ಇತ್ತೀಚಿನ ಸುದ್ದಿ
ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು ಹಿಂಡು ಕುಟುಂಬ!
10/09/2025, 13:09

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ತಲೆ ಮೇಲೆ ಒಂದು ಚೀಲ ಬೆನ್ನಿನಲ್ಲಿ ಒಂದು ಬಟ್ಟೆ ತುಂಬಿದ ಬ್ಯಾಗ್ ನಿಂತ ಗಂಡಸರು, ಕಂಕುಳದಲ್ಲಿ ಒಂದು ಮಗು ಅಕ್ಕ ಪಕ್ಕ ಮತ್ತೇರಡು ಮಕ್ಕಳು. ಹಾಸನ ಬಸ್ ಅಂತೂ ಫುಲ್. ಈ ದೃಶ್ಯಗಳು ಕಂಡು ಬಂದದ್ದು ಕುಶಾಲನಗರ ಬಸ್ ನಿಲ್ದಾಣದಲ್ಲಿ.
ಸರಿ ಸುಮಾರು 10 ಗಂಟೆಗೆ ಒಂದರ ಹಿಂದೆ ಒಂದರಂತೆ, ಕೋಣನೂರು, ಅರಕಲಗೋಡು, ಸಕಲೇಶಪುರ, ಚಿಕ್ಕಮಗಳೂರು ಭಾಗಕ್ಕೆ ಕುಶಾಲನಗದಿಂದ ಬಸ್ ಗಳು ಹೆಚ್ಚಾಗಿ ಸಂಚರಿಸುತ್ತದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಹಾಸನ ಬಸ್ ಹತ್ತಿದರೆ, ಬುಧವಾರ ಬಸ್ ನಿರ್ವಾಹಕರು ಸ್ಥಳೀಯರಿಗಿಂತ ಅಸ್ಸಾಂ ಕಾರ್ಮಿಕರನ್ನು ತುಂಬಿಸುವಲ್ಲಿ ಬ್ಯುಸಿ ಆಗಿದ್ದ ದೃಶ್ಯಗಳು ಕಂಡು ಬಂತು. ಕೊಡಗಿನ ಯಾವುದೇ ಖಾಸಗಿ, ಸಾರಿಗೆ ಬಸ್ ಗಳಾಗಲಿ ಕನಿಷ್ಠ ಹತ್ತು ಮಂದಿ ಅಂತೂ ಅಸ್ಸಾಂ ಕಾರ್ಮಿಕರು ಇದ್ದೆ ಇರುತ್ತಾರೆ. ಅವರ ಭಾಷೆ, ಚೀರಾಟ, ವಿಮಲ್ ಪಾನ್ ಮಸಾಲೆ ಘಾಟು ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯದಲ್ಲಿ ಇದೆವೋ ಅನ್ನಿಸುತ್ತದೆ. ಇವರೆಲ್ಲ ನಿಜಕ್ಕೂ ಅಸ್ಸಾಮಿಗಳ ಅಥವಾ ನೆರೆಯ ರಾಷ್ಟ್ರ ಬಾಂಗ್ಲಾದೇಶದವರ ಎಂದು ಅನುಮಾನಿಸುವುದು ಕಷ್ಟ ಕಾರಣ ಇವರ ಬಳಿ ಸ್ಥಳೀಯ ವಿಳಾಸದ ಆಧಾರ್ ಕಾರ್ಡ್ ಗಳಿದೆ. ಒಟ್ಟಿನಲ್ಲಿ, ಕೆಲ ಗಂಟೆಗಳ ಕಾಲ ಸ್ಥಳೀಯರಂತೂ ಬಸ್ ಗಳಲ್ಲಿ ಸೀಟು ಸಿಗದೆ ಹೈರಾಣ ಆಗಿದಂತೂ ಸತ್ಯ.