6:38 PM Monday7 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಹಸಿ ಕಸ, ಒಣ ಕಸ ಮನೆ ಮನೆಗಳಲ್ಲೇ ವಿಂಗಡಿಸಿ: ತ್ಯಾಜ್ಯ ಸಂಗ್ರಹಕರು ನಮ್ಮ ನಿಮ್ಮ ಹಾಗೆ ಅವರು ಕೂಡ ಮನುಷ್ಯರೇ

23/05/2021, 09:35

ಅನುಷ್ ಪಂಡಿತ್ ಮಂಗಳೂರು

ifo.reporterkarnataka@gmail.com

ಮಂಗಳೂರು ಮಹಾನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆಗಳು ಹಾಗೂ ವಾಣಿಜ್ಯ ಚಟುವಟಿಕೆಯವರ ಹಸಿ ಕಸ ಮತ್ತು ಒಣ ಕಸ ಮೂಲದಲ್ಲೇ ವಿಂಗಡಿಸಿ ಕೊಡಲು ಆದೇಶ ನೀಡಿದೆ. ಈ ಹಿಂದೆಯೂ ಇಂತಹ ಆದೇಶ ನೀಡಿ ಇನ್ನೇನು ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತೇ ಎನ್ನುವಷ್ಟರಲ್ಲಿ ಅದನ್ನು ಕೈಬಿಟ್ಟಿತ್ತು. ಆದರೆ ಇದೀಗ ಮತ್ತೆ ಜಾರಿಗೆ ತಂದಿರುವುದು ಸ್ವಾಗತಾರ್ಹ. 

‘ಕೊಂಡೋಗುವವರಿದ್ದರೆ ಹೇಗೂ ಕೊಟ್ಟರಾಗುತ್ತದೆ’ ಎನ್ನುವುದು ಹೆಚ್ಚಿನವರ ಮನಸ್ಥಿತಿ. ಹಸಿ ಕಸದ ಜತೆಗೆ ಒಡೆದ ಗ್ಲಾಸ್, ಬಾಟಲಿ, ಸಿರಂಜಿ ಹಾಗೂ ಕೊಡಬಾರದ ವಸ್ತುಗಳನ್ನು ತೊಟ್ಟೆಯಲ್ಲಿ ಕಟ್ಟಿ ಕೊಡುತ್ತಿದ್ದರು. ಆದರೆ ಪಚ್ಚನಾಡಿ ಡಪ್ಪಿಂಗ್ ಯಾರ್ಡ್ ನಲ್ಲಿ ಮೂರು ನಾಲ್ಕು ವರ್ಷಗಳ ಹಿಂದೆ ನಡೆದ ಭೀಕರ ತ್ಯಾಜ್ಯ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಪಾಲಿಕೆಗೆ ಚಾಟಿ ಬೀಸಿತ್ತು.ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಇದೀಗ ಒಂದು ನಿರ್ಧಾರಕ್ಕೆ ಬಂದಿದೆ. ಅದೇನೆಂದರೆ ಹಸಿಕಸ ಮತ್ತು ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸುವುದು ಕಡ್ಡಾಯ ಎನ್ನುವುದು. ವಾರದ ಎಲ್ಲ ದಿನಗಳಲ್ಲಿ ಹಸಿ ಕಸವನ್ನು ಪಾಲಿಕೆಯ ತ್ಯಾಜ್ಯ ಸಂಗ್ರಹಕರು ಒಯ್ಯುತ್ತಾರೆ. ಒಣಕಸವನ್ನು ಪ್ರತಿ ಶುಕ್ರವಾರ ಕೊಂಡೋಗುತ್ತಾರೆ.


ಇದೆಲ್ಲ ನಿಜಕ್ಕೂ ಒಳ್ಳೆಯ ಕ್ರಮವೇ. ಆದರೆ ಈಗ ಸಮಸ್ಯೆ ಏನೆಂದರೆ ಪಾಲಿಕೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ 2-3 ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಓಪನ್ ಬಕೆಟ್ ನಲ್ಲಿ ಇಟ್ಟಿರುವ ಹಸಿ ಕಸ ಕೊಳೆತು ವಾಸನೆ ಬರಲಾರಂಭಿಸುತ್ತದೆ. ಜತೆಗೆ ವಿಪರೀತ ಸೊಳ್ಳೆ ಕಾಟ ಶುರುವಾಗುತ್ತದೆ. ಕೊರೊನಾ ಜತೆಗೆ ಇಲ್ಲಿ ಮಲೇರಿಯಾ ಮತ್ತು ಡೆಂಗ್ಯು ಜ್ವರದ ವಿಪರೀತ ಕಾಟವಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಎಲ್ಲ ಪ್ರದೇಶಗಳಿಗೂ ಪೌರಕಾರ್ಮಿಕರು/ತ್ಯಾಜ್ಯ ಸಂಗ್ರಹಕರು ಹೋಗುವ ವ್ಯವಸ್ಥೆಯನ್ನು ಪಾಲಿಕೆಯ ಆರೋಗ್ಯ ಇಲಾಖೆ ಮಾಡಬೇಕು. ಹಾಗೆ ಪೌರ ಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಬೂಟು ಹಾಗೂ ಲಸಿಕೆ ಸೇರಿದಂತೆ


ಸುರಕ್ಷತೆಯ ಎಲ್ಲ ಕ್ರಮಗಳನ್ನು ಒದಗಿಸುವ ವ್ಯವಸ್ಥೆಯನ್ನು ಪಾಲಿಕೆ ಮಾಡಬೇಕು. ಹಾಗೆ ಖಾಯಂ ಪೌರ ಕಾರ್ಮಿಕರನ್ನು ಹಾಗೂ ಹೊರಗುತ್ತಿಗೆಯಲ್ಲಿ ದುಡಿಯುವ ತ್ಯಾಜ್ಯ ಸಂಗ್ರಹಕರಾದ ಪೌರ ಕಾರ್ಮಿಕರನ್ನು ಪಾಲಿಕೆ ಆಡಳಿತ ಹಾಗೂ ಸಾರ್ವಜನಿಕರು ಗೌರವದಿಂದ ಕಾಣುವುದು ಇಂದಿನ ಅಗತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು