8:38 AM Wednesday22 - July 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ…

ಇತ್ತೀಚಿನ ಸುದ್ದಿ

ಟೈಗರ್ ಡ್ಯಾನ್ಸ್ ಗೆ ಸ್ಪರ್ಧಾ ಸ್ಪರ್ಶ | ಕುಡ್ಲದ ಪಿಲಿ ಪರ್ಬ 2025 ವಿಧ್ಯುಕ್ತ ಉದ್ಘಾಟನೆ

30/09/2025, 22:21

ಮಂಗಳೂರು(reporterkarnataka.com): ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಕುಡ್ಲದ ಪಿಲಿಪರ್ಬ-2025 ಸೀಸನ್ 4ರ ಉದ್ಘಾಟನಾ ಸಮಾರಂಭವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ಸ್ಪರ್ಶ ಲಭಿಸಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ 10 ಹುಲಿವೇಷ ತಂಡಗಳಿಗೂ ಗಣ್ಯರು ಶುಭ ಹಾರೈಸಿ ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಎಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರಿದರು.
ಸ್ಪರ್ಧಾಕೂಟವು ಇಂದು ರಾತ್ರಿಯವರೆಗೂ ಅದ್ದೂರಿಯಾಗಿ ಸಾಗಲಿದ್ದು ಅಂತಿಮವಾಗಿ ವಿಜೇತ ತಂಡದ ಘೋಷಣೆಯಾಗಲಿದೆ. ಈ ನಡುವೆ ವೀಕ್ಷಕರಿಗಾಗಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿರುವುದು ವಿಶೇಷ.
ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಿ.ಕೆ ಫರ್ನಿಚರ್ಸ್ ನ ವಿಠ್ಠಲ್ ಕುಲಾಲ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ವಿಖ್ಯಾತ್ ಶೆಟ್ಟಿ, ಅನಿಲ್ ಬೋಳೂರು, ಸಂಜಯ್ ಪೈ, ನರೇಶ್ ಪ್ರಭು ಹಾಗೂ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು