10:33 PM Tuesday21 - April 2026
ಬ್ರೇಕಿಂಗ್ ನ್ಯೂಸ್
ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ…

ಇತ್ತೀಚಿನ ಸುದ್ದಿ

ಕೊಂಕಣಿ ಖ್ಯಾತ ಸಾಹಿತಿ ಡಾ. ಜೆರಾಲ್ಡ್ ಪಿಂಟೊಗೆ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿ: ಫೆ.17ರಂದು ಪ್ರದಾನ

02/02/2024, 19:09

ಮಂಗಳೂರು(reporterkarnataka.com):2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ. ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ರಿಚರ್ಡ್ ಮೊರಾಸ್ ತಿಳಿಸಿದರು.


ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.
ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಇದುವರೆಗೆ, ಜೆರಿ ನಿಡ್ಡೋಡಿ ಅವರ 6 ಕಾದಂಬರಿಗಳು, 75 ಕತೆಗಳು ಹಾಗೂ 900ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಕುಡ್ಮಿ ಕೊಂಕ್ಣಿ ಲೋಕ್‌ವೇದ್’ ಎಂಬ ಸಂಶೋಧನಾ ಗೃಂಥ ಹಾಗೂ ‘ವಿಸಾವ್ಯಾ ಶೆಕ್ಡಾö್ಯಚೆ ಕೊಂಕ್ಣಿ ಮ್ಹಾನ್ ಮನಿಸ್’ ಎಂಬ ಕೃತಿಯನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸಿದ್ದಾರೆ. ಅವರು ಬರೆದ ಇನ್ನಿತರ ಪುಸ್ತಕಗಳಲ್ಲಿ ತುಜೆಂ ಶಿಕಾಪ್, ತುಜಿ ವೃತ್ತಿ, ಗ್ಯಾಲಕ್ಸಿ, ವಿಶ್ವ್ ವಿಜ್ಞಾನ್ ಪ್ರಮುಖವಾಗಿವೆ.
ಅವರಿಗೆ ಕೊಂಕ್ಣಿ ಕುಟಮ್ ಬಾಹ್ರೇಯ್ನ್ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬಾಯ್, ದಿವೊ ಸಾಹಿತ್ಯ ಪ್ರಶಸ್ತಿ ಲಭಿಸಿವೆ.
‘ರಾಕ್ಣೊ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕರಾಗಿ, ‘ಮಿಲಾರ್‌ಚಿಂ ಲ್ಹಾರಾಂ’ ತ್ರೈ ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ಉಡುಪಿಯಲ್ಲಿ ‘ಕೊಂಕ್ಣಿ ಭಾಸ್, ಸಾಹಿತ್ಯ್ ಕಲಾ ಅನಿ ಸಾಂಸ್ಕೃತಿಕ್ ಸಂಘಟನ್’ ಎಂಬ ಸಂಘಟನೆಯನ್ನು ಸ್ಥಾಪಿಸಿ ಅನೇಕ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಎಂ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 17, 2024ನೇ ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು
ಪತ್ರಿಕಾಗೋಷ್ಠಿಯಲ್ಲಿ ಡೊಲ್ಫಿ ಎಫ್. ಲೋಬೊ( ಸಮಿತಿ ಸದಸ್ಯರು)
ಹೆನ್ರಿ ಮಸ್ಕರೇನ್ಹಸ್(ಸಮಿತಿಸದಸ್ಯರು)ಜೆ.ಎಫ್.ಡಿಸೋಜಾ(ಸಲಹಾ ಸಮಿತಿ ಸದಸ್ಯರು) ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು