4:38 AM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ದೆಹಲಿ ಬುಡಕಟ್ಟು ಸಾಂಸ್ಕೃತಿಕ ಸಮಾವೇಶಕ್ಕೆ ಕೊಡಗಿನ 110 ಗಿರಿಜನರ ತಂಡ

22/05/2026, 18:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಮೇ 24ರಂದು ನವದೆಹಲಿಯಲ್ಲಿ ನಡೆಯಲಿರುವ ಅಖಿಲ ಭಾರತ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ಹೊರಟ 110 ಗಿರಿಜನ ಪ್ರತಿನಿಧಿಗಳ ಸಭೆಯು ಗೊಣಿಕೊಪ್ಪ ದುರ್ಗಾ ಭೋಜಿ ಹಾಲ್ ನಲ್ಲಿ ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ ಘಟಕದ ಸಂಚಾಲಕರಾದ ಪಣಿಯರವರ ಭಾಗ್ಯ ಮೋಹನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಾನ್ ಜನನಾಯಕ ಬಿರ್ಸಾ ಮುಂಡಾರವರ 150ನೇ ಜನ್ಮ ಜಯಂತಿ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಈ ಮಹಾ ಸಂಗಮದಲ್ಲಿ ದೇಶದ ಐದು ನೂರಕ್ಕೂ ಹೆಚ್ಚು ಗಿರಿಜನ ಸಮುಧಾಯಗಳಿಂದ ಮೂರು ಲಕ್ಷಕ್ಕೂ ಅಧಿಕ ಗಿರಿಜನ ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಕೊಡಗು ಜಿಲ್ಲೆಯ 6 ಗಿರಿಜನ ಜನಜಾತಿಯ 110 ಪ್ರತಿನಿಧಿಗಳು ಸೇರಿದಂತೆ ರಾಜ್ಯದ 1250 ಪ್ರತಿನಿಧಿಗಳು ವಿಶೇಷ ರೈಲಿನ ಮೂಲಕ ದೆಹಲಿಗೆ ತೆರಳುತ್ತಿದ್ದು ಗಿರಿಜನ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ, ಧಾರ್ಮಿಕ ಪರಂಪರೆ, ಹಾಗೂ ಸಾಮಾಜಿಕ ಮಾಲ್ಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೆಹಲಿಯ ಐದು ವಿಭಿನ್ನ ಪ್ರದೇಶಗಳಿಂದ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಲಿದ್ದು ಗಿರಿಜನ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ವೇಷಭೂಷಣ ,ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ದೇಶದ ಮುಂದೆ ತೆರೆದಿಡಲಿದೆ ಬಳಿಕ ಕೆಂಪು ಕೋಟೆ ಮೈಧಾನದಲ್ಲಿ ಶೋಭಾಯಾತ್ರೆ ಒಂದಾಗಲಿದೆ. ನಂತರ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಗಿರಿಜನ ಮುಖಂಡರು, ಚಿಂತಕರು ಸ್ವಾಮಿಜಿಗಳು ಕಲಾವಿದರು ಹಾಗೂ ಸಮಾಜದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಿರಿಜನ ಮುಖಂಡರಾದ ಸಿದ್ದಪ್ಪನವರು ಮಾತನಾಡಿ ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೋಂದು ಬೃಹತ್ ಪ್ರಮಾಣದಲ್ಲಿ ಒಂದೆಡೆ ಗಿರಿಜನ ಪ್ರತಿನಿಧಿಗಳು ಸಮಾಗಮವಾಗುತ್ತಿರುವುದು ವಿಷೇಶವಾಗಿದ್ದು ದೇಶದಲ್ಲಿ ಅಂದಾಜು 700ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿದ್ದು ಇವರಲ್ಲಿ ಹಲವರು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಈ ನಿಟ್ಟಿನಲ್ಲಿ ಈ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಸಮಾವೇಶದ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾಗಿದೆಯೆಂದರು, ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷರಾದ ಚಕ್ಕೇರ ಮನು ಕಾವೇರಪ್ಪನವರು ದೇಹಲಿಯ ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೂ ಶುಭ ಹಾರೈಸಿದರು ಜೇನುಕುರುಬ ಸಮುದಾಯದ ಪ್ರತಿನಿಧಿಗಳಾದ ಆರ್. ಕೆ ಚಂದ್ರ ,ದೇವರಕಾಡು ನಿತ್ಯ, ಸೋಲಿಗರ ಉಮೇಶ್, ಅಂಚೆತಿಟ್ಟು ಸಂಜೀವ, ಮರಾಠಿ ಸಮುದಾಯದ ಪರಮೇಶ್ವರ್, ವಾಲ್ಮೀಕಿ ಸಮುದಾಯದ ಮುತ್ತುರಾಜ್, ಪ್ರಮುಖರಾದ ಅಮ್ಮುಣಿ, ಚೋಮು, ಶಶಿಕಲಾ, ಜಯಲಕ್ಷ್ಮಿ, ಭೋಜ,ರಿಧೀಶ್ ಮುಂತಾದವರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು