7:09 AM Friday30 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಬೈ ಫಿನ್ಸ್ ಈಜು ಸ್ಪರ್ಧೆ: ರೀಮಾ , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್

14/09/2025, 15:16

ಮಂಗಳೂರು(reporterkarnataka.com): ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಆಶ್ರಯದಲ್ಲಿ ನಡೆದ ಮೊಟ್ಟಮೊದಲ ಬೈ ಫಿನ್ಸ್ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವೀ ವನ್ ಕ್ಲಬ್ ನಲ್ಲಿ ತರಬೇತಿ ಪಡೆದ ರೀಮಾ A S , ಅಲೀಟಾ ಡಿಸೋಜಾ, ಸಾರ ಎಲಿಶಾ ಪಿಂಟೊ , ನೋವಾ ಜೋ ಪೈಸ್ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದಿದ್ದಾರೆ
*ವಿಜೇತರ ವಿವರ*
ರೀಮಾ A S ಎರಡು ಚಿನ್ನ ಎರಡು ಬೆಳ್ಳಿ, ಅಲಿಟ ಡಿಸೋಜ ನಾಲ್ಕು ಚಿನ್ನ, ನೋವಾ ಜಾಯ್ ಪಾಯ್ಸ್ ಎರಡು ಚಿನ್ನ ಎರಡು ಬೆಳ್ಳಿ ಸಾರ ಎಲಿಶಾ ಪಿಂಟೊ ಒಂದು ಚಿನ್ನ ಎರಡು ಬೆಳ್ಳಿ,
ಸನ್ನಿಗ್ದ್ ಉಳ್ಳಾಲ ಒಂದು ಬೆಳ್ಳಿ ಒಂದು ಕಂಚು, ಆದ್ವಿಕ್ ಭಾಗ್ಚಿ ಒಂದು ಚಿನ್ನ ಎರಡು ಬೆಳ್ಳಿ ಪ್ರಧ್ಯುಮ್ನ ವಿ ಎರಡು ಚಿನ್ನ ಒಂದು ಬೆಳ್ಳಿ, ಪ್ರಕೃತಿ ಕೆ ಒಂದು ಚಿನ್ನ, ಲಿಪಿಕಾ ಎಸ್ ಒಂದು ಬೆಳ್ಳಿ ಒಂದು ಕಂಚು, ಛವಿ ಒಂದು ಬೆಳ್ಳಿ ಮೂರು ಕಂಚು, ರೇಂಜಿಲ್ ಅಲೆನ್ ಲೋಬೋ ಎರಡು ಬೆಳ್ಳಿ, ಸಾನ್ವಿ ಒಂದು ಬೆಳ್ಳಿ ಒಂದು ಕಂಚು, ನೀಲ್ MG ಒಂದು ಕಂಚು, ಸಿದ್ದಿ ಶೆಟ್ಟಿ ಎರಡು ಚಿನ್ನ , ಅದ್ವಿತ್ ಪ್ರಶಾಂತ್ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು, ಭೂಮಿ ಒಂದು ಚಿನ್ನ ಎರಡು ಬೆಳ್ಳಿ ಒಂದು ಕಂಚು.
ಒಟ್ಟು 17 ಚಿನ್ನ 16 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಅಲ್ಲದೆ ನಾಲ್ಕು ಮಂದಿ ವೈಯಕ್ತಿಕ ಚಾಂಪಿಯನ್ ಗಳಾಗಿ ವಿಜೇತರಾಗಿದ್ದಾರೆ.
ಇವರು ವೀ ವನ್ ಅಕ್ವಾ ಸೆಂಟರ್ ನ ಸಂತ ಅಲೋಷಿಯಸ್ ಈಜುಕೊಳ, ಎಮ್ಮೆ ಕೆರೆ ಸ್ಮಾರ್ಟ್ ಸಿಟಿ ಈಜುಕೊಳ, ಮಂಗಳೂರು ಮಹಾನಗರ ಪಾಲಿಕೆ ಈಜುಕೊಳ, ಹಾಗೂ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ ಇರುವ ಯುವ ಜನ ಸೇವಾ ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.
ಇವರಿಗೆ ಮುಖ್ಯ ತರಬೇತು ದಾರರಾದ ಶ್ರೀ ಲೋಕರಾಜ್ ವಿ ಎಸ್ ವಿಟ್ಲ, ಶ್ರೀ ಅಭಿಲಾಶ್, ಹಾಗೂ ತರಬೇತುದಾರರಾದ ಸುಧೀನ್ ರಾಜ್ ಸಂಜಯ್, ಗಗನ್ ಜಿ ಪ್ರಭು, ಸಂಜೀವ್ ಉಳ್ಳೇಕರ್, ಆರೋಮಲ್, ಪ್ರಣಾಮ್ ತರಬೇತಿ ನೀಡಿದ್ದಾರೆ.
ವಿಜೇತರನ್ನು ವೀ ವನ್ ಎಕ್ವಾ ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್ ಹಾಗೂ ರೂಪ ಜಿ ಪ್ರಭು ಅವರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು