8:23 PM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

Raichuru | ವಿರೋಧಿಗಳು ಎಷ್ಟೇ ಅಪ ಪ್ರಚಾರ ಮಾಡಿದರೂ ಬಂಗ್ಲೆ ಕೀರ್ತಿ ಜಾಸ್ತಿ ಆಗುತ್ತದೆ: ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ

29/08/2025, 10:10

ರಾಯಚೂರು(reporterkarnataka.com): ಗ್ರಾಮೀಣ ಭಾಗದ ಪತ್ರಕರ್ತರಿಗೆ ಸೌಲಭ್ಯ ಸಿಗಲು ಬಂಗ್ಲೆ ಮಲ್ಲಿಕಾರ್ಜುನ ಅವರು ಪ್ರತ್ಯೇಕ ಸಂಘಟನೆ ಮಾಡಿ ಧ್ವನಿ ಎತ್ತಿದವರು ಎಂದು ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕ ರಮೇಶ ಹಿರೇಜಂಬೂರು ಹೇಳಿದರು.
ಮಾನ್ವಿ ಪಟ್ಟಣದ ಶಾಸಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್, ವಾಲ್ಮೀಕಿ ಹಾಗೂ ಬಸವಣ್ಣನವರ ವಿಚಾರಧಾರೆ ಅಳವಡಿಸಿಕೊಳ್ಳುವುದರ ಜೊತೆಗೆ ಪತ್ರಕರ್ತರು ಸುದ್ದಿಯ ರೂಪ ಹುಡುಕಿಕೊಳ್ಳುತ್ತಾ ಸಾಗಬೇಕು. ಈ ಹಿಂದೆ ಪತ್ರಿಕೋದ್ಯಮ ಅನ್ನೋದು ಕಷ್ಟಕರವಾಗಿತ್ತು. ಆದರೆ ಇಂದು ಡಿಜಿಟಲ್‌ ಮಾಧ್ಯಮದ ಮುನ್ನೋಟದಿಂದ ಕ್ಷಣಾರ್ಧದಲ್ಲಿ ನಾವು ಸುದ್ದಿಗಳನ್ನು ನೋಡಬಹುದಾಗಿದೆ ಎಂದರು.
ಮಸ್ಕಿ ತಾಲೂಕು ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಾತನಾಡಿ ಬಂಗ್ಲೆ ಮಲ್ಲಿಕಾರ್ಜುನ್ ಅವರ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಅವರ ಕೀರ್ತಿ ಹೆಚ್ಚಿಸುತ್ತದೆ. ಮಲ್ಲಿಕಾರ್ಜುನ ಒಂದು ಅದ್ಭುತ ಶಕ್ತಿ ಎಂದು ಹೇಳಿದರು.
ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮಾತನಾಡಿ,
ಪತ್ರಕರ್ತರ ಭದ್ರತೆಗೆ ಇಂತಹ ಮಹತ್ವದ 10 ಲಕ್ಷ ರೂಪಾಯಿ ಇನ್ಸೂರೆನ್ಸ್ ಯೋಜನೆ ಬಹಳ ಶ್ಲಾಘನೀಯ, ಇದು ಇತರ ಸಂಘಟನೆಗಳಿಗೆ ಮಾದರಿಯಾಗಬೇಕು ಎಂದರು.
ನೂತನ ಅಧ್ಯಕ್ಷ ಪರಶುರಾಮ ಚೌಡ್ಕಿ ಅವರ ನೇತೃತ್ವದಲ್ಲಿ ಧ್ವನಿ ಸಂಘಟನೆ ಸದಸ್ಯರಿಗೆ 10 ಲಕ್ಷ ಇನ್ಸೂರೆನ್ಸ್ ಬಗ್ಗೆ ಆಲೋಚನೆ ಮಾಡಿ ಕುಟುಂಬಕ್ಕೆ ಭದ್ರತೆ ನೀಡುವ ಯೋಜನೆ ಹಮ್ಮಿಕೊಂಡಿರುವುದು ಪ್ರಶಂಸನೀಯ ಕೊಟ್ಟಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಬಣ್ಣ ನಾಯಕ ಬ್ಯಾಗವಾಟ್, ಕಾಂಗ್ರೆಸ್ ಮುಖಂಡ ಖಾಲೀದ್ ಖಾದ್ರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾನ್ವಿ ಘಟಕ ಅಧ್ಯಕ್ಷ ಸುರೇಶ ಕುರ್ಡಿ, ಧ್ವನಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಇಸಾಕ್, ಮಸ್ಕಿ ತಾಲೂಕು ಅಧ್ಯಕ್ಷ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು