10:42 AM Tuesday29 - October 2024
ಬ್ರೇಕಿಂಗ್ ನ್ಯೂಸ್
ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು… ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ‘ಉಡುಗೊರೆ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶಾಸಕರೇ, ಒಮ್ಮೆ ಇತ್ತ ಬನ್ನಿ: ನಗರಸಭೆಯ ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾರಕ…

ಇತ್ತೀಚಿನ ಸುದ್ದಿ

3A ಕಾಂಪೊಸಿಟ್ಸ್ ನಿಂದ ಅಲ್ಯುಕೊಡ್ಯುಯೆಲ್ ಪ್ರೀಮಿಯಂ ಉತ್ಪನ್ನ ಬಿಡುಗಡೆ: ಭಾರತದಲ್ಲೇ ಅಭಿವೃದ್ಧಿಪಡಿಸಿರುವ ಜಾಗತಿಕ ಮಟ್ಟದ ಸಾಲಿಡ್ ಶೀಟ್

29/10/2024, 10:13

ಬೆಂಗಳೂರು(reporterkarnataka.com): ಜಾಗತಿಕ ಮಟ್ಟದಲ್ಲಿ ಅಲ್ಯೂಮೀನಿಯಂ ಕಾಂಪೊಸಿಟ್ ಮೆಟೀರಿಯಲ್ ಗಳನ್ನು ಉತ್ಪಾದನೆಗೆ ಹೆಸರುವಾಸಿಯಾಗಿರುವ ಸ್ವಿಸ್ ನ 3A ಕಾಂಪೊಸಿಟ್ಸ್ ಬ್ರ್ಯಾಂಡ್ ಆಗಿರುವ ಅಲ್ಯುಕೋಬಾಂಡ್ `ಅಲ್ಯುಕೊಡ್ಯುಯೆಲ್’ ಎಂಬ ಹೆಸರಿನ ಅತ್ಯುತ್ಕೃಷ್ಟ ತಂತ್ರಜ್ಞಾನದ ಪ್ರೀಮಿಯರ್ ಪೋರ್ಟ್ ಫೋಲಿಯೋವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದು ಹೊಸ-ಪೀಳಿಗೆಯ ಕ್ಲಾಡ್ಡಿಂಗ್ ಸಲೂಶನ್ ಆಗಿದೆ. ಈ ಅಲ್ಯುಕೊಡ್ಯುಯೆಲ್ ಆರ್ಕಿಟೆಕ್ಚರಲ್ ಅಪ್ಲಿಕೇಶನ್ ಗಳಿಗೆ ಸೂಕ್ತವಾದ ಉತ್ಪನ್ನವಾಗಿದೆ.
ಮಹಾರಾಷ್ಟ್ರದ ಪುಣೆಯ ಬಳಿ ಇರುವ ರಂಜನ್ ಗಾಂವ್ ನಲ್ಲಿರುವ 3A ಕಾಂಪೊಸಿಟ್ಸ್ ನ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಸಂಪೂರ್ಣವಾಗಿ ಸಂಶೋಧನೆ ನಡೆಸಿ, ವಿನ್ಯಾಸ, ಅಭಿವೃದ್ಧಿಗೊಳಿಸಿ ಮತ್ತು ಉತ್ಪಾದನೆ ಮಾಡಲಾಗುತ್ತಿದೆ. ಅಲ್ಯುಕೊಡ್ಯುಯೆಲ್ ಒಂದು ಲ್ಯಾಮಿನೇಟೆಡ್ ಅಲ್ಯೂಮೀನಿಯಂ ಪದರಗಳೊಂದಿಗೆ ಪೂರ್ವಲೇಪಿತವಾದ ವಿನ್ಯಾಸಗೊಳಿಸಲಾದ ದಪ್ಪದಾದ ಹಾಳೆಯಾಗಿದ್ದು, ಬಹು ಉದ್ದೇಶವನ್ನು ಹೊಂದಿರುತ್ತದೆ. ಮುಂಭಾಗಗಳು, ಹೊದಿಗೆ ಮತ್ತು ಪರದೆಯ ಗೋಡೆಗಳು, ಒಳಭಾಗದ ಗೋಡೆಗಳು, ಛಾವಣಿಗಳು, ಸೋಫಿಟ್ ಗಳು ಮತ್ತು ಕಾಲಂ ಅಲಂಕಾರಕ್ಕಾಗಿ ಹೇಳಿ ಮಾಡಿಸಿದಂತಹ ಉತ್ಪನ್ನ ಇದಾಗಿದೆ.
ವಾಸ್ತುಶಿಲ್ಪದ ದೃಷ್ಟಿಕೋನದಿಂದ ಕ್ಲಾಡ್ಡಿಂಗ್ ಅಗತ್ಯತೆಗಳು, ಬಳಕೆ ಮತ್ತು ವಿಶೇಷಣಗಳನ್ನು ವಿಶ್ಲೇಷಣೆ ಮಾಡಿ ಅಲ್ಯುಕೊಡ್ಯುಯೆಲ್ ಅನ್ನು ಪರಿಪೂರ್ಣವಾದ ಫ್ಲಾಟ್ ನೆಸ್ ನ ಪ್ರಮುಖ ವೈಶಿಷ್ಟ್ಯತೆಯನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಪ್ರಮಾಣಿತ ಪೂರ್ವ-ಲೇಪಿತ ಅಂದರೆ ಪೋಸ್ಟ್ ಕೋಟೆಡ್ ಸಾಲಿಡ್ ಶೀಟ್ ಆಗಿದೆ. ಹೀಗಾಗಿ ಯಾವುದೇ ಎದುರಾಗುವ ಗೋಡೆಯ ಸವಾಲು ಅಥವಾ ಸಮಸ್ಯೆಯನ್ನು ಇದನ್ನು ಅಳವಡಿಸುವ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಒಂದು ದಪ್ಪ ಅಲ್ಯೂಮೀನಿಯಂನ ಒಂದು ಶೀಟ್ ಗೆ ಹೋಲಿಸಿದರೆ ಈ ಅಲ್ಯುಕೊಡ್ಯುಯೆಲ್ ಪ್ಯಾನಲ್ ಗಳು ವರ್ಧಿತ ಸ್ಟಿಫ್ ನೆಸ್ ಮತ್ತು ಹಿಡಿತವನ್ನು ಹೊಂದಿರುತ್ತವೆ. ಈ ರಚನಾತ್ಮಕವಾದ ಸ್ಥಿರತೆಯು ಉತ್ಪನ್ನವನ್ನು ದೊಡ್ಡ ಪ್ಯಾನೆಲ್ ಗಳಲ್ಲಿ ಬಳಸಲು ಸಹಕಾರಿಯಾಗುತ್ತದೆ. ಇದು ಜೋಡಣೆಯ ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯಷ್ಟೇ ಅಲ್ಲ, ಒಟ್ಟಾರೆ ವೆಚ್ಚವನ್ನೂ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಈ ಉತ್ಪನ್ನವನ್ನು ಬಹು ಮತ್ತು ಸಂಕೀರ್ಣವಾದ `ಆನ್-ಸೈಟ್’ ಕ್ಲಾಡ್ಡಿಂಗ್ ಅಪ್ಲಿಕೇಶನ್ ಅಗತ್ಯಗಳಿಗೆ ಸರಿ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಯುಕೊಡ್ಯುಯಲ್ ನ ಸವೆತ ಮತ್ತು ಮರೈನ್ ಗ್ರೇಡ್ ಅಲಾಯ್ ದರ್ಜೆಯ ಮಿಶ್ರಲೋಹವನ್ನು ಒಳಗೊಂಡಿದ್ದು, ದೀರ್ಘಾವಧಿ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ.
ಈ ಹೊಸ ಉತ್ಪನ್ನದ ಬಗ್ಗೆ ಮಾತನಾಡಿದ 3A ಕಾಂಪೊಸಿಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ಸಿಇಒ ರಂಜಿತ್ ಶರ್ಮಾ ಅವರು, “ನಮ್ಮ ಇತ್ತೀಚಿನ ನಾವೀನ್ಯತೆ ಅಲ್ಯುಕೊಡ್ಯುಯೆಲ್ ಸ್ಥಳೀಯವಾಗಿ ಸಂಶೋಧಿಸಲ್ಪಟ್ಟಿದೆ ಮತ್ತು ನಾವು ಅಭಿವೃದ್ಧಿಪಡಿಸಿದ `ಮೇಕ್-ಇನ್-ಇಂಡಿಯಾ’ ಉತ್ಪನ್ನವಾಗಿದೆ. ಇದು ಈಗ ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಅಲ್ಯುಕೊಡ್ಯುಯೆಲ್ ತೆಳ್ಳಗಿನ, ಕಟ್ಟು ನಿಟ್ಟಾದ ವಿನ್ಯಾಸ ಮತ್ತು ಬಳಕೆಗೆ ವಾಸ್ತುಶಿಲ್ಪಿಗಳಿಗೆ ಅನುಕೂಲವಾದ ಉತ್ಪನ್ನವಾಗಿದೆ. ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್ ಗಳು, ಕ್ರೀಡಾಂಗಣಗಳು, ಬಹುಮಹಡಿ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿದಂತೆ ಮುಂತಾದ ಮೆಗಾ ಯೋಜನೆಗಳಿಗೆ ಪೂರಕವಾದ ಉತ್ಪನ್ನ ಇದಾಗಿದೆ. ಅತ್ಯುತ್ತಮ ವಿನ್ಯಾಸ ಮತ್ತು ಅಪ್ಲಿಕೇಶನ್ ಟ್ರೆಂಡ್ ಅನ್ನು ತರುವ ಈ ಉತ್ಪನ್ನವನ್ನು ನಾವು ಭಾರತದಲ್ಲಿ ಉತ್ಪಾದನೆ ಮಾಡಿ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯ-ಪೂರ್ವ ದೇಶಗಳು ಸೇರಿದಂತೆ ಪ್ರಪಂಚದಾದ್ಯಂತ ಪೂರೈಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದೇವೆ’’ ಎಂದು ತಿಳಿಸಿದರು
.
About 3A Composites:
3A Composites is an innovator and a global leader in the production of high-quality aluminium composite sheet (ACS) – ALUCOBOND®. The group belongs to the listed – company Schweiter Technologies headquartered in Steinhausen, Switzerland. 3A Composites, formerly known as Alcan Composites, is an independent division of Schweiter Technologies and has approximately 4300 employees worldwide.
To foster Indian footprint, the Swiss company invested in India in 2007 to set up a plant, offices, manpower and sales and marketing infrastructure. Technical know- how/expertise was transferred to India to service customer needs locally and globally. This is in perfect congruence with Prime Minister’s ‘MAKE IN INDIA’ Initiative.
The cutting-edge manufacturing facility based near Pune, Maharashtra has infrastructure that rivals some of the best in the world. The plant’s total capacity exceeds 4 million square meters. 3A Composites is ISO 9001:2015 certified for quality management and ISO 14001:2015 for environmental management. With a corporate office in Mumbai, sales and marketing teams are present PAN India to meet the needs of all customers.

ಇತ್ತೀಚಿನ ಸುದ್ದಿ

ಜಾಹೀರಾತು