5:49 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

Delhi CM | ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ; ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ

19/02/2025, 23:39

ನವದೆಹಲಿ(reporterkarnataka.com): ದೆಹಲಿಯ ನೂತನ ಮುಖ್ಯಮಂತ್ರಿಯಾಗಿ 50ರ ಹರೆಯದ ರೇಖಾ ಗುಪ್ತಾ ಆಯ್ಕೆಗೊಂಡಿದ್ದಾರೆ.
ಬಾಲ್ಯದಿಂದಲೂ ಆರೆಸ್ಸೆಸ್‌ ಎಬಿವಿಪಿ ಜೊತೆ ಸಹಯೋಗ ಹೊಂದಿದ್ದ ರೇಖಾ ಗುಪ್ತಾಗೆ ದೆಹಲಿಯ ಮುಖ್ಯಮಂತ್ರಿ ಗದ್ದುಗೆ ಒಲಿದಿದೆ.
ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಹೆಸರನ್ನು ಅಂತಿಮಗೊಳಿಸಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ 11 ದಿನಗಳ ಬಳಿಕ ಈ ಆಯ್ಕೆ ನಡೆದಿದೆ.
ದೆಹಲಿಯ ಶಾಲಿಮಾರ್‌ ಭಾಗ್‌ ಕ್ಷೇತ್ರದ ಶಾಸಕಿಯಾಗಿರುವ ರೇಖಾ ಗುಪ್ತಾ ಹೆಸರನ್ನು ಸಿಎಂ ಸ್ಥಾನಕ್ಕೆ ಆರೆಸ್ಸೆಸ್‌ ಸೂಚಿಸಿತ್ತು ಎನ್ನಲಾಗಿದೆ. ಆರೆಸ್ಸೆಸ್ ಸೂಚನೆಯನ್ನು ಒಪ್ಪಿಕೊಂಡ ಶಾಸಕಾಂಗ ಸಭೆ ರೇಖಾ ಗುಪ್ತಾರನ್ನು ಸಿಎಂ ಆಗಿ ಘೋಷಣೆ ಮಾಡಿದೆ.
1974ರ ಜುಲೈ 19ರಂದು ಹರಿಯಾಣದ ಜುಲನಾದಲ್ಲಿ ಜನಿಸಿದ್ದ ರೇಖಾ ಗುಪ್ತಾ, ಬಿಕಾಂ, ಎಲ್‌ಎಲ್‌ಬಿ ಪದವೀಧರೆ. ರೇಖಾ ಅವರ ವಿವಾಹ ಮನೀಷ್‌ ಗುಪ್ತಾ ಅವರೊಂದಿಗೆ 1998ರಲ್ಲಿ
ನಡೆದಿತ್ತು. ಮನೀಶ್ ಅವರು ವಾಹನಗಳ ಸ್ಪೇರ್‌ ಪಾರ್ಟ್ಸ್‌ಗಳ ವ್ಯವಹಾರ ನಡೆಸುತ್ತಿದ್ದಾರೆ. ರೇಖಾ ಈ ಹಿಂದೆ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಮೊದಲ ಬಾರಿಗೆ ಅವರು 11 ಸಾವಿರ ಮತಗಳಿಂದ ಸೋತಿದ್ದರು. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಂದನಾ ವಿರುದ್ಧ ನಾಲ್ಕೂವರೆ ಸಾವಿರ ಮತಗಳಿಂದ ಸೋತಿದ್ದರು.
…..

ರೇಖಾ ಅವರ ಅಜ್ಜ ಮಣಿರಾಮ್ ಮತ್ತು ಕುಟುಂಬ ಸದಸ್ಯರು ಹರಿಯಾಣದ ಜುಲಾನಾದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಜೈ ಭಗವಾನ್ 1972-73ರಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್‌ ಆದ ಬಳಿಕ, ಅವರನ್ನು ದೆಹಲಿಗೆ ಟ್ರಾನ್ಸಫರ್‌ ಮಾಡಲಾಯಿತು. ಆ ಬಳಿಕ ಅವರ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. ರೇಖಾ ಗುಪ್ತಾ ಅವರ ಇಡೀ ಶಾಲಾ ಶಿಕ್ಷಣ ದೆಹಲಿಯಲ್ಲಿಯೇ ಆಗಿತ್ತು.. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಬಳಿಕ, ನಂತರ ಎಲ್‌ಎಲ್‌ಬಿ ಪದವಿಯನ್ನೂ ಪಡೆದರು. ಅವರು ಸ್ವಲ್ಪ ಕಾಲ ಕಾನೂನು ಅಭ್ಯಾಸ ಮಾಡಿದರು.

ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಇವರಾಗಿದ್ದಾರೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಗದ್ದುಗೆ ಏರಿದ ಬಿಜೆಪಿಯ 2ನೇ ಮಹಿಳಾ ಸಿಎಂ ಇವರಾಗಿದ್ದಾರೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ 15 ವರ್ಷ 25 ದಿನಗಳ ಕಾಲ ದೆಹಲಿ ಸಿಎಂ ಸ್ಥಾನದಲ್ಲಿದ್ದರು. ಸುಷ್ಮಾ ಸ್ವರಾಜ್‌ 52 ದಿನಗಳ ಕಾಲ ದೆಹಲಿಯ ಸಿಎಂ ಆಗಿದ್ದರೆ, ಆಮ್‌ ಆದ್ಮಿ ಪಾರ್ಟಿಯ ಆತಿಶಿ ಮರ್ಲೇನಾ 4 ತಿಂಗಳು 18 ದಿನಗಳ ಕಾಲ ಈ ಪದವಿಯಲ್ಲಿದ್ದರು. ರಾತ್ರಿ 8.50ಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ಅನ್ನು ಭೇಟಿಯಾಗಲಿರುವ ರೇಖಾ ಗುಪ್ತಾ, ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ರೇಖಾ ಗುಪ್ತಾ ಆಯ್ಕೆಗೆ ಮೂರು ಕಾರಣಗಳು: ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆಯೇ ರೇಖಾ ಕೂಡ ಬನಿಯಾ ಸಮುದಾಯದವರು. ದೆಹಲಿಯಲ್ಲಿ ಬನಿಯಾ ಸಮುದಾಯ ಪ್ರಾಬಲ್ಯ ಹೊಂದಿದೆ. ಅವರನ್ನು ಯಾವಾಗಲೂ ಬಿಜೆಪಿಯ ಪ್ರಮುಖ ಮತದಾರರೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಮುಖ್ಯಮಂತ್ರಿ ಹುದ್ದೆಗೆ ಮೂವರು ಬಿಜೆಪಿ ನಾಯಕರ ಹೆಸರುಗಳು ರೇಸ್‌ನಲ್ಲಿದ್ದವು. ದೆಹಲಿ ಮಹಿಳಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 48 ಸ್ಥಾನಗಳನ್ನು ಗೆದ್ದು, ಒಟ್ಟು 45.56% ಮತಗಳನ್ನು ಗಳಿಸಿತು. ಇದಕ್ಕೆ ಪ್ರಮುಖ ಕಾರಣವೆಂದರೆ ಬಿಜೆಪಿ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿತ್ತು. ಮಹಿಳಾ ಮತಗಳನ್ನು ಹೆಚ್ಚಾಗಿ ಸೆಳೆದ ಕಾರಣಕ್ಕಾಗಿ ಮಹಿಳೆಯನ್ನೇ ಸಿಎಂ ಮಾಡುವ ನಿರ್ಧಾರ ಬಿಜೆಪಿ ಮಾಡಿತ್ತು.

ದೆಹಲಿಯಲ್ಲಿ ಇಲ್ಲಿಯವರೆಗೆ ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್ ಮತ್ತು ಅತಿಶಿ ಎಂಬ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ರೇಖಾ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಮಹಿಳೆಯರನ್ನು ಓಲೈಸಲು ಪ್ರಯತ್ನ ಮಾಡಿತ್ತು.ಮೂಲಗಳ ಪ್ರಕಾರ, ಶಾಸಕಾಂಗ ಪಕ್ಷದ ಸಭೆಗೆ ಮೊದಲು, ಆರ್‌ಎಸ್‌ಎಸ್ ಅವರ ಹೆಸರನ್ನು ಪ್ರಸ್ತಾಪಿಸಿತು, ಅದನ್ನು ಬಿಜೆಪಿ ಅಂಗೀಕರಿಸಿತು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಹರಿಯಾಣ ಸಿಎಂ ನಯಾಬ್ ಸೈನಿ ಅವರಂತಹ ಬಿಜೆಪಿಯ ಪ್ರಮುಖರು ಅವರ ಪರವಾಗಿ ಪ್ರಚಾರ ಮಾಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು