11:12 AM Wednesday29 - October 2025
ಬ್ರೇಕಿಂಗ್ ನ್ಯೂಸ್
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುವುದಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ ಭವಿಷ್ಯ Kalburgi | ರಾಘಪುರ ದರ್ಗಾ ಹುಂಡಿ ಕಳವು ಪ್ರಕರಣ: ಮುಧೋಳ್ ಪೊಲೀಸರಿಂದ ಓರ್ವ… New Delhi | ಸೌರ ಗುರಿಸಾಧನೆಯಲ್ಲಿ ಜಿ.20 ರಾಷ್ಟ್ರಗಳ ಪೈಕಿ ಭಾರತವೇ ಮುಂಚೂಣಿ:… ಕೇರಳ ಪ್ರವಾಸಿ ಬಸ್ ಗಳಲ್ಲಿ ಡಿಜೆ ಅಳವಡಿಕೆ: ಶಬ್ದ ಮಾಲಿನ್ಯದ ವಿರುದ್ಧ ಆಕ್ಷೇಪ;… ಕಾಂಗ್ರೆಸ್‌ ಸರ್ಕಾರ ರಸ್ತೆಗಳ ಅಭಿವೃದ್ಧಿ ಮರೆತಿದೆ, ಒಂದು ಲೇಯರ್‌ ಗೆ 4-5 ಸಾವಿರ… ಮತ ಚೋರಿ ತಡೆಗೆ ಕೈ ಕಾರ್ಯಪಡೆ!: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ… Chikkamagaluru | ಚಾರ್ಮಾಡಿ ಘಾಟಿಯಲ್ಲಿ ಕಾರು ಪಲ್ಟಿ: 3 ಮಂದಿ ಪ್ರಾಣಾಪಾಯದಿಂದ ಪಾರು Kodagu | ಸುಂಟಿಕೊಪ್ಪ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ಹೃದಯಘಾತದಿಂದ ದಾರುಣ ಸಾವು ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ…

ಇತ್ತೀಚಿನ ಸುದ್ದಿ

ನಂಜನಗೂಡು: ಲಿಟಲ್ ಚಾಂಪ್ಸ್ ಗುರುಕುಲ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ.

26/08/2024, 17:36

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ಪಟ್ಟಣದ ಒಕ್ಕಲಗೇರಿಯಲ್ಲಿರುವ ಗುರುಕುಲ ಟ್ರಸ್ಟ್ ವತಿಯಿಂದ ಲಿಟಲ್ ಚಾಂಪ್ಸ್ ಗುರುಕುಲ ಶಾಲೆಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲೆಯನ್ನು ಬಣ್ಣ ಬಣ್ಣದ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು
ದಳವಾಯಿ ಪ್ರೌಢಶಾಲೆಯ ಪ್ರಾಧ್ಯಾಪಕರಾದ ಲಲಿತಾ ಮತ್ತು ಶಾಲಾ ಮುಖ್ಯಸ್ಥರಿಂದ ಕೃಷ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕಿ ಲಲಿತ ಮಾತನಾಡಿ, ಮಕ್ಕಳು ಎಳೆಯ ವಯಸ್ಸಿನಿಂದಲೇ ನಯ, ವಿನಯ, ಗುರು ಹಿರಿಯರಿಗೆ ಗೌರವ ನೀಡುವುದರ ಜೊತೆಗೆ ತಮಗೆ ಸಹಾಯ ಹಾಗೂ ಒಳ್ಳೆಯದನ್ನು ಮಾಡಿದವರಿಗೆ ಕೃತಜ್ಞತೆ ತಿಳಿಸುವುದು ಹಾಗೆಯೇ ತಪ್ಪು ಮಾಡಿದರೆ ಕ್ಷಮೆ ಕೇಳುವುದನ್ನು ಕಲಿಯಬೇಕು ದೇವರ ಆಶೀರ್ವಾದದ ಜೊತೆಗೆ ಗುರು ಹಿರಿಯರ ಆಶೀರ್ವಾದವು ಬೇಕು. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸುತ್ತಾ ಕೃಷ್ಣನ ಗೀತೆ ಹಾಡುವ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕಿ ರಜನಿ ರವಿ ಮಾತನಾಡಿ ನಮ್ಮ ಅತ್ತೆ ಮಾವ ಸೇರಿದಂತೆ ನಮ್ಮ ಮನೆಯವರು ಹಾಗೂ ನಮ್ಮ ಶಾಲಾ ಶಿಕ್ಷಕರ ತಂಡ ಮತ್ತು ಎಲ್ಲಾ ಪೋಷಕರ ಸಹಕಾರದಿಂದ ಕಳೆದ 11 ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ ಮುಂದೆಯೂ ತಮ್ಮ ಸಹಕಾರ ಹೀಗೆ ಇರಲಿ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಬಳಿಕ ಚಾಕಲೇಟ್ ತುಂಬಿದ ಮಡಕೆ ಒಡೆಯುವ ಮೂಲಕ ಮಕ್ಕಳಿಗೆ ಮನರಂಜನೆ ನೀಡಲಾಯಿತು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಎಲ್ಲ ಪುಟಾಣಿಗಳಿಗೂ ಬಹುಮಾನ ವಿತರಣೆ ಮಾಡಲಾಯಿತು.
ಶಾಲೆಯ ಪುಟ್ಟ ಪುಟ್ಟ ಮಕ್ಕಳು ಕೃಷ್ಣ , ರುಕ್ಮಿಣಿ, ರಾಧೆಯರ ವೇಷಧಾರಿಗಳಾಗಿ ಮಿಂಚುತ್ತಾ ಪೋಷಕರ ಮನಸೂರೆ ಗೊಂಡರು.
ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕರಾದ ಶ್ರೀಕಂಠಯ್ಯ, ರವಿ ಶ್ರೀಕಂಠಯ್ಯ, ರಜನಿ ರವಿ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು