8:03 PM Thursday30 - January 2025
ಬ್ರೇಕಿಂಗ್ ನ್ಯೂಸ್
ಆರ್ಥಿಕ ಸಂಕಷ್ಟದಿಂದ ವೈಜಾಗ್ ಸ್ಟೀಲ್ ಕಾರ್ಖಾನೆ ಪಾರು: 11,440 ಕೋಟಿ ರೂ. ಪುನಶ್ಚೇತನ… ಕೇಂದ್ರ – ರಾಜ್ಯ ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು: ಮಾಜಿ… ಕಾಂಗ್ರೆಸ್ ಸಂಸ್ಕೃತಿಯೇ ಅಂತದ್ದು; ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ… ನಂಜನಗೂಡು: 5 ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಎಫ್ ಐಆರ್; 4 ಮಂದಿ… ಬಿಜೆಪಿ 12ನೇ ಶತಮಾನದಲ್ಲಿ ಇದ್ದಿದ್ದರೆ ಶರಣರಿಗೂ ಹಿಂದೂ ವಿರೋಧಿ ಪಟ್ಟ ಕಟ್ಟುತ್ತಿತ್ತು: ಸಚಿವ… ನಂಜನಗೂಡು: ಶ್ರದ್ಧಾಭಕ್ತಿಯಿಂದ ನಡೆದ ಸುತ್ತೂರು ಜಾತ್ರಾ ರಥೋತ್ಸವ; 40 ಜಾನಪದ ತಂಡಗಳ ಮೆರುಗು ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಖೇದ ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಾಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಮತ್ತೊಂದು ಜೀವಬಲಿ; ಭಾರೀ… ಕೋಟೆಕಾರು ದರೋಡೆ ಪ್ರಕರಣ; ಒಟ್ಟು 18.314 ಕೆಜಿ ಚಿನ್ನಾಭರಣ, 3.80 ಲಕ್ಷ ರೂ.…

ಇತ್ತೀಚಿನ ಸುದ್ದಿ

ನಂಜನಗೂಡು: 5 ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಎಫ್ ಐಆರ್; 4 ಮಂದಿ ಸಿಬ್ಬಂದಿಗಳು ಬಂಧನ

29/01/2025, 19:34

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಅಬ್ಬರಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಮೂಗುದಾರ ಹಾಕಲು ಮುಂದಾಗಿದ್ದಾರೆ. 5 ಮೈಕ್ರೋ ಫೈನಾನ್ಸ್ ಗಳ ವಿರುದ್ದ FIR ದಾಖಲಿಸಿದ್ದ ಪೊಲೀಸರು ಇದೀಗ ಮತ್ತೊಂದು ಹೆಜ್ಜೆ ಮಹತ್ತರ ಹೆಜ್ಜೆ ಹಾಕಿ 4 ಮಂದಿ ಸಿಬ್ಬಂದಿಗಳ ಬಂಧಿಸಿದ್ದಾರೆ.
ಬಿಎಸ್ ಎಸ್ ಫೈನಾನ್ಸ್ ನ ಕಲೆಕ್ಷನ್ ಆಫೀಸರ್ ಆಕಾಶ್(22), ಗ್ರಾಮೀಣ ಕೂಟ ಫೈನಾನ್ಸ್ ನ ಕಲೆಕ್ಷನ್ ಆಫೀಸರ್ ಸಿದ್ದರಾಜು(23), ಉಜ್ಜೀವನ್ ಫೈನಾನ್ಸ್ ನ ಕಸ್ಟಮರ್ ರಿಲೇಷನ್ ಆಫೀಸರ್ ಲೋಕೇಶ್(25) ಹಾಗೂ ಐಡಿಎಫ್ ಸಿ ಫೈನಾನ್ಸ್ ನ ಗ್ರೂಪ್ ರಿಲೇ಼ಷನ್ ಮ್ಯಾನೇಜರ್ ಸಿದ್ದರಾಜು(28) ಬಂಧಿತ ಸಿಬ್ಬಂದಿಗಳು.
ಸಾಲಗಾರರ ಜೊತೆ ಸಾಲ ವಸೂಲಿ ಮಾಡುವಾಗ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಗಳನ್ನ ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಎಂಬುವರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು.
ಪತ್ನಿ ಲತಾ ಅವರು 5 ಮೈಕ್ರೋ ಫೈನಾನ್ಸ್ ಗಳ ವಿರುದ್ದ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಹುಲ್ಲಹಳ್ಳಿ ಪೊಲೀಸರು ನಾಲ್ಕು ಫೈನಾನ್ಸ್ ಕಂಪನಿ ಸಿಬ್ಬಂದಿಗಳನ್ನ ಅರೆಸ್ಟ್ ಮಾಡಿ ಕಂಬಿ ಎಣಿಸಲು ಕಳಿಸಿದ್ದಾರೆ.

ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಮೇಲೂ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಪ್ರಕರಣ ದಾಖಲಾದಾಗ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.
ಆದ್ರೆ ಇಲ್ಲಿ ಕೇವಲ ಸಿಬ್ಬಂದಿಗಳನ್ನ ಮಾತ್ರ ಬಂಧಿಸಿರುವುದು ಕೆಲವು ಅನುಮಾನಗಳನ್ನ ಹುಟ್ಟಿಹಾಕಿದಂತಾಗಿದೆ.
ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ಮೇಲೂ ಕ್ರಮ ಜರುಗಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು