11:28 AM Wednesday12 - March 2025
ಬ್ರೇಕಿಂಗ್ ನ್ಯೂಸ್
Education | ಗುಣಮಟ್ಟದ, ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ಸರ್ಕಾರದ ಗುರಿ: ಸಚಿವ ಡಾ.ಎಂ.ಸಿ… ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ಬಿಜೆಪಿ ವಿರೋಧ; ಇದು ಸಂವಿಧಾನ ವಿರೋಧಿ: ಪ್ರತಿಪಕ್ಷ… Global warming | ಹೆಚ್ಚುತ್ತಿರುವ ತಾಪಮಾನ: ಮೈಸೂರು ಝೂ ಪ್ರಾಣಿಗಳಿಗೆ ವಾಟರ್ ಜೆಟ್,… ರಂಜಾನ್ ಮಾಸ: ಸಮೋಸಕ್ಕೆ ಭಾರೀ ಡಿಮಾಂಡ್; ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಮಾರಾಟ ರೈತರ ಐಪಿ ಸೆಟ್‌ಗಳಿಗೆ ಹೆಚ್ಚುವರಿ 2 ತಾಸು ವಿದ್ಯುತ್‌ ಪೂರೈಕೆ ಬಗ್ಗೆ ಸರಕಾರ… Higher Education | ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸಲು ಆದ್ಯತೆ::ಉನ್ನತ ಶಿಕ್ಷಣ ಸಚಿವ… APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ… Govt Hospital | ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬೆಳಿಗ್ಗೆ 9ರಿಂದ ಸಂಜೆ…

ಇತ್ತೀಚಿನ ಸುದ್ದಿ

IISC | ಆರೋಗ್ಯಕರ ವಯಸ್ಸಾಗುವಿಕೆ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿ: ಲಾಂಗಿವಿಟಿ ಇಂಡಿಯಾ ಕಾನ್ಫರೆನ್ಸ್‌ ನಲ್ಲಿ ಹೆಲ್ತ್ ಮಿನಿಸ್ಟರ್

