3:50 AM Thursday23 - July 2026
ಬ್ರೇಕಿಂಗ್ ನ್ಯೂಸ್
ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ… ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ: 3… ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ… ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:…

ಇತ್ತೀಚಿನ ಸುದ್ದಿ

DK BJP | ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್ ನಿಂದ ಪೊಲೀಸ್ ಇಲಾಖೆಯ ದುರ್ಬಳಕೆ: ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪ

01/05/2025, 20:20

ಮಂಗಳೂರು(reporterkarnataka.com):ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಿರಂತರವಾಗಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು‌ ಕೇಸುಗಳನ್ನು ಹಾಕುವುದರ ಮೂಲಕ ಮಾನಸಿಕವಾಗಿ ಕುಗ್ಗಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯನ್ನು ಬಳಸಿ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷಸತೀಶ್ ಕುಂಪಲ ಆರೋಪಿಸಿದರು.
ದೇಶದ ಪರವಾಗಿ, ಹಿಂದುತ್ವದ ಕಾರ್ಯ ನಡೆಸುತ್ತಿರುವ ಕಾರ್ಯಕರ್ತರನ್ನು ಕಂಡಾಗ ಕಣ್ಣು ಕೆಂಪಾಗುವ ಸಿದ್ದರಾಮಯ್ಯ ನವರು ದೇಶದ್ರೋಹಿ ಕಿಡಿಗೇಡಿಗಳ ಬಗ್ಗೆ ಮೃದುತ್ವ ಪ್ರದರ್ಶಿಸಿ ಬಣ್ಣ ಬದಲಾಯಿಸುತ್ತಾರೆ. ಈ ಮೂಲಕ ರಾಜ್ಯದಲ್ಲಿ ಸಂವಿಧಾನಕ್ಕೆ ವಿರುದ್ದವಾಗಿ ಸರ್ಕಾರ ಆಡಳಿತ ನಡೆಸುತ್ತಿದೆ.
ವಿಧಾನ ಸಭೆಯ ಒಳಗಡೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಗೊಳ್ಳಲು ತೋರಿದ ವಿಳಂಬ ರಾಜ್ಯದಲ್ಲಿ ನಡೆದ ಮತಾಂಧ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸರ್ಕಾರದ ಮೌನ, ಪಾಕಿಸ್ತಾನ ಧ್ವಜಕ್ಕೆ ಪ್ರೀತಿ ತೋರಿದವರ ವಿರುದ್ಧ ಕ್ರಮ ಜರುಗಿಸಲು ನಿರ್ಲಕ್ಷ್ಯ ಗಳ ಪರಿಣಾಮವಾಗಿ ಮಂಗಳೂರಿನ ಕುಡುಪಿನಲ್ಲಿ ದೇಶದ್ರೋಹಿಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ಧೈರ್ಯ ಬಂದಿದೆ‌. ಅಲ್ಲಿ‌ನಡೆದ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯು ಅಮಾಯಕರನ್ನು ಬಂದಿಸಿರುವುದು, ಮನೆಗಳಿಗೆ ದಾಳಿ ನಡೆಸುತ್ತಿರುವುದು ಕಾಂಗ್ರೆಸ್ ನ‌ ಕುಮ್ಮಕ್ಕಿ ನಿಂದ ನಡೆಯುತ್ತಿದೆ. ಇಂತಹ ಘಟನೆಗಳಿಂದ ದೇಶಭಕ್ತರು ರೋಷ ಗೊಂಡಿದ್ದಾರೆ. ಸರ್ಕಾರ ಸಂಪೂರ್ಣವಾಗಿ ಮತಾಂಧರ ಪರವಾಗಿಯೇ ಇರುವಂತಹ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ. ಮಂಗಳೂರಿನ ಕುಡುಪು ಪರಿಸರದ ಘಟನೆಯನ್ನು ಕಾಂಗ್ರೆಸ್ ರಾಜಕೀಯ ದುರುದ್ದೇಶಕ್ಕಾಗಿ ಬಳಸುತ್ತಿದೆ. ಪೊಲೀಸ್ ಇಲಾಖೆಯನ್ನು ಕೈಗೊಂಬೆಯಾಗಿಸುತ್ತಿದೆ. ಇದನ್ನು ಭಾರತೀಯ ಜನತಾ ಪಾರ್ಟಿಯು ಸಹಿಸಲು ಸಾಧ್ಯವಿಲ್ಲ, ಶಾಂತಿಯುತ ದಕ್ಷಿಣ ಕನ್ನಡ ವನ್ನು ಕದಡುವ ಷಡ್ಯಂತ್ರ ನಡೆಯುತ್ತಿದೆ, ಸಂಘಟನೆಯ, ಪಕ್ಷದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕುಂಪಲ ಆಗ್ರಹಿಸಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವ ಕಾಂಗ್ರೆಸ್ ನ ಭಂಡ ಪ್ರಯತ್ನ ಎಂದಿಗೂ ಯಶಸ್ವಿಯಾಗದು. ಕುಡುಪು ಪ್ರಕರಣದ ಬಗ್ಗೆ ಕೂಲಂಕುಷವಾದ ತನಿಖೆಯಾಗ ಬೇಕಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ ನ ಕಪಿಮುಷ್ಠಿಯಲ್ಲಿದೆ ಎನ್ನುವುದನ್ನು ಕಳಚಿಸುವ ದಿಟ್ಟತನ ಪೊಲೀಸರಿಂದ ಆಗಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ಇಲಾಖೆಯೇ ಹೊಣೆ ಹೊರೆ ಹೊರಬೇಕಾದೀತು ಎಂದು ಕುಂಪಲ ರವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು