1:15 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಬಾಯ್​ಫ್ರೆಂಡ್​​ ಜತೆ ಸೇರಿ ಹೆತ್ತಬ್ಬೆಯಿಂದಲೇ ನಿತ್ಯ ಮಗು ಮೇಲೆ ದೈಹಿಕ ದೌರ್ಜನ್ಯ: ತಾಯಿ ಹಾಗೂ ಪ್ರಿಯಕರನ ಬಂಧನ

07/03/2024, 11:47

ಮೃದುಲಾ ನಾಯರ್ ಬೆಂಗಳೂರು

info.reporterkarnataka@gmail.com

ಇಡೀ ನಾಡಿನುದ್ದಗಲಕ್ಕೂ ಸುದ್ದಿ ಮಾಡಿದ ಹೆತ್ತಬ್ಬೆಯಿಂದಲೇ 4 ವರ್ಷದ ಪುಟ್ಟ ಕಂದಮ್ಮನ ಮೇಲಿನ ದೈಹಿಕ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ತಾಯಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ತಾಯಿ ಶಾರಿನ್ ಹಾಗೂ ಪ್ರಿಯಕರ ದಿನೇಶ್‌ ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬಾಯ್ ಫ್ರೆಂಡ್ ದಿನೇಶ್​ ಜೊತೆ ಸೇರಿ ತಾಯಿ ಶಾರಿನ್ ತನ್ನ 4 ವರ್ಷದ ಮಗುವಿನ ಮೇಲೆ ಪ್ರತಿ ದಿನಚೂ ಹಲ್ಲೆ ನಡೆಸುತ್ತಿದ್ದಳು. ಮುಗುವಿನ ಮೈ ಮೇಲೆ ಸಾಕಷ್ಟು ಗಾಯದ ಗುರುತುಗಳಿವೆ. ಮಗುವಿನ ಗುಪ್ತಾಂಗಕ್ಕೂ ಗಾಯಗೊಳಿಸಿದ್ದಳು. ಇದೆಲ್ಲ ಯಾರು ಮಾಡಿದ್ದು ಎಂದು ಮಗುವಿನಲ್ಲಿ ಪ್ರಶ್ನಿಸಿದರೆ, ಅಮ್ಮ ಮತ್ತು ಅಂಕಲ್ ಅಂತ ಮಗು ಹೇಳುತ್ತದೆ.
ಇಷ್ಟೇ ಅಲ್ಲದೆ ತಾಯಿ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಹೋದರೆ, ರಾತ್ರಿ
ಬರುತ್ತಿದ್ದಳು. ಕುಡಿಯಲು ಮಗುವಿಗೆ ನೀರು ಕೂಡ ಇಡುತ್ತಿರಲಿಲ್ಲ. ಇದನ್ನು ಕಂಡು ನೆರೆಹೊರೆಯವರು ಮಗುವಿಗೆ ನೀರು, ಆಹಾರ ನೀಡುತ್ತಿದ್ದರು.
ಇನ್ನು ಮಧ್ಯಾಹ್ನ ಮಗುವಿಗೆ ಊಟ ಕೊಡೋಕೆ ಅಂತಾ ಮನೆಗೆ ಬರುತ್ತಿದ್ದ ಮಹಿಳೆಯ ಫ್ರೆಂಡ್ ಕೂಡ ಮಗುವಿಗೆ ಹಲ್ಲೆ ನಡೆಸುತ್ತಿದ್ದ. ತಾಯಿ ಮತ್ತು ಅಂಕಲ್​ ನನಗೆ ಹಲ್ಲೆ ಮಾಡುವುದಾಗಿ ಮಗು ಹೇಳಿಕೊಂಡಿದೆ. ಇನ್ನು ಈ ಘಟನೆ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ.
ಆರೋಪಿ ತಾಯಿ ಶಾರಿನ್ ಗೆ ಈ ಹಿಂದೆ ಶಂಕರ್​ ಎಂಬಾತನ ಜೊತೆಗೆ ವಿವಾಹವಾಗಿತ್ತು. ಆದರೆ ಆಕೆ ಗಂಡನ ಜೊತೆಗೆ ವಾಸಿಸುತ್ತಿರಲಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನ ಮನೆಯಲ್ಲೇ ಕೂಡಿಹಾಕಿ ಹೋಗಿರುವುದಾಗಿ ಹೇಳಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು