8:56 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಸಂಘಟಿತ ಪ್ರಯತ್ನದಿಂದ ಶ್ರೀಮಹಾ ಪವಮಾನ ಯಾಗ ಯಶಸ್ವಿ: ರಾಮದಾಸ್ ಬಂಟ್ವಾಳ ಮೆಚ್ಚುಗೆ

26/05/2025, 22:29

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಹಿಂದೂ ಸಮಾಜವನ್ನು ಸಂಘಟಿಸುವ ಮೂಲ ಉದ್ದೇಶದಿಂದ ಮಹಾಪವಮಾನ ಯಾಗ ಯಶಸ್ವಿಯಾಗಿದೆ ಎಂದು ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾನುವಾರ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದ ನೂತನ ಸಭಾಂಗಣದಲ್ಲಿ ನಡೆದ ಮಹಾಪವಮಾನ ಯಾಗದ ಅವಲೋಕನ ಸಭೆಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ಊರಪರವೂರ ಭಕ್ತರ, ಮಾತೆಯರ ಸಕ್ರಿಯ ಭಾಗವಹಿಸುವಿಕೆ ಯಾಗದ ಯಶಸ್ಸಿಗೆ ಕಾರಣವಾಯಿತು. ಸುಮಾರು ೫ ಸಾವಿರಕ್ಕೂ ಅಧಿಕ ಮಂದಿ ಯಾಗದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಮೇ ೧೬ರಿಂದ ೧೮ರ ವರೆಗೆ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದಲ್ಲಿ ೧೦೮ ಪವಮಾನ ಪಾರಾಯಣ ಸಹಿತ ಶ್ರೀ ಮಹಾಪವಮಾನ ಯಾಗ, ೧೦೮ ಲಕ್ಷ ಶ್ರೀರಾಮ ನಾಮ ತಾರಕ ಜಪಯಜ್ಞ, ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ, ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತ್ತು.
ಮಂದಿರ ಸಮಿತಿ ಗೌರವಾಧ್ಯಕ್ಷ ಸೇಸಪ್ಪ ದಾಸಯ್ಯ, ಆರೆಸ್ಸೆಸ್ ಮುಖಂಡ ವಿನೋದ್ ಕೊಡ್ಮಾಣ್, ಪ್ರಮುಖರಾದ ಗಣೇಶ್ ದಾಸ್ ಕಾಮೆರೆಕೋಡಿ, ಶೇಖರ ಶೆಟ್ಟಿ ಪೊಟ್ಟುಗುಡ್ಡೆ, ತಾರನಾಥ ಕೊಟ್ಟಾರಿ ತೇವು, ಉಮೇಶ್ ಗಾಂದೋಡಿ, ಹರಿಪ್ರಸಾದ್ ಭಂಡಾರಿಬೆಟ್ಟು, ಸಂದೇಶ್ ದರಿಬಾಗಿಲು, ಸತೀಶ್ ಪಲ್ಲಮಜಲು, ದಿವಾಕರ ಶೆಟ್ಟಿ ಕುಪ್ಪಿಲ, ನಿತೇಶ್ ಪಲ್ಲಮಜಲು, ಪ್ರಶಾಂತ್ ಬೆದ್ರಗುಡ್ಡೆ, ಮನೋಜ್ ಪಲ್ಲಮಜಲು, ಚೈತನ್ಯ ಗಣೇಶ್ ದಾಸ್, ಜ್ಯೋತಿ ಮಧು ಆಚಾರ್ಯ, ದೀಕ್ಷಿತಾ, ನಿವೇದಿತಾ, ಯಶಸ್ವಿನಿ ಉಮೇಶ್ ಕುಲಾಲ್, ಹೊನ್ನಮ್ಮ ಆನಂದ ಗೌಡ, ಶಶಿಕಲಾ ಸದಾಶಿವ, ರಮಿತಾ ಸುರೇಶ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು