4:42 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಆರಾಧ್ಯ ಮಠ: ಕ್ಲಾರಾ ಸಹೋದರಿಯರ ಸೇವೆಗೆ ಇಬ್ಬರು ಭಗಿನಿಯರು ಸೇರ್ಪಡೆ

06/01/2024, 19:50

ಮಂಗಳೂರು (reporterkarnataka com):ಮಿಲಾಗ್ರಿಸ್ ಇಲ್ಲಿನ ಆರಾಧ್ಯ ಮಠದ ಬಡ ಕ್ಲಾರಾ ಸಹೋದರಿಯರ ಸೇವೆಗೆ ಇಬ್ಬರು ಭಗಿನಿಯರು ಸೇರ್ಪಡೆಗೊಂಡಿದ್ದಾರೆ. ಮೇರಿ ಮತ್ತು ಸೀನಿಯರ್ ಅವರು ಬಡತನ, ವಿಧೇಯತೆ ಹಾಗೂ ನಿಷ್ಕಲಂಕ ಜೀವನ ಎಂಬ ಧ್ಯೇಯಗಳೊಂದಿಗೆ ಸಭೆಯ ವಾಗ್ದಾನ ಮಾಡಿಕೊಂಡಿದ್ದಾರೆ.

ಮೂವರು ಧರ್ಮ ಭಗಿನಿಯರಿಗೆ ಮಠದ ಉಡುಗೆಗಳನ್ನು ನೀಡಲಾಯಿತು. ಸಿ| ಮೇರಿ ಫ್ರಾನ್ಸಿಸ್ ವಾಗ್ದಾನ ಸ್ವೀಕರಿಸಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ವಂ| ರೆ| ಡಾ| ಅಲೋಶಿಯಸ್ ಪೌಲ್ ಡಿಸೋಜ ಧಾರ್ಮಿಕ ವಿಧಿಗಳೊಂದಿಗೆ ಬಲಿಪೂಜೆ ನೆರವೇರಿಸಿದರು. ಜೈಲ್ ರೋಡ್ ನ ಸಂತ ಅನ್ನ ಫ್ರಾಯರಿಯ ಮುಖ್ಯಾಧಿಕಾರಿ ವಂ| ರೋಕಿ ಡಿ’ಕುನ್ಹಾ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಮಠಕ್ಕೆ ಸೇರ್ಪಡೆಗೊಂಡ ಬಳಿಕ ಧರ್ಮ ಭಗಿನಿಯರು ಸಮಾಜದೊಂದಿಗೆ ಬೆರೆತುಕೊಳ್ಳದೆ ಮಠದೊಳಗೆಯೇ ಇದ್ದು, ಲೋಕ ಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥಿಸುತ್ತಾರೆ. ಮಠದೊಳಗೆ ಇರುವುದರಿಂದ ಇವರನ್ನು ಭಿತರ್ಲಿ ಮಾದ್ರಿ’ (ಮಠದೊಳಗಿನ ಧರ್ಮ ಭಗಿನಿಯರು) ಎಂದು ಕರೆಯಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು