳ್ಳಾರಿ

info.reporterkarnataka@gmail.com
ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನಿಂದ ಆಯೋಜಿಸಿದ್ದ ‘ಸ್ಟೀಲ್ ಸಿಟಿ ರನ್’ ಓಟದಲ್ಲಿ ಭಾರತದ ವಿವಿಧ 11 ರಾಜ್ಯಗಳ 4 ಸಾವಿರಕ್ಕೂ ಜನರು ಭಾಗವಹಿಸಿದ್ದರು.
10 ಕಿ.ಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಹಾಗೂ 5 ಕಿ.ಮೀ.ನಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಅವರು ಅತಿ ವೇಗದ ಓಟಗಾರರಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ 5, ದ್ವಿತೀಯ ಸ್ಥಾನ ಪಡೆದವರಿಗೆ 3 ಮತ್ತು ತೃತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ ಬಹುಮಾನವನ್ನು ಶಾಸಕ ಭರತ್ ರೆಡ್ಡಿ, ಎಸ್ಪಿ ಡಾ.ಶೋಭಾರಾಣಿ ನೀಡಿದರು.
ಮಹಿಳಾ ವಿಭಾಗದ ವಿಜೇತರಿಗೆ ಡಾ.ಸೋಮನಾಥ, ಮಂಜು ಮೋದಿ ಅವರು ಬಹುಮಾನ ವಿತರಿಸಿದರು. 10 ಕಿ.ಮೀ. ಓಟದಲ್ಲಿ 5ಕ್ಕೂ ಹೆಚ್ಚು ಜನ, 5 ಕಿಲೋ ಮೀಟರ್ ಓಟದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಹಾಗು 3 ಕಿ.ಮೀ ಓಟದಲ್ಲಿ 350ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಶೇ. 30ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ಭಾಗವಹಿಸಿದ್ದರು.
ಇದರಲ್ಲಿ ಮಹಾರಾಷ್ಟ್ರ, ಆಂಧ್ರ
ಪ್ರದೇಶ, ತೆಲಂಗಾಣ, ತಮಿಳುನಾಡು ಮೊದಲಾದ 11 ರಾಜ್ಯಗಳ ಹಾಗೂ ಕಿನ್ಯಾ ದೇಶದ ಓರ್ವ ಓಟಗಾರ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜನರು ಆರೋಗ್ಯದಿಂದ ಇರಲು ದಿನ ನಿತ್ಯ ಒಂದಿಷ್ಟು ಓಟದ ಅಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಿತ್ತು.
ಇದು 3ನೇ ವರ್ಷದ ಓಟವಾಗಿದೆ.
ಬೆಳಗ್ಗೆ ಓಟಕ್ಕೆ ತೋರಣಗಲ್ಲಿ ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಮುರುಗನ್, ಎಸ್ಪಿ ಡಾ.ಶೋಭಾರಾಣಿ, ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ ಮೊದಲಾದವರು ಚಾಲನೆ ನೀಡಿದರು. ಸೈಕ್ಲಿಂಗ್ ಕ್ಲಬ್ ನ ಅಧ್ಯಕ್ಷ ಡಾ.ರವಿಶಂಕರ್, ಡಾ.ಸುಂದರ್, ಡಾ.ಸೋಮನಾಥ, ಮೊದಲಾದವರು ಪಾಲ್ಗೊಂಡಿದ್ದರು. ಓಟಗಾರರಿಗೆ ನೀರು, ಆರೋಗ್ಯ ಪರೀಕ್ಷೆ ಉಪಹಾರ ಮೊದಲಾದ ವ್ಯವಸ್ಥೆ ಮಾಡಲಾಗಿತ್ತು.
ಮೈಂಡ್ ಟ್ರೀಯ ಸಹ ಸಂಸ್ಥಾಪಕ ನಾಮಕಲ್ ಪಾರ್ಥಸಾರಥಿ, ವಿಶ್ವದ ಆರು ಮ್ಯಾರಥಾನಗಳಲ್ಲಿ ಭಾಗವಹಿಸಿ ಐದರಲ್ಲಿ ಜಯಿಸಿರುವ ಮೂರ್ತಿ ಆರ್.ಕೆ, ವೇಗದ ಓಟಗಾತಿ ಅನುಷಾ ಪಾಠಕ್ ಮೊದಲಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು