8:56 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಚಳ್ಳಕೆರೆ: ಹಸು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವಾಹನವನ್ನು ಬೆನ್ನಟ್ಟಿ ಜಾನುವಾರು ರಕ್ಷಿಸಿಕೊಂಡ ರೈತ ನಾಗರಾಜು

18/12/2023, 12:25

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿಯ ನಂದಾಪುರ ನಗರದ ರೈತ ನಾಗರಾಜ್ ಅವರ ಹಸುವನ್ನು ಯಾರೂ ಕಳ್ಳರು ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಕದ್ದು ಪರಾರಿಯಾಗಲು ಯತ್ನಿಸಿದು, ನಾಗರಾಜ್ ಅವರ ಕುಟುಂಬದ ಸಮಯಪ್ರಜ್ಞೆಯಿಂದ ಹಸುವನ್ನು ಕದ್ದು ಪರಾರಿಯಾಗುತ್ತಿದ್ದ ವಾಹನವನ್ನು ಹಿಂಬಾಲಿಸಿ ತಮ್ಮ ಹಸುವನ್ನು ರಕ್ಷಿಸಿ ಕೊಂಡಿದ್ದಾರೆ.
ಹಸುವನ್ನು ಕದ್ದು ಪರಾರಿಯಾಗುತ್ತಿದ್ದ ವಾಹನದ ಶಬ್ದವನ್ನು ಕೇಳಿದ ರೈತ ನಾಗರಾಜ್ ಮತ್ತು ಮಗ ಮಂಜುನಾಥ್ ಅಳಿಯ ಲೋಕೇಶ್ ಗಾಬರಿಯಿಂದ ಎಚ್ಚರಗೊಂಡು. ಲೋಕೇಶ್ ಅವರ ಗೆಳೆಯರ 2 ಕಾರಿನಲ್ಲಿ ಹಸುವನ್ನು ಕದ್ದು ಪರಾರಿ ಆಗುತ್ತಿದ್ದ, KA51-AA-6295 ವಾಹನವನ್ನು 15 ಕಿಲೋಮೀಟರ್ ಚೇಂಜ್ ಮಾಡಿದು, ಗೋಪನಹಳ್ಳಿಯ ಬಿಎಸ್ಎನ್ಎಲ್ ಆಫೀಸಿನ ಹತ್ತಿರ ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯು ಶನಿವಾರ ತಡರಾತ್ರಿ ನಡೆದಿದೆ.


ಮಧ್ಯರಾತ್ರಿ 12:50 ರಲ್ಲಿ ವಾಹನದಲ್ಲಿ ಕಳ್ಳರನ್ನು ಹಿಡಿಯಲು ಕಿರುಚಿಕೊಂಡು ಬಂದ ಕಾರಿನವರ ಶಬ್ದ ಕೇಳಿ ಬಂದಂತ ಕೆಆರ್‌ಎಸ್ ಪಕ್ಷದ ಮಣಿಕಂಠ, ರೈತರು ಜೀವನಕ್ಕೆ ಹಸುಗಳನ್ನು ಸಾಕುತ್ತಿದ್ದಾರೆ. ಆದರೆ ಸರ್ಕಾರದ ಸಬ್ಸಿಡಿಯ ಮೂಲಕ ವಾಹನವನ್ನು ಪಡೆದು ದುರ್ಬಳಕೆ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಸಾರಿಗೆ ಸಚಿವರೇ, ಇಂತಹ ಅಹಿತಕರ ಘಟನೆಗಳು ನಡೆಯದಂಗೆ ಸೂಕ್ತ ಕ್ರಮ ಕೈಗೊಳ್ಳಿ ರೈತರನ್ನು ರಕ್ಷಿಸಿ ಎಂದು ಹೇಳಿ.112 ಪೊಲೀಸರಿಗೆ ಮಾಹಿತಿ ನೀಡಿ ಹಸುವನ್ನು ಕದ್ದು ತಂದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು