8:16 AM Thursday7 - May 2026
ಬ್ರೇಕಿಂಗ್ ನ್ಯೂಸ್
ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ…

ಇತ್ತೀಚಿನ ಸುದ್ದಿ

ಮಂಗಳೂರಿನ‌ ಚಿನ್ನದ ವ್ಯಾಪಾರಿಗೆ ವಂಚನೆ: ಅಂತಾರಾಜ್ಯ ವಂಚಕನ ತಮಿಳುನಾಡಿನಲ್ಲಿ ಅರೆಸ್ಟ್; 240 ಗ್ರಾಂ ಚಿನ್ನ ಜಪ್ತಿ

29/11/2025, 21:59

ಮಂಗಳೂರು(reporterkarnataka.com):ಚಿನ್ನದಂಗಡಿಯೊಂದರಲ್ಲಿ ಚಿನ್ನದ ಬಿಸ್ಕೆಟ್ ಪಡೆದು ವಂಚನೆ ಮಾಡಿದ ಅಂತಾರಾಜ್ಯ ವಂಚಕನನ್ನು ಪೊಲೀಸರು ಬಂಧಿಸಿ 240 ಗ್ರಾಂ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ನ.22ರಂದು ಸಂಜೆ ಉರ್ವಸ್ಟೋರ್, ಚಿಲಿಂಬಿ, ಗುಜ್ಜಾಡಿ ಚೆಂಬರ್ಸ್‌ನಲ್ಲಿರುವ ಸ್ವರ್ಣ ಜುವೆಲರ್ಸ್ ಅಂಗಡಿಗೆ ಅರುಣ್ ಎಂಬಾತ ಬಂದಿದ್ದ. ಈತ ತಾನು ಬಿಜೈ ಕಾಪಿಕಾಡ್‌ನ ಅಜಂತ್ ಬಿಸಿನೆಸ್ ಸೆಂಟರ್ ನಲ್ಲಿ ತಾನು ಆಫೀಸ್ ತೆರೆಯಲ್ಲಿದ್ದೇನೆ. ಅಲ್ಲಿಗೆ ಬರುವ ಅತಿಥಿಗಳಿಗೆ ಚಿನ್ನದ ಬಿಸ್ಕೆಟ್ ನೀಡಲು ಇದೆ. ಆದ್ದರಿಂದ 10 ಗ್ರಾಂ ತೂಕದ 24 ಚಿನ್ನದ ಬಿಸ್ಕೆಟ್ ಗಳು ಬೇಕು ಎಂದು ಬಿಸ್ಕಿಟ್‌ಗಳ ಡಿಸೈನ್ ಸೆಲೆಕ್ಟ್ ಮಾಡಿದ್ದಾನೆ. ನ.22ರಂದು ಮಧ್ಯಾಹ್ನ 12ಕ್ಕೆ ಅಜಂತ್ ಬಿಸಿನೆಸ್ ಸೆಂಟರ್‌ನಲ್ಲಿರುವ ತನ್ನ ಕಚೇರಿಗೆ ಚಿನ್ನದ ಬಿಸ್ಕೆಟ್ ತಂದುಕೊಡಲು ತಿಳಿಸಿ ಚಿನ್ನ ದೊರೆತ ತಕ್ಷಣ ಹಣವನ್ನು RTGS ಮಾಡುತ್ತೇನೆಂದು ನಂಬಿಸಿದ್ದಾನೆ. ಅದರಂತೆ ಸ್ವರ್ಣ ಜ್ಯುವೆಲರ್ಸ್ ಸಿಬ್ಬಂದಿ ಚಿನ್ನದ ಬಿಸ್ಕೆಟ್‌ಗಳನ್ನು ಕೊಡಲು ಹೋಗಿದ್ದಾರೆ. ಈ ಸಂದರ್ಭ ಆರೋಪಿ ಅಜಂತ ಬಿಸಿನೆಸ್ ಸೆಂಟರ್‌ನ 5ನೇ ಮಹಡಿಯ ಕೆಫೆಟೆರಿಯಾದಲ್ಲಿ ತಲಾ 10 ಗ್ರಾಂ ತೂಕದ 24 ಕ್ಯಾರೆಟ್ 24 ಚಿನ್ನದ ಬಿಸ್ಕಿಟ್‌ಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ತಾನು 3ನೇ ಮಹಡಿಯಲ್ಲಿರುವ ಆಫೀಸ್‌ನಲ್ಲಿ ಹಣ RTGS ಮಾಡುತ್ತೇನೆಂದು ತಿಳಿಸಿ ಹಣ ಪಾವತಿಸದೇ ವಂಚಿಸಿ ಪರಾರಿಯಾಗಿರುತ್ತಾನೆ.
ಸುಮಾರು 31,00,000 ರೂ. ಮೌಲ್ಯದ ಚಿನ್ನವನ್ನು ಪಡೆದು ವಂಚಿಸಿದ ಬಗ್ಗೆ ಸ್ವರ್ಣ ಜ್ಯುವೆಲರ್ಸ್ ಮಾಲಕ ಅಜಯ್ ರಾಮದಾಸ ನಾಯಕ್ ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಈತನ ಬಗ್ಗೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ತಾಂತ್ರಿಕವಾಗಿ ಮಾಹಿತಿ ಕಲೆಹಾಕಿದ್ದಾರೆ‌. ಬಳಿಕ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಅರುಣ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಮಾಹಿತಿ ಪಡೆದು ‌ನ. 26ರಂದು ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪುಲಿಯಕುಲಂ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ. ಆರೋಪಿಯ ಮೇಲೆ ತನಿಖೆ ಮುಂದುವರೆಸಿದಾಗ ಈತನ ಹೆಸರು ಪುಗಲ್ ವಾಸನ್ ಅಲಿಯಾಸ್ ಪುಗಲ್ ಹಸನ್ ಅಲಿಯಾಸ್ ಅರುಣ್(50) ಎಂದು ತಿಳಿದು ಬಂದಿದೆ. ಈತ ನಕಲಿ ಹೆಸರು ಹೇಳಿಕೊಂಡು ವಂಚಿಸುವ ಪ್ರವೃತ್ತಿಯವನಾಗಿದ್ದಾನೆ.
ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿ 31,04,000 ರೂ. ಮೌಲ್ಯದ 240 ಗ್ರಾಂ ತೂಕದ 24 ಕ್ಯಾರೆಟ್ ಶುದ್ದತೆಯ ಚಿನ್ನದ ಬಿಸ್ಕಿಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿ ಈ ಹಿಂದೆ ಮಹಾರಾಷ್ಟ್ರದ ಮುಂಬೈ, ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚಿತ್ತೋಡ್, ಆಂದ್ರಪ್ರದೇಶದ ತಿರುಪತಿಯಲ್ಲಿ ಇದೇ ರೀತಿಯಲ್ಲಿ ವಂಚನೆ ಕೃತವನ್ನು ಎಸಗಿರುತ್ತಾನೆ. ಈ ಬಗ್ಗೆ ಪ್ರಕರಣಗಳು ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು