6:46 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಕಲ್ಲಡ್ಕ ಕೇಟಿಗೆ 70ರ ಸಂಭ್ರಮ!: ಹಾಲಿನ ಮೇಲೆ ಲೀಲಾಜಾಲವಾಗಿ ತೇಲುವ ಟೀ ಡಿಕಾಕ್ಷನ್ ಇದರ ಸ್ಪೆಷಾಲಿಟಿ !!

26/04/2025, 17:01

ಜಯಾನಂದ ಪೆರಾಜೆ ಬಂಟ್ವಾಳ

info.reporterkarmatak@gmail.com

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಬಿ.ಸಿ.ರೋಡಿನಿಂದ 4-5 ಕಿಮೀ ಅಂತರದಲ್ಲಿ ಸಿಗುವ ಪುಟ್ಟ ಪೇಟೆಯೇ ಕಲ್ಲಡ್ಕ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಪೇಟೆ ಹಲವು ವಿಷಯಗಳಿಗೆ ಪ್ರಖ್ಯಾತಿ ಪಡೆದಿದೆ. ಅಂತಹದರಲ್ಲೊಂದು ಇಲ್ಲಿನ ಕೆ.ಟಿ. ಎಂಬ ಸ್ವಾದಿಷ್ಟವಾದ ಚಹಾ ಕೂಡ ಸೇರಿದೆ. ಅಂತಹ ಚಹಾ ಇಂದು 70ರ ಸಂಭ್ರಮದಲ್ಲಿದೆ.
ಕಲ್ಲಡ್ಕ ಟೀಯನ್ನೇ ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಕೆ.ಟಿ. ಎಂದು ಕರೆಯುತ್ತಾರೆ. ಇದು ಸುಮಾರು 70 ವರ್ಷಗಳ ಹಿಂದೆ ಇಟ್ಟ ಹೆಸರು. ಮಂಗಳೂರು- ಬೆಂಗಳೂರು ಹೆದ್ದಾರಿಯಾಗಿ ಸಂಚರಿಸುವ ಸಾಮಾನ್ಯ ವ್ಯಕ್ತಿಯಾಗಲಿ, ವಿಐಪಿಯಾಗಲಿ ಇಲ್ಲಿನ ಕೇಟಿ ಸವಿಯದೆ ಮುಂದೆ ಸಾಗುವುದೇ ಬಹಳ ಅಪರೂಪ.
ಸುಮಾರು 70 ವರ್ಷಗಳ ಹಿಂದೆ ಇಲ್ಲಿನ ಲಕ್ಷ್ಮೀ ನಾರಾಯಣ ಹೊಳ್ಳ ಎಂಬವರು ಲಕ್ಷ್ಮೀ ನಿವಾಸ ಎಂಬ ಹೊಟೇಲ್ ತೆರೆದು ಕೇಟಿ ಎಂಬ ಸ್ವಾದಿಷ್ಟವಾದ ಚಹಾವನ್ನು ಇಡೀ ಊರಿಗೆ ಪರಿಚಯಿಸುತ್ತಾರೆ. ಮುಂದೆ ಇದು ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಪ್ರಸಿದ್ದಿ ಪಡೆಯುತ್ತದೆ. ಹೊರ ದೇಶದವರು ಕೂಡ ಇದರ ಸವಿಗೆ ತಲೆದೂಗಿದ್ದಾರೆ.
ಸಮ ಪ್ರಮಾಣದ ಸಕ್ಕರೆ, ಚಾ ಹುಡಿಯ ಡಿಕಾಕ್ಷನ್, ದಪ್ಪ ಹಾಲಿನಲ್ಲಿ ಸೇರಿದಾಗ ಕೇಟಿ ರೆಡಿಯಾಗುತ್ತದೆ. ಹಾಲಿನ ಮೇಲೆ ಲೀಲಾಜಾಲವಾಗಿ ತೇಲುವ ಟಿ ಡಿಕಾಕ್ಷನ್ ನೋಡುವುದೇ ಒಂದು ಸೊಬಗು. ಗ್ಲಾಸನ್ನು ಎರಡು ತುಟಿಗಳ ಮಧ್ಯೆ ಸಿಲುಕಿಸಿ ಒಂದು ಸಿಪ್ ಗಂಟಲಿನೊಳಗೆ ಇಳಿಯುತ್ತಿದ್ದಂತೆ
ಪರಮಾನಂದವಾಗುತ್ತದೆ. ಮತ್ತಷ್ಟು ಮತ್ತಷ್ಟು ಕುಡಿಯುವ ಬಯಕೆ ಉಂಟಾಗುತ್ತದೆ. ಇದರ ಸ್ವಾದಕ್ಕೆ ಒಂದೇ ಸಿಟ್ಟಿಂಗ್ ನಲ್ಲಿ ಎರಡು ಮೂರು ಕೇಟಿ ಕುಡಿದವರು ಕೂಡ ಉಂಟು.
ಕಲ್ಲಡ್ಕದಲ್ಲಿ ಚತುಷ್ಪಥ ಫ್ಲೈ ಓವರ್ ಕಾಮಗಾರಿ ಶುರುವಾದ ನಂತರ ಕೆಟಿ ಹೊಟೇಲ್ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ಪ್ರವೇಶ ದ್ವಾರದ ಪಕ್ಕದಲ್ಲೇ ಲಕ್ಷ್ಮೀ ಗಣೇಶ ಹೊಟೇಲ್ ಹೆಸರಿನಲ್ಲಿ ತೆರೆದುಕೊಂಡಿದೆ.


ಕಲ್ಲಡ್ಕ ದಾರಿಯಾಗಿ ಪ್ರಯಾಣಿಸುವವರು ತಮ್ಮ ವಾಹನ ನಿಲ್ಲಿಸಿ ಕೇಟಿ ಹೊಟೇಲಿಗೆ ಭೇಟಿ ನೀಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ರಾಜ್ಯದಲ್ಲಿಯೇ ವಿಶಿಷ್ಟವಾದ ಫ್ಲೈ ಓವರ್ ನಿರ್ಮಾಣವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಕೆಳಗಡೆ ದಶಕಗಳ ಇತಿಹಾಸವಿರುವ ಕಪ್ಪುಬಿಳಿ ಚಾ “ಕೇಟಿ” ನೀವೊಮ್ಮೆ ಸವಿಯಲೇ ಬೇಕು. ಇದರ ಜತೆಗೆ ರಿಂಜಿಂ ಕಾಫಿಯನ್ನೂ ಸವಿಯಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು