8:37 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕತಾರ್ ನ “ತುಳು ಜಾತ್ರೆ” ಯಲ್ಲಿ ಮಿಂಚಿದ ಬಿಲ್ಲವಾಸ್ ಕತಾರ್ ನ “ಅಮ್ಮನ ತಮ್ಮನ” ತಂಡ

20/02/2025, 21:33

ದೋಹಾ(reporterkarnataka.com): ‘ತುಳು ಕೂಟ ಕತಾರ್’ ಆಶ್ರಯದಲ್ಲಿ “ತುಳು ಜಾತ್ರೆ” “ಐಡಿಯಲ್ ಇಂಡಿಯನ್ ಸ್ಕೂಲ್”, ಕತಾರ್ ನ ರಂಗವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. ತುಳುವರ ಪಾರಂಪರಿಕ ಪರಿಕಲ್ಪನೆ “ತುಳು ಜಾತ್ರೆ” ಯ ಅಂಗವಾಗಿ ನೃತ್ಯ,ಯಕ್ಷಗಾನ, ಪ್ರತಿಭಾ ಪುರಸ್ಕಾರ, ಜಾನಪದ ಆಟಗಳು ಮತ್ತು ವಿವಿಧ ತುಳು ನಾಡಿನ ತಿನಿಸುಗಳ ಪ್ರದರ್ಶನಗೊಂಡಿತು. ಸಾವಿರಗಟ್ಟಲೆ ಜನರು ಭಾಗವಹಿಸಿ ತಮ್ಮ ಊರಿನ ಜಾತ್ರೆಯ ಆನಂದವನ್ನು ಕತಾರ್ ನ ಮಣ್ಣಿನಲ್ಲಿ ಅನುಭವಿಸಿದರು.
ಬಿಲ್ಲವಾಸ್ ಕತಾರ್ ನ ಅವಿಭಾಜ್ಯ ಅಂಗವಾದ “ಅಮ್ಮನ ತಮ್ಮನ” ತಂಡದವರು ವಿಶೇಷವಾದ ಆಕರ್ಷಣೆಯೊಂದಿಗೆ ಎಲ್ಲರಿಗಿಂತ ವಿಭಿನ್ನವಾಗಿ ತಮ್ಮ ತಿನಿಸಂಗಡಿಯನ್ನು ಅಲಂಕಾರ ಮಾಡಿದ್ದು ಹಾಗೂ ವಿಶೇಷವಾಗಿ ಮನೆಯಲ್ಲಿ ಸಿದ್ದಪಡಿಸಿದ ಅಡುಗೆ ಜನರ ಮನ ತಣಿಸುವುದರೊಂದಿಗೆ ಭಾರೀ ಮನ್ನಣೆಯನ್ನು ಪಡೆಯುವಲ್ಲಿ ಸಾರ್ಥಕವಾಯಿತು.
ತುಳು ಜಾತ್ರೆಯಲ್ಲಿ ಪ್ರತೀ ಭಾರಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುವ “ಅಮ್ಮನ ತಮ್ಮನ” ತಂಡದ ಇದು ಮೂರನೆಯ ವರ್ಷದ ಪ್ರದರ್ಶನವಾಗಿದೆ ಎನ್ನುವುದು ಉಲ್ಲೇಖನೀಯ.
ಈ ಭಾರಿಯ ರುಚಿ ರುಚಿ ಅಡುಗೆ ಮತ್ತು ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಮನ ಸೋತ ತುಳು ಕೂಟ ಕತಾರ್, “ಅಮ್ಮನ ತಮ್ಮನ” ತಂಡದವರನ್ನು ಅತ್ಯುತ್ತಮ ತಂಡವೆಂದು ಘೋಷಿಸಿ ಪ್ರಶಸ್ತಿಯನ್ನಿತ್ತು ಮನ್ನಿಸಿತು. “ಅಮ್ಮನ ತಮ್ಮನ” ತಂಡದವರ ಪರಿಶ್ರಮಕ್ಕೆ ಸಂದ ಸಮಯೋಚಿತ ಗೌರವವಿದು.

ಇತ್ತೀಚಿನ ಸುದ್ದಿ

ಜಾಹೀರಾತು