ಇತ್ತೀಚಿನ ಸುದ್ದಿ
Air India Express | ಮಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್: ಏ. 2 ಮತ್ತು 5ರಿಂದ ಹಾರಾಟ ಶುರು
27/03/2025, 19:25

ಮಂಗಳೂರು(reporterkarnataka.com): ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ (ಬುಧವಾರ) ಮತ್ತು ಚೆನ್ನೈಗೆ (ಶನಿವಾರ) ವಿಮಾನ ಯಾನ ಆರಂಭಿಸಲಿದೆ. ಏಪ್ರಿಲ್ 2 ಮತ್ತು ಏಪ್ರಿಲ್ 5 ರಿಂದ ಹಾರಾಟ ಶುರುವಾಗುತ್ತದೆ.
IX 2915 ವಿಮಾನ ಮಂಗಳೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು 8 ಗಂಟೆಗೆ ಹೈದರಾಬಾದ್ ತಲುಪಲಿದೆ. IX 2913 ವಿಮಾನವು ಹೈದರಾಬಾದ್‌ನಿಂದ ಸಂಜೆ 5.25 ಕ್ಕೆ ಹೊರಟು 7.15 ಕ್ಕೆ ಮಂಗಳೂರು ತಲುಪಲಿದೆ.
ಹಾಗೆಯೇ, IX 2917 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 3.40 ಕ್ಕೆ ಚೆನ್ನೈ ತಲುಪಲಿದೆ. ಹಿಂದಿರುಗುವ ವಿಮಾನ, IX 2918 ಚೆನ್ನೈನಿಂದ ಸಂಜೆ 4.20 ಕ್ಕೆ ಹೊರಟು 6 ಗಂಟೆಗೆ ಮಂಗಳೂರನ್ನು ತಲುಪುತ್ತದೆ.
ವಿಮಾನಯಾನ ಸಂಸ್ಥೆಯು ಈ ಎರಡೂ ಮಾರ್ಗಗಳಲ್ಲಿ 186 ಆಸನಗಳ ಬೋಯಿಂಗ್ 737-800 NG ವಿಮಾನವನ್ನು ನಿಯೋಜಿಸಲಿದೆ. ಪ್ರಸ್ತುತ, ಇಂಡಿಗೋ ಈ ಎರಡು ರಾಜಧಾನಿ ಮಾರ್ಗಗಳಿಗೆ 78 ಆಸನಗಳ ATR ವಿಮಾನಗಳ ಸಂಚಾರ ನಡೆಸುತ್ತಿದೆ. ಇಂಡಿಗೋ ಹೈದರಾಬಾದ್‌ಗೆ ಪ್ರತಿದಿನ ಎರಡು ಮತ್ತು ಮೂರು ವಾರಕ್ಕೊಮ್ಮೆ ಮತ್ತು ಚೆನ್ನೈಗೆ ಎರಡು ದೈನಂದಿನ ವಿಮಾನಗಳ ಯಾನ ನಡೆಸುತ್ತಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಎರಡೂ ಹೊಸ ಮಾರ್ಗಗಳಿಗೆ ಬುಕಿಂಗ್ ಅನ್ನು ತೆರೆದಿದೆ.