9:27 PM Friday5 - September 2025
ಬ್ರೇಕಿಂಗ್ ನ್ಯೂಸ್
ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ… ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2… ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ…

ಇತ್ತೀಚಿನ ಸುದ್ದಿ

Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ ಟಿಪ್ಪರ್ ಮತ್ತು ಕಾರು ಡಿಕ್ಕಿ

05/09/2025, 21:19

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಬೇರೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಸಡನ್ ಆಗಿ ಬ್ರೇಕ್ ಹಾಕಿದಕ್ಕೆ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಅಡ್ಡವಾಗಿ ತಿರುಗಿ ನಿಂತಿದ್ದ ಟ್ರ್ಯಾಕ್ಟರ್ ಗೆ ಟಿಪ್ಪರ್ ಅಪ್ಪಳಿಸಿರುವ ಮತ್ತು ಅದೇ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿರುವ ಘಟನೆ ವರದಿಯಾಗಿದೆ.


ಇಂದು ಮಧ್ಯಾಹ್ನ ಕೊಡಗರಹಳ್ಳಿ ಸಮೀಪದ ಮಾರುತಿ ನಗರದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ.
ಕೂಡಿಗೆಯ ಆನಿ ಎಂಬುವವರ ಟ್ರ್ಯಾಕ್ಟರ್ ಅನ್ನು ಇಂದು ಮಧ್ಯಾಹ್ನ ರೇವಣ್ಣ ಎಂಬುವವರು ಕೆದಕಲ್ ನಿಂದ ಕೂಡಿಗೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯದ ಮಾರುತಿ ನಗರದ ತಿರುವಿನಲ್ಲಿ ವಾಹನವೊಂದಕ್ಕೆ ಸೈಡ್ ಕೊಡಲೆಂದು ಟ್ರ್ಯಾಕ್ಟರ್ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದಾನೆ ಎಂದು ಹೇಳಲಾಗಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಟ್ರಾಕ್ಟರ್ ನ ಇಂಜಿನ್ ಭಾಗ ರಸ್ತೆಯ ಬಲಭಾಗಕ್ಕೆ ಅಡ್ಡವಾಗಿ ತಿರುಗಿ ನಿಂತುಕೊಂಡಿದೆ. ಇದೇ ಸಂದರ್ಭ ಕುಶಾಲನಗರ ಕಡೆಯಿಂದ ಮಡಿಕೇರಿಗೆ ಜೆಲ್ಲಿ ಕಲ್ಲು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ಟ್ರಾಕ್ಟರ್ ನ ಇಂಜಿನ್ ಗೆ ಅಪ್ಪಳಿಸಿದೆ ಅಲ್ಲದೇ ಟ್ರಾಕ್ಟರ್ ನ ಹಿಂದೆ ಬರುತ್ತಿದ್ದ ಕಾರುವೊಂದು ಟ್ರಾಕ್ಟರ್ ಗೆ ಅಲ್ಪ ಪ್ರಮಾಣದಲ್ಲಿ ಗುದ್ದಿದೆ. ಟಿಪ್ಪರ್ ಅಪ್ಪಳಿಸಿದ ರಭಸಕ್ಕೆ ಟ್ರಾಕ್ಟರ್ ನ ಮುಂಭಾಗದ ಟಯರ್ ಕಿತ್ತು ಬಂದು ನಜ್ಜುಗುಜ್ಜುಗೊಂಡಿದೆ. ಟ್ರ್ಯಾಕ್ಟರ್ ಗೆ ಗುದ್ದಿದ ನಂತರ ಟಿಪ್ಪರ್ ರಸ್ತೆಬದಿಯ ಅಂಚಿನೊಳಗೆ ನುಸುಳಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಬೇಟಿ ನೀಡಿದ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು