3:37 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಹೈಟಿಯಲ್ಲಿ ಭಾರಿ ಭೂಕಂಪ: 300ಕ್ಕೂ ಅಧಿಕ ಸಾವು?; ಅವಶೇಷಗಳಡಿಯಿಂದ ಬದುಕುಳಿದವರಿಗಾಗಿ ಹುಡುಕಾಟ; ತುರ್ತು ಪರಿಸ್ಥಿತಿ ಘೋಷಣೆ

15/08/2021, 11:23

ಪೋರ್ಟ್ ಔ ಪ್ರಿನ್ಸ್ (reporterkarnataka.com): ಕಳೆದ ಒಂದು ದಶಕದ ಅವಧಿಯಲ್ಲೇ ಅತ್ಯಂತ ಭೀಕರ ಭೂಕಂಪ ಹೈಟಿ ದೇಶದಲ್ಲಿ ಸಂಭವಿಸಿದ್ದು, 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 7.2 ದಾಖಲಾಗಿದೆ. ಅವಶೇಷಗಳಡಿಯಿಂದ ಬದುಕುಳಿದವರಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ಹೈಟಿಯ ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಿಂದ ಪಶ್ಚಿಮಕ್ಕೆ 150 ಕಿಮೀ ದೂರದಲ್ಲಿರುವ ಪೆಟಿಟ್ ಟ್ರೌ ಡಿ ನಿಪ್ಪೆಸ್ ಪಟ್ಟಣದಿಂದ 8 ಕಿಮೀ (5 ಮೈಲಿ ) ದೂರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ. 7.2 ತೀವ್ರತೆಯ ಭೂಕಂಪದ ಸರಣಿ ಭೂಕಂಪ ಸಂಭವಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ ಹೇಳಿದೆ.

ಸುಮಾರು 11 ವರ್ಷಗಳ ಹಿಂದೆ ಕ್ಯೂಬಾ ಮತ್ತು ಜಮೈಕಾ ನಡೆದಲ್ಲಿ ನಡೆದಿದ್ದ ಭೂಕಂಪಕ್ಕಿಂತಲೂ ದೊಡ್ಡದಾದ ಭೂಕಂಪ ಎಂದು ಹೇಳಲಾಗುತ್ತಿದೆ. ಶ ಬೆಳಗ್ಗೆ 8: 30 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಸಾವಿರಾರು ಜನರು ಗಾಯಗೊಂಡಿದ್ದು, ಭೂಕಂಪದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿನ ಆಸ್ಪತ್ರೆಗಳು ಈಗಾಗಲೇ ತುರ್ತು ಆರೈಕೆ ನೀಡಲು ಹೆಣಗಾಡುತ್ತಿವೆ ಮತ್ತು ಕನಿಷ್ಠ ಮೂರು ಪೆಸ್ಟಲ್, ಕೊರೈಲೆಸ್ ಮತ್ತು ರೋಸಾಕ್ಸ್ ಪುರಸಭೆಗಳಲ್ಲಿ ಸಂಪೂರ್ಣವಾಗಿ ತುಂಬಿವೆ ಎಂದು ನಾಗರಿಕ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಜೆರ್ರಿ ಚಾಂಡ್ಲರ್ ಹೇಳಿದ್ದಾರೆ.

ಹೈಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಕಟ್ಟಡಗಳ ಅವಶೇಷಗಳಿಂದ ಜನರನ್ನು ಹೊರತೆಗೆಯುವ ಚಿತ್ರಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ. ಬಹುತೇಕ ಮನೆಗಳು ಕುಸಿದು ಬಿದ್ದಿವೆ ಎಂದು ಎಎಫ್‌ಪಿ ವರದಿ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು