6:42 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಬಡವರ ಡಾಕ್ಟರ್ ‘ ಅಥಣಿಯ ಡಾ. ಆನಂದ ಮೊಳೇಕರ್: ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ; ಇದೇ ಸ್ಪೆಷಾಲಿಟಿ

21/05/2021, 09:30

ಅಥಣಿ(reporterkarnataka news):

ಕೊರೋನಾ ಎಂಬ ಮಹಾಮಾರಿ ಜಗತ್ತನ್ನೇ ನಡುಗಿಸುತ್ತಿದೆ. ಎಲ್ಲಿ ನೊಡಿದರೂ ಸಾಲು ಸಾಲು ಸಾವಿನ ಸುದ್ದಿಗಳೇ. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆಗಳೇ ಹೆಚ್ಚು. ಸಣ್ಣ ಪುಟ್ಟ ಎಂದು ತಿಳಿದುಕೊಂಡ ರೋಗಗಳಾದ ನೆಗಡಿ, ಕೆಮ್ಮು, ಜ್ವರಗಳೇ ಈಗ ಮನುಕುಲದ ಹೆದರಿಕೆಗೆ ಕಾರಣಗಳಾಗಿಬಿಟ್ಟಿವೆ. ಈ ಕೊರೋನಾ ಎಂಬ ಮಹಾಮಾರಿ ನಗರಪ್ರದೇಶಗಳಿಗಷ್ಟೇ ಸೀಮಿತವಾಗದೇ ಹಳ್ಳಿ ಹಳ್ಳಿಗಳಲ್ಲಿ ಹಬ್ಬಿಕೊಂಡಿದೆ. ಅದರ ಪರಿಣಾಮವಾಗಿ ಹಳ್ಳಿಗಳ ಜನಕ್ಕೆ ದಿಕ್ಕೇ ತೋಚದಂತಾಗಿದೆ. ನೆಗಡಿ, ಕೆಮ್ಮು, ಜ್ವರಗಳನ್ನು ಈಗ ನಿರ್ಲಕ್ಷ್ಯ ಮಾಡುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಚಿಕಿತ್ಸೆ ದೊರಕದೇ ಪಟ್ಟಣಕ್ಕೆ ಬರಬೇಕು. ಬಂದರೆ ಪಟ್ಟಣದ ಆಸ್ಪತ್ರೆಗಳ ಬಿಲ್ ನೋಡಿಯೇ ಅರ್ಧ ಸತ್ತ ಅನುಭವವಾಗುವುದು ಸುಳ್ಳಲ್ಲ.  ಆ ರಿಪೋರ್ಟ್, ಈ ರಿಪೋರ್ಟ್ ಅಂತಾ ಸಾವಿರಾರು ರೂಪಾಯಿ ಕಿತ್ತುಕೊಳ್ಳುವ ಡಾಕ್ಟರ್ ಗಳೇ ಹೆಚ್ಚು. ಹಾಗಂತಾ ಎಲ್ಲಾ ಡಾಕ್ಟರ್ ಗಳು ಈ ರೀತಿ  ಮಾಡುತ್ತಾರೆ ಎಂಬ ಮಾತು ಸುಳ್ಳು. ಸಮಾಜಸೇವೆ ಮಾಡುವ, ಮಾಡುತ್ತಿರುವ ಅನೇಕ ಡಾಕ್ಟರ್ ಗಳು ನಮಗೆ ಸಿಗುತ್ತಾರೆ. ಮನೋಸ್ಥೈರ್ಯ ತುಂಬಿ ಚಿಕಿತ್ಸೆ ನೀಡುವುದು ಈ ಸಮಯದಲ್ಲಿ ತುಂಬಾ ಮುಖ್ಯವಾದ ಸಂಗತಿ. ಯಾಕೆಂದರೆ ನೆಗಡಿ, ಕೆಮ್ಮು ಬಂದರೆ ಕೊರೋನಾ ಆಗಿರಬಹುದೇ ಎಂಬ ದುಗುಡ ಮನಸ್ಸಿನಲ್ಲಿರುತ್ತದೆ. 

ಅಂದಹಾಗೆ ಪಟ್ಟಣಗಳಲ್ಲಿ ಬಡವರಿಗೆ ಅನುಕೂಲವಾಗುವ, ಮನೋಸ್ಥೈರ್ಯ ತುಂಬುವ, ಅತ್ಯಂತ ಕಡಿಮೆ ದರದಲ್ಲಿ  ರೋಗ ವಾಸಿ ಮಾಡುವ ವೈದ್ಯರು ಸಿಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಹೌದು. ಅಂತಹ ವೈದ್ಯರೊಬ್ಬರು ಅಥಣಿ ಪಟ್ಟಣದಲ್ಲಿ ಇದ್ದಾರೆ. ಅವರೇ ಡಾ: ಆನಂದ ಮೊಳೇಕರ್. ಅಥಣಿಯ ಅನಂತಪುರ ರಸ್ತೆಯ ಸಾವಡ್ಕರ್ ಪೆಟ್ರೋಲ್ ಬಂಕ್ ಎದುರಿಗಿರುವ  ‘ಆಯುಷ್ ಕ್ಲೀನಿಕ್’ ಎಂಬ ದವಾಖಾನೆಯೊಂದನ್ನು ಇಟ್ಟುಕೊಂಡು ಹಗಲಿರುಳು ರೋಗಿಗಳ ಸೇವೆ ಸಲ್ಲಿಸುತ್ತಿದ್ದಾರೆ. ಅರೆ ಇದರಲ್ಲೇನಿದೆ ವೈದ್ಯರು ಅದನ್ನೆಲ್ಲಾ ಮಾಡಲೇಬೇಕು, ಅವರು ಕರ್ತವ್ಯ ಅಂತೀರಾ..!?  ಇದು ಕೋವಿಡ್ ನ ಕರಾಳ ಸಮಯ ಅನೇಕ ವೈದ್ಯರು ತಮ್ಮ ತಮ್ಮ ದವಾಖಾನೆಗಳನ್ನು ಮುಚ್ಚಿಕೊಂಡು ನಮಗ್ಯಾಕೆ ಬೇಕು ಎಂದು, ದವಾಖಾನೆಗೆ ಹೋದರೆ ಕನಿಷ್ಟ ಪಕ್ಷ ಸರಿಯಾಗಿ ಮಾತನಾಡಿಸದೇ, ಮುಟ್ಟದೇ ಸುಮ್ಮನಿರುವಾಗ ಈ ಸಮಯದಲ್ಲಿ ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಅದಕ್ಕಿಂತಲೂ ಹೆಚ್ಚಾಗಿ ಮನೋಬಲ ತುಂಬುವ ಕೆಲಸ ಮಾಡುತ್ತಿದ್ದಾರೆ.  ಅಥಣಿ ಪಟ್ಟಣ ಸೇರಿ ಸುತ್ತಮುತ್ತಲಿನ ಊರುಗಳಾದ ಅಬ್ಬಿಹಾಳ, ಭರಮಖೋಡಿ, ಯಕ್ಕಂಚಿ, ಕೋಹಳ್ಳಿ, ಅಡಹಳ್ಳಿ, ಬೇವನೂರು, ಶಿವನೂರು, ಮದಭಾವಿ, ದೇಸಾರಟ್ಟಿ, ರಡ್ಡೇರಹಟ್ಟಿ, ಅನಂತಪುರ, ಹೊಸಟ್ಟಿ ಹೀಗೆ ಅನೇಕ ಗ್ರಾಮಗಳ ರೋಗಿಗಳು ಇವರ ಹತ್ತಿರ ಬಂದು ರೋಗಮುಕ್ತರಾಗಿದ್ದಾರೆ, ಆಗುತ್ತಿದ್ದಾರೆ.

ಅನೇಕ ಜನರಿಗೆ ಕೋವಿಡ್ ಗುಣಲಕ್ಷಣಗಳು ಇದ್ದರೂ ಸಹ  ಅವರನ್ನು ಸುಸ್ರೂಶಿಶಿ ಕಳಿಸಿದ್ದಾರೆ. ಕೆಲ ರೋಗಿಗಳ ಪ್ರಕಾರ ಡಾಕ್ಟರ್ ಅವರು ರೋಗವನ್ನು ಅವರ ಮಾತುಗಳ ಮೂಲಕವೇ ಅರ್ಧ ಕಡಿಮೆ ಮಾಡುತ್ತಾರೆ, ನನ್ನ ಪರಿಸ್ಥಿತಿ ನೋಡಿದರೆ ನನಗೆ ಕೋವಿಡ್ ಆಗಿರಬಹುದು ಎಂಬ ಅನುಮಾನದಿಂದ ಮೂರ್ನಾಲ್ಕು ದಿನದಿಂದ ಊಟವೇ ಮಾಡಿರಲಿಲ್ಲ ಇವರ ಹತ್ತಿರ ಬಂದಮೇಲೆ ಅದನ್ನೆಲ್ಲಾ ಮನಸ್ಸಿನಿಂದ ತೆಗೆದು ನನಗೆ ಸರಿಯಾದ ಚಿಕಿತ್ಸೆ ನೀಡಿದ್ದಾರೆ ಈಗ ನಾನು ಸಂಪೂರ್ಣವಾಗಿ ಹುಶಾರಾಗಿದ್ದೇನೆ  ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ ಇವರು ಇಷ್ಟೆಲ್ಲಾ ಚಿಕಿತ್ಸೆ ಕೊಡುವುದಕ್ಕೆ ತೆಗೆದುಕೊಳ್ಳುವ ಕನಿಷ್ಠ ಫೀಸ್ ಮಾತ್ರ 30 ರೂಪಾಯಿಂದ 50 ರೂಪಾಯಿ. ಅದಕ್ಕೆ ಇರಬಹುದು ಇವರನ್ನು *”ಬಡವರ ಡಾಕ್ಟರ್”* ಎಂದು ಕರೆಯುವುದು. 

ಅದೇನೇ ಇರಲಿ ಇಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸದ್ದಿಲ್ಲದೇ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ವೈದ್ಯರು ಸಿಗುವುದು ವಿರಳ. ಅಂತವರ ಸಾಲಿನಲ್ಲಿ  *ಡಾ: ಆನಂದ ಮೊಳೇಕರ್* ಒಬ್ಬರು. ಬಡರೋಗಿಗಳ ಪರವಾಗಿ, ನಮ್ಮ ನಿಮ್ಮೆಲ್ಲರ ಪರವಾಗಿ ಅವರಿಗೊಂದು ಮೆಚ್ಚುಗೆ ಇರಲಿ.

ಸಂಪರ್ಕ: ಡಾ:ಆನಂದ ಮೊಳೇಕರ್- 89045 18385

ಇತ್ತೀಚಿನ ಸುದ್ದಿ

ಜಾಹೀರಾತು