11/03/2025, 01:10

ಬೆಂಗಳೂರು(reporterkarnataka.com): ಉತ್ತಮ ಆರೋಗ್ಯಾಭ್ಯಾಸ ಹೊಂದುವುದರಿಂದ ಮಾತ್ರ ಪ್ರತಿಯೊಬ್ಬರು ಆರೋಗ್ಯವಂತ ದೀರ್ಘಾಯುಷಿಯಾಗಲು ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.
ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ಆಯೋಜಿಸಿದ್ದ “ಲಾಂಗಿವಿಟಿ ಇಂಡಿಯಾ ಕಾನ್ಫರೆನ್ಸ್‌” (ದೀರ್ಘಾಯುಷ್ಯ ಭಾರತ ಸಮ್ಮೇಳನ)ವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಆರೋಗ್ಯವಂತರಾಗಿ ಹೆಚ್ಚು ಕಾಲ ಬದುಕುವುದು ಸವಾಲಿನ ವಿಷಯವಾಗಿದೆ. ನಮ್ಮ ಆಹಾರಭ್ಯಾಸಗಳು ನಮ್ಮನ್ನು ಅನಾರೋಗ್ಯದತ್ತ ಕೊಂಡೊಯ್ಯುತ್ತಿದೆ. ಎಷ್ಟು ವರ್ಷ ಬದುಕಿದ್ದೆವು ಎನ್ನುವುದಕ್ಕಿಂತ ಎಷ್ಟು ವರ್ಷ ಆರೋಗ್ಯವಾಗಿ ಬದುಕುತ್ತೇವೆ ಎನ್ನುವುದು ಮುಖ್ಯ. ಆರೋಗ್ಯವಂತ ದೀರ್ಘಾಯಸ್ಸು ಹೊಂದಲು ಪ್ರತಿಯೊಬ್ಬರು ಇಂದಿನಿಂದಲೇ ಉತ್ತಮ ಆರೋಗಭ್ಯಾಸ ಪ್ರಾರಂಭಿಸಬೇಕು, ಆಗಷ್ಟೇ ಹೆಚ್ಚು ಕಾಲ ಆರೋಗ್ಯವಾಗಿ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದು ಹೇಳಿದರು.
ಎನ್‌ಯುಎಸ್‌ನ ಆರೋಗ್ಯಕರ ದೀರ್ಘಾಯುಷ್ಯ ಕೇಂದ್ರದ ನಿರ್ದೇಶಕ ಬ್ರಿಯಾನ್ ಕೆನಡಿ ಮಾತನಾಡಿ, ಈ ಸಮ್ಮೇಳನದ ಮೂಲಕ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಜನರು ಆರೋಗ್ಯಕರವಾಗಿ ವಯಸ್ಸಾಗುವ ಬಗ್ಗೆಯೂ ಆದ್ಯತೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಪ್ರತಿಯೊಬ್ಬರಿಗೂ ವಯಸ್ಸಾಗಲಿದೆ ಆದರೆ ಅವರು ವಯಸ್ಸಾದ ಸಂದರ್ಭದಲ್ಲಿ ಎಷ್ಟು ಆರೋಗ್ಯವಾಗಿದ್ದಾರೆ ಎಂಬುದು ಮುಖ್ಯ. ಇದಕ್ಕಾಗಿ ವಿಜ್ಞಾನದ ಹೆಜ್ಜೆ ಹಾಗೂ ಜನರಲ್ಲಿನ ಜಾಗೃತಿ ಬಗ್ಗೆಯೂ ಈ ಸಮ್ಮೇಳನದಲ್ಲಿ ಚರ್ಚೆಯಾಗುತ್ತಿರುವುದು ಪ್ರಶಂಸನಾರ್ಹ ಎಂದು ಹೇಳಿದರು.
ಐಐಎಸ್‌ಸಿ ಇಂಟರ್ ಡಿಸಿಪ್ಲಿನರಿ ಸೈನ್ಸಸ್ ವಿಭಾಗದ ಡೀನ್ ನವಕಂತ ಭಟ್ ಮಾತನಾಡಿ, ಭಾರತದಲ್ಲಿ ಮುಂದಿನ ದಿನಗಳಲ್ಲಿ ವಯಸ್ಸಾಗುವವರ ಸರಾಸರಿ ಪ್ರಮಾಣ ಹೆಚ್ಚಾಗಲಿದೆ. ಆದರೆ, ಇಂದು ನಮ್ಮ ಜೀವನಶೈಲಿ, ಆಹಾರಕ್ರಮ ಗಮನಿಸಿದರೆ ಭವಿಷ್ಯದ ಬಗ್ಗೆ ಯೋಚನೆ ಮೂಡಲಿದೆ. ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕೆ ಯಾವೆಲ್ಲಾ ಕ್ರಮದ ಅಗತ್ಯ ಎಂಬುದರ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು, ಅನುವಂಶಿಕ ಕಾಯಿಲೆಗಳ ನಿರ್ವಹಣೆ, ಪರಿಸರದಿಂದ ಆಗುವ ಆರೋಗ್ಯ ಸಮಸ್ಯೆ ಸೇರಿದಂತೆ ವಯಸ್ಸಾದ ಬಳಿಕ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಆಯಾ ಕ್ಷೇತ್ರದ ವೈದ್ಯ ಹಾಗೂ ವಿಜ್ಞಾನ ತಜ್ಞರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈಗಿಂದಲೇ ಈ ವಿಷಯಕ್ಕೆ ಗಮನ ನೀಡದೇ ಹೋದಲ್ಲಿ ಭವಿಷ್ಯದಲ್ಲಿ ಪ್ರತಿಯೊಬ್ಬರೂ ಅನಾರೋಗ್ಯದ ಜೀವನ ಸಾಗಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಅಧಿವೇಶದಲ್ಲಿ ಆರೋಗ್ಯದ ವಯಸ್ಸಾಗುವಿಕೆಯ ಪ್ರಮಾಣವನ್ನು ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು, ಸವಾಲುಗಳ ಬಗ್ಗೆ ತಜ್ಞರಿಂದ ಚರ್ಚೆ ನಡೆಯಿತು.
ಸಮಾವೇಶದಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು