2:23 PM Tuesday14 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

ರಾಜ್ಯದ ವಕ್ಫ್ ಅಸ್ತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಸತ್ಯ ಗೊತ್ತಾಗುತ್ತೆ: ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ

05/11/2024, 11:44

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ವಕ್ಫ್ ಬೋರ್ಡ್ ಏನು ಎಂದು ಯಾರಿಗೂ ಗೊತ್ತಿರಲಿಲ್ಲ, 54 ನೇ ಇಸವಿಯಲ್ಲಿ ಈ ವಕ್ಫ್ ಬೋರ್ಡನ್ನು ನಿರ್ಮಿಸಿದರು ಸಂವಿಧಾನಕ್ಕೆ ಮೀರಿ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ಸಿಗೆ ಅಧಿಕಾರ ಉಳಿಸುವುದಕ್ಕಾಗಿ ಈ ದೇಶ ದೊಡ್ಡ ತ್ಯಾಗವನ್ನು ಮಾಡಬೇಕಾಗಿದೆ. ಈ ಬೋರ್ಡ್ ಗೆ 75ರಲ್ಲಿ ತಿದ್ದುಪಡಿ ಆಗಿತ್ತು.ಪಾಣಿ ತಗೊಂಡು ಸಾಲ ಕೇಳಲು ಬ್ಯಾಂಕ್ ಗೆ ಹೋದಾಗ ಗೊತ್ತಾಗುತ್ತದೆ ಆರ್ ಟಿಸಿ ಯಲ್ಲಿ ಯಾರ ಹೆಸರಿದೆ ಎಂದು, ಇದು ಕೇವಲ ಬಿಜಾಪುರ ಜಿಲ್ಲೆ ಅಲ್ಲ ಮುಕ್ಕಾಲು ಭಾಗ ಜಿಲ್ಲೆ, ವಕ್ಪ್ ಗೆ ಸೇರಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಒಂದು ವಿಶೇಷವಾದ ಹೋರಾಟಕ್ಕೆ ಇಂದು ನಾವು ನಿಂತಿದ್ದೇವೆ.
ಏನೇನು ಆಗುತ್ತಿದೆ ಎಂದು ಮೀಡಿಯಾದಲ್ಲಿ ಪ್ರತಿದಿನ ಬರುತ್ತಿದೆ. ಪುರಾತತ್ವ ಇಲಾಖೆಯ ಆಸ್ತಿಯನ್ನು ನಮ್ಮದು ಎಂದು ವಕ್ಫ್ ಎಂದು ಎಂಟ್ರಿ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರಕ್ಕೆ ನಾಚಿಕೆ ಇಲ್ಲ, ಕೇಳಿದರೆ ಮುಸ್ಲಿಂ ಓಟು ಹೋಗುತ್ತದೆ ಎಂದು
ಇದನ್ನು ಕೇಳಲಿಲ್ಲ, ಸರ್ಕಾರಿ ಶಾಲೆ, ಆಸ್ತಿ, ಮನೆ ಎಲ್ಲವೂ ವಖ್ಫ್ ಬೋರ್ಡ್ ಅಸ್ತಿಗೆ ಸೇರಿದೆ ಬುದ್ಧಿಜೀವಿಗಳು ಈಗ ಎಲ್ಲಿ ಹೋಗಿದ್ದಾರೆ. ಜಾತ್ಯತೀತ ಎನ್ನುವವರು ಈಗ ಎಲ್ಲಿ ಹೋಗಿದ್ದಾರೆ.
