6:16 PM Thursday24 - September 2026
ಬ್ರೇಕಿಂಗ್ ನ್ಯೂಸ್
ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ

ಇತ್ತೀಚಿನ ಸುದ್ದಿ

ಶಿರಸಿಯ ಕಾಶಿನಾಥ್ ನಾಯ್ಕ್ ಅವರನ್ನು ಭೇಟಿಯಾದ ಚಿನ್ನದ ಹುಡುಗ ನೀರಜ್ ಚೋಪ್ರಾ : ಕನ್ನಡಿಗನನ್ನು ಗುರು ಅಲ್ಲ ಎಂದವರಿಗೆ ಶಿಷ್ಯನಿಂದಲೇ ಉತ್ತರ.!

25/08/2021, 00:35

ಶಿರಸಿ(ReporterKarnataka.com)

ಟೋಕಿಯೋ ಒಲಂಪಿಕ್ಸ್​​ನ ಜಾವೆಲಿನ್ ತ್ರೋದಲ್ಲಿ ಚಿನ್ನದ ಪದಕ ಗಳಿಸಿ ದೇಶದ ಕೀರ್ತಿ ಹೆಚ್ಚಿಸಿದ ನೀರಜ್​ ಚೋಪ್ರಾ ತಮ್ಮ ಮಾಜಿ ಕೋಚ್​ ಕನ್ನಡಿಗ ಕಾಶಿನಾಥ್ ಅವರನ್ನು ಭೇಟಿಯಾಗಿ ತನ್ನ ಸಮಯ ಕಳೆದಿದ್ದಾರೆ.


ಕಾಶಿನಾಥ್ ಅವರ ಪುಣೆಯ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಸೇರಿ ಸಮಯ ಕಳೆದ ನೀರಜ್ ಕಾಶಿನಾಥ್ ಅವರ ಗುರುವಲ್ಲ ಎಂದವರಿಗೆ ಉತ್ತರ ನೀಡಿದ್ದಾರೆ.

ಟೋಕಿಯೋ ಒಲಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾ ಬಂಗಾರದ ಪದಕ ಗೆಲ್ಲುತ್ತಿದ್ದಂತೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬೆಂಗಳೆ ಗ್ರಾಮದ ಕಾಶೀನಾಥ ನಾಯ್ಕ ಹೆಸರು ಪ್ರಖ್ಯಾತಿಗೊಂಡಿತು. ನೀರಜ್​ ಚೋಪ್ರಾಗೆ ಕಾಶಿನಾಥ್​ ಕೂಡ ಈ ಹಿಂದೆ ತರಬೇತಿ ನೀಡಿದ್ದಾಗಿ ತಿಳಿಸಿದ್ದು, ಅವರೊಂದಿಗಿನ ಒಡನಾಟವನ್ನು ಕೂಡ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು.

ಚಿನ್ನದ ಹುಡುಗನ ಪರಿಶ್ರಮದ ಹಿಂದೆ ರಾಜ್ಯದ ಗುರುವಿನ ಪಾತ್ರಕ್ಕೆ ಮೆಚ್ಚಿ ರಾಜ್ಯ ಸರ್ಕಾರ ಕೂಡ ಕೋಚ್​ ಕಾಶಿನಾಥ್​ಗೆ 10 ಲಕ್ಷ ಬಹುಮಾನ ಪ್ರಶಸ್ತಿ ಘೋಷಿಸಿತ್ತು.

ಕಾಶೀನಾಥ್ ನಾಯ್ಕ್ ಕೂಡ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಜಾವೆಲಿನ್ ಥ್ರೋವರ್ ನವದೆಹಲಿಯಲ್ಲಿ 2010ರಂದು ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ವೇಳೆ ಕಾಶೀನಾಥ್ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದಾಗಿ ಒಂದು ವರ್ಷದ ಬಳಿಕ 14 ವರ್ಷ ಪ್ರಾಯದವರಾಗಿದ್ದ ನೀರಜ್ ಚೋಪ್ರಾ ಜೈವೀರ್ ಚೌಧರಿ ಜೊತೆಗೆ ಜಾವೆಲಿನ್ ಎಸೆತದ ಅಭ್ಯಾಸ ಆರಂಭಿಸಿದ್ದರು. ಅಂದ್ಹಾಗೆ ಆವತ್ತು ಕಾಶಿನಾಥ್‌ಗೆ ಸಿಕ್ಕ ಕಂಚಿನ ಪದಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಜಾವೆಲಿನ್‌ ಎಸೆತದಲ್ಲಿ ಸಿಕ್ಕ ಮೊದಲ ಪದಕ. ಅಲ್ಲದೆ, 1982ರ ಏಷ್ಯನ್ ಗೇಮ್ಸ್‌ ಪದಕದ ಬಳಿಕ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕ. ಅಥ್ಲೀಟ್‌ ಆಗಿ ವೃತ್ತಿ ಬದುಕು ಮುಗಿಸಿದ ಬಳಿಕ ಕಾಶಿನಾಥ್ ಕೋಚಿಂಗ್‌ ವೃತ್ತಿಗೆ ಬಂದಿದ್ದರು. 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಾಗ ಗ್ಯಾರಿ ಕ್ಯಾಲ್ವರ್ಟ್ ಜೊತೆಗೆ ಸಹ ಕೋಚ್ ಆಗಿ ಕಾಶಿನಾಥ್ ಅವರೂ ನೀರಜ್‌ಗೆ ಕೋಚಿಂಗ್ ನೀಡುತ್ತಿದ್ದರು. ಈಗ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು