12:37 PM Thursday10 - April 2025
ಬ್ರೇಕಿಂಗ್ ನ್ಯೂಸ್
ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್…

ಇತ್ತೀಚಿನ ಸುದ್ದಿ

ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ 7ನೇ ವಾರ್ಷಿಕ ಹಬ್ಬ: ಪವಿತ್ರಾ ಪೂಜಾ ಬಲಿದಾನ ಅರ್ಪಣೆ

12/10/2024, 18:18

ಮಂಗಳೂರು(reporterkarnataka com): ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಸದಸ್ಯರು ಅಕ್ಟೋಬರ್ 5 ರಂದು ಸಂಜೆ ತಮ್ಮ ಸಭೆಯ 7ನೇ ವಾರ್ಷಿಕ ಹಬ್ಬವನ್ನು ಆಚರಿಸಿದರು. ದೇವರಿಗೆ ಸ್ತುತಿ ಸಲ್ಲಿಸಿ ಪವಿತ್ರಾ ಪೂಜಾ ಬಲಿದಾನ ಅರ್ಪಿಸಿ ಚರ್ಚ್ ಸಭಾ ಮಂದಿರದಲ್ಲಿ ಚಿಕ್ಕ ಕಾರ್ಯಕ್ರಮ ನಡೆಸಿದರು. ಆಂಜೆಲೊರ್ ಚರ್ಚಿನ ಪ್ರಧಾನ ಗುರು ವಂದನೀಯ ಫೆಡ್ರಿಕ್ ಮೊಂತೆರೊರವರು ಅಧ್ಯಕ್ಷತೆ ವಹಿಸಿದರು. ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಪ್ರಾಂತೀಯಾ ಸಹಾಯಕರಾದ ವಂದನೀಯ ಪ್ರಕಾಶ್ ಲೋಬೊ ಹಾಗೂ ಚರ್ಚಿನ ಸಹಾಯಕ ಗುರು ವಂದನೀಯ ಸ್ಟೇನಿ ಲೋಬೊ, ಆಂಜೆಲೊರ್ ಚರ್ಚಿನ ಉಪಾಧ್ಯಕ್ಷ ಸಹೋದರ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಸಹೋದರಿ ಲೋಲಿನಾ ಡಿ’ಸೋಜ , 21 ಆಯೋಗಗಳ ಸಂಚಾಲಕಿ ಸಹೋದರಿ ರೆನಿಟಾ ಮಿನೇಜಸ್, ಪ್ರಾಂತೀಯ ಖಜಾಂಚಿ ಸಹೋದರ ಆಲ್ವಿನ್ ಮೊಂತೆರೊ ಹಾಗೂ ಪ್ರತಿನಿಧಿ ಅತಿಥಿಗಳಾಗಿದ್ದರು.
ಅಧ್ಯಕ್ಷೆ ಸಹೋದರಿ ಸಿಂತಿಯಾ ರುಜಾರಿಯೊ ಸ್ವಾಗತಿಸಿದರು. ಕಾರ್ಯದರ್ಶಿ ಸಹೋದರಿ ಸುನೀತಾ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಮನೋರಂಜನ ಕಾರ್ಯಕ್ರಮದೊಡನೆ ದೇವರನ್ನು ಹರಸಿ ಕಾರ್ಯಕ್ರಮ ಕೊನೆಗೊಂಡಿತು. ಸಹೋದರಿ ಸವಿತಾ ಫೆಲ್ಸಿ ರೊಡ್ರಿಗಸ್ ಕಾರ್ಯ ನಿಯೋಜಿಸಿದರು. ಸಹೋದರ ಡೆನಿಸ್ ಡಿ’ಸೋಜ ಧನ್ಯವಾದ ಸಮರ್ಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು