1:06 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಕೊರೊನಾ ಸಂಕಷ್ಟ: ನೊಂದ ಬಡ ಕುಟುಂಬಗಳ ಜತೆ ನಿಂತ ಮಸ್ಕಿಯ ಅಭಿನಂದನ್ ಸಂಸ್ಥೆ

19/05/2021, 15:10

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಮಸ್ಕಿ ಪಟ್ಟಣದಲ್ಲಿ ಕೊರೊನಾ 2ನೇ ಅಲೆಯ ಕಾರಣದಿಂದಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದ ಕಡು ಬಡ ಕುಟುಂಬಗಳಿಗೆ ನೆರವಾಗಲು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಅಭಿಯಾನವನ್ನು ಆರಂಭಿಸಿದೆ.

ಈ ಅಭಿಯಾನದ ಮೂಲಕ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ನೀಡುವ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಗೆ ಬುಧವಾರದಂದು ಮಸ್ಕಿಯ ತಹಸಿಲ್ದಾರ್ ಬಲರಾಮ್ ಕಟ್ಟಿಮನಿ ಹಾಗೂ ಪುರಸಭೆಯ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ್ ಅವರಿಂದ ಚಾಲನೆ ನೀಡಿದರು. ಈ ಸಂದರ್ಭದಲ್ಲಿ

ಮಾತನಾಡಿದ ತಹಸಿಲ್ದಾರ್ ಬಲರಾಮ್ ಕಟ್ಟಿಮನಿ ಅವರು ಅಭಿನಂದನ್ ಸಂಸ್ಥೆಯು ಕಳೆದ ವರ್ಷವೂ ಆಗಿದ್ದಂತಹ ಲಾಕ್ ಡೌನ್ ನಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ಹಾಗೂ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಿದ್ದು, ಅದೇ ರೀತಿಯಾಗಿ ಈ ಬಾರಿಯ ಲಾಕ್ ಡೌನ್ ನಿಂದಾಗಿ ಕಂಗಾಲಾದ ಕುಟುಂಬಗಳಿಗೆ ನೀಡುತ್ತಿರುವುದು ಶ್ಲಾಘನೆಯ ಕಾರ್ಯ.  ಸಂಸ್ಥೆಯ ಎಲ್ಲಾ ಕಾರ್ಯಗಳಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜೀವಗಳಿಗೆ ವೈಧ್ಯಕೀಯ ಚಿಕಿತ್ಸೆ ಕೊಡಿಸಲು ಸಂಸ್ಥೆಯು ಒಪ್ಪಿಕೊಂಡಿತು.  

ಪುರಸಭೆಯ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ್, ಸಿರಸ್ತೇದಾರ ಅಕ್ತರ್, ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಬಸವರಾಜ ಸ್ವಾಮಿ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಮಂಜುನಾಥ ಮಸ್ಕಿ, ಕೀಶೋರ್, ಪವನ್ ಮುಕ್ತಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು