3:02 PM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಕುಲಶೇಖರ ಪದವು ಶ್ರೀ ಶನೈಶ್ಚರ ದೇವಸ್ಥಾನ: ಜು.13ರಿಂದ ತನು ಮನ ಧನ ಸಂಗ್ರಹ ಅಭಿಯಾನ

09/07/2025, 21:14

ಮಂಗಳೂರು(reporterkarnataka.com):ಹಿಂದೂ ಯುವ ಸೇನೆಯ ಪದವು ಶಾಖೆಯು ಕಳೆದ ಎರಡೂವರೆ ದಶಕಗಳ ಪೂರ್ವದಲ್ಲಿ ಮಂಗಳೂರಿನ ಕುಲಶೇಖರ ಪದವು ಮೇಗಿನ ಮನೆ ಪರಿಸರದಲ್ಲಿ ನಿರ್ಮಿಸಿದ್ದ ಶ್ರೀ ಶನೈಶ್ಚರ ಮಂದಿರವನ್ನು ದೇವಸ್ಥಾನ ಸ್ವರೂಪದಲ್ಲಿ ಪುನರ್ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ನೆರವೇರಿಸಲಾಗಿದ್ದು, ಈ ದೆಶೆಯಲ್ಲಿ ಗ್ರಾಮದ ಜನರಿಂದ ತನು ಮನ ಧನದ ಸಹಕಾರವನ್ನು ಯಾಚಿಸುತ್ತಿದ್ದು ಜು.13ರಂದು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ 11 ವಲಯ ಸಮಿತಿಗಳನ್ನು ರಚಿಸಲಾಗಿದೆ.
ಈ ಕುರಿತು ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ದುರ್ಗಾ ದೇವಿ ಹಾಗೂ ಮಹಾಗಣಪತಿ ಗುಡಿ ಸಹಿತ ಶ್ರೀ ಶನಿ ದೇವರ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್ 2025ರಲ್ಲಿ ಪ್ರತಿಷ್ಠೆ ಬ್ರಹ್ಮಕಲಶ ನಡೆಸಲಾಗುವುದು ಎಂದು ನವನೀತ್ ಶೆಟ್ಟಿ ಹೇಳಿದರು.
ಈಗಾಗಲೇ ಮಂದಿರದ ಸಮೀಪ 8 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲಾಗಿದ್ದು ಇನ್ನೂ ಹೆಚ್ಚುವರಿ 10 ಸೆಂಟ್ಸ್ ಜಮೀನು ಖರೀದಿ ಮಾಡುವ ಯೋಜನೆ ಇದೆ.
ಈ ಯೋಜನೆಗೆ ಒಟ್ಟು 3 ಕೋಟಿ ರೂಪಾಯಿ ವೆಚ್ಚ ತಗಲಲಿದೆ.
ದೇವಸ್ಥಾನದ ನಿರ್ಮಾಣ ಕಾರ್ಯವು ಊರ ಪರವೂರ ಭಕ್ತರ ಸಹಾಯದಿಂದ ಭರದಿಂದ ಸಾಗುತ್ತಿದ್ದು ಮುಂದಿನ ಕೆಲಸ ಕಾರ್ಯಗಳಿಗೆ ಆರ್ಥಿಕ ಕ್ರೋಡಿಕರಣವಾಗಬೇಕಾಗಿದೆ.
2018ರಲ್ಲಿ ಪದವು ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್‌ನ ನೇತೃತ್ವದಲ್ಲಿ 7 ದಿನ ಪರ್ಯಂತ ಜರಗಿದ್ದ ಚಾರಿತ್ರಿಕ ಶ್ರೀ ಸಗ್ರಹಮುಖ ಶನೈಶ್ಚರ ಮಹಾಯಾಗದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂಸೇವಕರ, ಭಕ್ತರ ಭಕ್ತಿಯ ಫಲಶ್ರುತಿಯಿಂದಾಗಿ ಶನಿದೇವರ ದೇವಸ್ಥಾನವು ನಿರ್ಮಾಣವಾಗುತ್ತಿದೆ ಎಂದವರು ತಿಳಿಸಿದರು.
ಈ ದೆಶೆಯಲ್ಲಿ ಗ್ರಾಮದ ಜನರಿಂದ ತನು ಮನ ಧನದ ಸಹಕಾರವನ್ನು ಯಾಚಿಸುತ್ತಿದ್ದು ಜು.13ರಂದು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ 11 ವಲಯ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು