5:26 AM Monday2 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಟೂರಿಸಂಗೆ ವಿಫುಲ ಅವಕಾಶ: ವಿವಂತಾ ಹೋಟೆಲ್ ಜಿಎಂ ಸಿಜು ನಂಬಿಯಾರ್

29/09/2025, 14:43

ಚಿತ್ರ/ ವರದಿ: ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ವಿಶ್ವ ವಿದ್ಯಾ ನಿಲಯದ ಎಂಬಿ ಎ ವಿಭಾಗ ಟೂರಿಸಂ ಆ್ಯಂಡ್ ಬ್ಯುಸಿ ನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಶನಿವಾರ ಮಂಗಳೂರು ವಿವಿಯ ಎಂಬಿಎ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ವಿವಂತಾ ಹೋಟೆಲ್ ಜನರಲ್ ಮ್ಯಾನೇಜರ್ ಸಿಜು ನಂಬಿಯಾರ್ ಉದ್ಘಾಟಿಸಿದರು.



ಅವರು ಮಾತನಾಡಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವ ಎಲ್ಲಾ ದೇಶವು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ. ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣವಿದೆ. ಇಲ್ಲಿನ ಬೀಚ್ ದೇವಾಲಯಗಳು ವಿವಿಧ ದೇಶದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ಸರಿಯಾಗಿ ಅವಕಾಶಗಳನ್ನು ಬಳಸಿಕೊಂಡರೆ. ಒಳ್ಳೆಯ ಭವಿಷ್ಯವಿದೆ. ಕರೋನ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಂಗಳೂರಿಗೆ ಐತಿಹಾಸಿಕ ಪರಂಪರೆ ಇದೆ. ಟೂರಿಸಂನಲ್ಲಿ ಅನೇಕ ವಿಭಾಗಳಿದ್ದು ನಿಮ್ಮ ನೆಚ್ಚಿನ ವಿಭಾಗಗಳನ್ನು ಆಯ್ಕೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಅವರು ಹೇಳಿದರು.


ಇನ್ನೊರ್ವ ಅತಿಥಿ ರಂಗ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ಮನುಷ್ಯ ಜೀವನವೇ ಪ್ರವಾಸ, ಜೀವನದುದ್ದಕ್ಕೂ ಪ್ರವಾಸ ಮಾಡುತ್ತಾನೆ. ಜೀವನದಲ್ಲಿ ವಿದ್ಯೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ನಾನೇದರು ಇವತ್ತು ಈ ಹಂತದಲ್ಲಿ ಇದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಶಾಲಾ ಶಿಕ್ಷಕಿ, ನನ್ನ ಎರಡೇ ತಾಯಿ ಸ್ಟೇಲ್ಲ ಟೀಚರ್. ಎಂದು ವಿದ್ಯಾರ್ಥಿ ಜೀವನ ವನ್ನು ಮೆಲುಕು ಹಾಕಿಕೊಂಡರು. ನಾವು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಮಕ್ಕಳು ವಿದ್ಯೆ ಕಲಿತು, ಯಾವುದೇ ಕ್ಷೇತ್ರ ಸಾಧನೆ ಮಾಡಿದರೂ ತಂದೆ ತಾಯಿಯ ಹೆಸರು ಹೇಳದಿದ್ದರೂ ವಿದ್ಯೆ ಕಲಿತ ಗುರುಗಳನ್ನು ಹಾಗೂ ವಿದ್ಯೆ ಕೊಟ್ಟ ಸಂಸ್ಥೆಯನ್ನು ನೆನಪಿಸಿ ಕೊಂಡರೆ ಪೋಷರಿಗೆ ಅದೇ ಖುಷಿ ಎಂದರು.
ಮಂಗಳೂರು ವಿವಿಯಲ್ಲಿ ನನ್ನ ಮಕ್ಕಳು ಕಲಿಯುತ್ತಿದ್ದಾರೆ ಎಂಬ ಹೆಮ್ಮೆ ಇದೆ. ಮಂಗಳೂರು ವಿವಿ ಗೆ ದೇಶ ವಿದೇಶಗಳಲ್ಲೂ ಅದರದ್ದೇ ಆದ ಹೆಸರಿದೆ. ಹಾಗಾಗಿ ಇಲ್ಲಿ ವಿದ್ಯಾರ್ಥಿಗಳಗಿರುವ ನೀವು ಪುಣ್ಯವಂತರು. ಸಂಸ್ಥೆಯ ಹೆಸರು ಉಳಿಸಿ ಬೆಳಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆಯನ್ನು ಮಂಗಳೂರು ವಿವಿ ಪ್ರಾದ್ಯಾಪಕಿ ಪ್ರೊ. ಪರಿಣಿತಾ, ವಿಭಾಗದ ಚೇರ್ ಮ್ಯಾನ್ ಪ್ರೊ. ಶೇಖರ್ ನಾಯ್ಕ್ ಸ್ವಾಗತಿಸಿದರು.


ಉಪನ್ಯಾಸಕರುಗಳಾದ ಪ್ರಥ್ವಿ, ದೀಕ್ಷಾ, ಬಿಲ್ನ. ಕೆ ವಿನ್ ಸೆಂಟ್, ರಂಜಿತಾ ಎನ್, ಅತಿಥಿಗಳನ್ನು ಪರಿಚಯಿಸಿದರು.


ವಿದ್ಯಾರ್ಥಿ ನಾಯಕ ವರದಿ ವಾಚಿಸಿದರು. ಪ್ರಾಧ್ಯಾಪಕ ಡಾ. ಜೋಸೆಫ್ ಪಿ.ಡಿ. ವಂದಿಸಿ, ನಿರೂಪಿಸಿದರು. ಉಪನ್ಯಾಸಕ ಶಿವಣ್ಣ ಪಿ.ಬಿ. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು