7:02 PM Monday21 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಗಡಿನಾಡಿನಲ್ಲಿ ಕನ್ನಡ ಮತ್ತು ಜಾನಪದ ಒಟ್ಟೋಟ್ಟಿಗೆ ಸಾಗಿ ಬೆಳವಣಿಗೆಯಾಗಬೇಕು: ಎನ್.ಎಂ.ಲಕ್ಷ್ಮಣ್

10/11/2024, 18:15

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಗಡಿನಾಡಿನಲ್ಲಿ ಕನ್ನಡ ಮತ್ತು ಜಾನಪದ ಒಟ್ಟೋಟ್ಟಿಗೆ ಸಾಗಿ ಬೆಳವಣಿಗೆಯಾಗಬೇಕು. ಬಹುಭಾಷಾ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮೂಲ ಸಂಸ್ಕೃತಿಗಳು ಕನ್ನಡತನವನ್ನು ಧಕ್ಕಿಸಿಕೊಳ್ಳಬೇಕು ಎಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಡ್ರಾಮ ನಿರ್ದೇಶಕ ಎನ್.ಎಂ.ಲಕ್ಷ್ಮಣ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶ್ರೀನಿವಸಪುರದ ಶ್ರೀ ಶಾರದಾಂಬ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಶ್ರೀ ಶಾರದಾಂಬ ಕಲಾ ಟ್ರಸ್ಟ್ ಸುಮಾರು 17 ವರ್ಷದಿಂದ ಕನ್ನಡ ಪರ ಕಾರ್ಯಕ್ರಮಗಳು ನೆರವೇರಿಸಿಕೊಂಡು ಬರುತ್ತದೆ ಎಂದು ಹೇಳಿದರು. ಕಾರ್ಯದರ್ಶಿ ಶಿವರಾಮ ಶರ್ಮ ಮಾತನಾಡಿ, ಗಡಿನಾಡು ಪ್ರದೇಶದಲ್ಲಿ ಯಕ್ಕಡ,ಎನ್ನಡ ಭಾಷೆಗಳ ಮದ್ಯ ಕನ್ನಡ ಬಾಷೆಯು ನಲುಗುತ್ತಿದ್ದು , ಯುವ ಜನತೆ ಇತರೆ ಬಾಷೆಯಲ್ಲಿನ ಮಾಹಿತಿಯನ್ನು ವಾಟ್ಸ್ಪ್, ಫೇಸ್‌ಬುಕ್, ಯುಟ್ಯೂಬ್‌ಗಳಲ್ಲಿ ನೋಡುವುದರ ಮೂಲಕ ಕಾಲಕಳೆಯುವುದನ್ನು ಬಿಟ್ಟು , ಅದೇ ಸಮಯವನ್ನು ಕನ್ನಡ ಬಾಷೆ, ಸಾಹಿತ್ಯ, ಕವಿಪುಂಗವರ ಬಗ್ಗೆ, ಕನ್ನಡ ಭಾಷೆಗಾಗಿ ಹೋರಾಡಿದ ಮಹನೀಯರ, ಕನ್ನಡ ಬಾಷೆಯ ಸುಮಧರ ಹಾಡುಗಳನ್ನು ವಾಟ್ಸಾಪ್, ಫೇಸ್‌ಬುಕ್ , ಯುಟ್ಯೂಬ್‌ಗಳಲ್ಲಿ ಒಬ್ಬರಿಗೊಬ್ಬರು ರವಾನಿಸುವುದರ ಮೂಲಕ ಬಾಷೆಯ ಉಳಿವಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು.
ಶ್ರೀ ಶಾರದಂಬ ಕಲಾ ಟ್ರಸ್ಟ್ ಖಜಾಂಚಿ ಡಿ.ಸಿ. ಶಂಕರರೆಡ್ಡಿ ಕಾರ್ಯಕ್ರಮದ ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಎನ್‌ ವಿಜಯಮ್ಮ ಶ್ರೀಶಾರದಾಂಬ ಕಲಾ ಟ್ರಸ್ಟ್ ಅಧ್ಯಕ್ಷ ತಂರ್ತಾಲಪಲ್ಲಿ ಸೋಮಣ್ಣ, ಖಜಾಂಚಿ ಡಿ.ಸಿ.ಶಂಕರರೆಡ್ಡಿ, ನಾರಾಯಣಸ್ವಾಮಿ ,ಸಾಂಸ್ಕೃತಿಕ ಕಾರ್ಯದರ್ಶಿ ಕಲಾ ಶಂಕರ್, ಪೊಲೀಸ್ ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ರವೀಂದ್ರ,ಡ್ರಾಮ ಗುರುಗಳಾದ ಬತ್ತಲಗುಟ್ಲಪಲ್ಲಿ ರಾಮಮೂರ್ತಿ, ಕೃಷ್ಣಮೂರ್ತಿನಾಯಕ್, ತಬಲವಾದಕ ಪರ‍್ನಪಲ್ಲಿ ನಾಗೇಶ್, ರಾಮಕೃಷ್ಣಾರೆಡ್ಡಿ, ಮೈಕಲ್ ವೆಂಕಟರಣ, ಚಲಪತಿ, ರಾಮ ಮೂರ್ತಿ, ತಿಪ್ಪಣ್ಣ, ಹೋಹಳ್ಳಿ ಕೃಷ್ಣಪ್ಪ, ಆಂಜಪ್ಪ , ಪದ್ಮಾವತಮ್ಮ, ಶಕುಂತಲಮ್ಮ, ಕಲಾವಿದರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು