ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಸೆಪ್ಟೆಂಬರ್ ತಿಂಗಳ ಸಹಾಯ ಕೈದಬೆಟ್ಟು ನಿವಾಸಿ ಮಂಜುನಾಥಗೆ ಹಸ್ತಾಂತರ
06/10/2022, 14:03
ಮಂಗಳೂರು(reporter Karnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಸೆಪ್ಟೆಂಬರ್ ತಿಂಗಳ ಸಹಾಯವನ್ನು ದ.ಕ. ಜಿಲ್ಲೆ ಯ ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ಕೈದ ಬೆಟ್ಟು ನಿವಾಸಿ ಮಂಜುನಾಥ ಅವರ ಮೂತ್ರಕೋಶದ ಗಡ್ಡೆಯ ಅನಾರೋಗ್ಯ ದ ಸಮಸ್ಯೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಯ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಡಾ.ನಾಗರಾಜ ಅಂಬೂರಿ, ದೇವಿಪ್ರಸಾದ್, ದೀನ್ ರಾಜ್ , ಕೆ.ಅಭಿಷೇಕ್ ಶೆಟ್ಟಿ ಐಕಳ, ಬಸವ ರಾಜ್ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್ ಉಡುಪಿ, ನವೀನ್ ಪುತ್ತೂರು. ಗಣೇಶ್ ಪೈ. ವಿವೇಕ್ ಪೈ, ಧನಂಜಯ ಶೆಟ್ಟಿ, ಪ್ರವೀಣ್ ಶೆಟ್ಟಿ, ಲಿಲೇಶ್ ಶೆಟ್ಟಿ ಗಾರ್, ದಿನೇಶ್ ಸಿದ್ದಕಟ್ಟೆ, ನಿಲೇಶ್ ಕಟೀಲು, ಪ್ರಭಾಕರ ಮಂಗಳೂರು, ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.