ಸಂವಿಧಾನ ಸಂವಿಧಾನ ಎಂದು ಹೇಳುವ ಜನ ಈ ಸಂವಿಧಾನ ವಿರೋಧಿ ಕಾಯ್ದೆಯನ್ನು ಏಕೆ ವಿರೋಧಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ರೈತ ಸಂಘಟನೆಗಳು ಎಲ್ಲಿ ಹೋಗಿವೆ ಇದರ ಬಗ್ಗೆ ಏಕೆ ಹೋರಾಟ ಮಾಡುತ್ತಿಲ್ಲ. ನಿಜವಾದ ಕಲ್ಯಾಣ ಕರ್ನಾಟಕದ ಅಪೇಕ್ಷೆ ಇಲ್ಲ. ಮಂಗಳೂರಿನ ಅವತ್ತು ಬಿಜೆಪಿಯಲ್ಲಿದ್ದ ಒಬ್ಬ ಮುಸ್ಲಿಂ ಮುಖಂಡರನ್ನು ವಕ್ಫ್ ಆಸ್ತಿಯನ್ನ ಮುಸ್ಲಿಂ ಸಮುದಾಯದ ಮತ್ತು ಕಾಂಗ್ರೆಸ್ಸಿನ ಕೆಲವು ಮುಖಂಡರು ವಶಪಡಿಸಿಕೊಂಡಿದ್ದರು ಇದನ್ನು ಅವರು ಅಧ್ಯಯನ ಮಾಡಿದರು. ಸಾವಿರಾರು ಎಕರೆ ಆಸ್ತಿ ಒತ್ತುವರಿಯಾಗಿದೆ. ನಿಮಗೇನಾದರೂ ಬದ್ಧತೆ ಇದ್ದರೆ ರಾಜ್ಯದ ವಕ್ಫ್ ಅಸ್ತಿಯ ಬಗ್ಗೆ ವೈಟ್ ಪೇಪರ್ ಹೊರಡಿಸಿ ಆಗ ಸತ್ಯ ಗೊತ್ತಾಗುತ್ತದೆ ಎಂದು ತಿಳಿಸಿದರು.
ಬಿಜಾಪುರದಲ್ಲಿ ಅನೇಕ ಬಡವರು ಪಾಣಿಯನ್ನು ಎದೆಯ ಮೇಲೆ ಇಟ್ಟುಕೊಂಡು ಕಣ್ಣೀರು ಹಾಕುತ್ತಿದ್ದರು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದದ್ದು ನಾನು ಸ್ವಾಗತಿಸುತ್ತೇನೆ
ಮಠಗಳ ಅಭಿವೃದ್ಧಿಗಾಗಿ ಉಂಬಳಿ ಕೊಟ್ಟಿದ್ದ, ದಾನ ಕೊಟ್ಟಿದ್ದ ಜಮೀನನ್ನು ರಾತ್ರಿ ಬೆಳಗಾಗುವುದರೊಳಗಾಗಿ ಮುಜರಾಯಿ ಇಲಾಖೆ ಕಾಯ್ದೆ ತಿದ್ದುಪಡಿ ಮಾಡಿ ಸರ್ಕಾರ ವಶಪಡಿಸಿಕೊಂಡಿತು, ಇದನ್ನು ಯಾವ ಹಿಂದೂವೂ ವಿರೋಧ ಮಾಡಲಿಲ್ಲ. ನೂರಾರು ದೇವಸ್ಥಾನಗಳು ಇವತ್ತು ಪಾಳು ಬಿದ್ದಿವೆ. ಆ ಕಾಯ್ದೆಯಿಂದ ಹಿಂದೂ ಧರ್ಮಕ್ಕೆ ನಿಜವಾಗಲೂ ಹೊಡೆತ ಬಿದ್ದಿತ್ತು. ಆದರೂ ಯಾರು ಮಾತನಾಡಲಿಲ್ಲ. ಆದರೆ ಇವರಿಗೆ ಒಂದು ಇಂಚು ಜಮೀನನ್ನು ವಖ್ಫ್ ನಿಂದ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಸಿದ್ದರಾಮಯ್ಯನವರು ಹಬ್ಬ ಆದರೂ ಕೂಡ ಅಧಿಕಾರಿಗಳ ಸಭೆ ಕರೆದು ಗರಂ ಆದರಂತೆ,ಸಿದ್ದರಾಮಯ್ಯನವರೇ ಜಮೀರ್ ಬಗ್ಗೆ ಹೇಳಿ ಆತನು ಇಡೀ ಕರ್ನಾಟಕವನ್ನು ಇಸ್ಲಾಮಿಕರಣ ಮಾಡುತ್ತಾರೆ. ಆ ರೀತಿಯ ಮನಸ್ಥಿತಿ ಹೊಂದಿದ್ದಾರೆ.
ನೀವು ಕೇವಲ ಬಾಯಲ್ಲಿ ಸೆಕ್ಯುಲರ್ ಎಂದು ಹೇಳುತ್ತೀರಿ.ನಿಮ್ಮ
ಸರಕಾರಕ್ಕೆ ನಾಚಿಕೆ ಆಗಬೇಕು.
ತಾಕತ್ತಿದ್ದರೆ ಎಪ್ಪತೈದನೇ ಇಸವಿಯಲ್ಲಿ ಮಾಡಿದ ಗೆಜೆಟೆಡ್ ನೋಟಿಫಿಕೇಶನ್ ವಾಪಾಸ್ ಪಡೆದುಕೊಳ್ಳಿ ನೋಡೋಣ ಎಂದು ಹರಿಹಾಯ್ದರು.

ಇತ್ತೀಚಿನ ಸುದ್ದಿ

ಜಾಹೀರಾತು